ಒಲವಿನೋಲೆ
ನಿನಗೆಂದೇ ಒಲವಿನೋಲೆ
ಗೀಚುವ ತರಾತುರಿ ಹೆಚ್ಚಿದೆ
ನನ್ನೀ ಬೆರಳಲಡಗಿರುವ
ಲೇಖನಿಗೀಗ ಸಖಿ.,
ನಿನ್ನ ಆ ಮುದ್ದು ಮೊಗವು
ಕಂಡಾಗಿನಿಂದ ನನಗರಿವಿಲ್ಲದೆ
ಲೇಖನಿಯೂ ಅದರುವುದು
ಅಕ್ಷರ ಪೋಣಿಸಲು.,
ಕನಸುಗಳ ಹೆಣೆದು
ಕಂಗಳಲ್ಲೇ ಅವಿತಿರುವ
ನನ್ಮನದ ಚಿಂತಕಿ ನೀ.,
ಬಹುದಿನದ ಬೇಡಿಕೆಯೊಂದು
ಬತ್ತಳಿಕೆಯಲ್ಲೇ ಬಸವಳಿದು
ಹೂ ಬಾಣವಾಗಿ ನಿನ್ನೆದೆಯ
ಅಂಗಳ ಸೇರಲು ಕಾದಿಹುದು.,
ತುಸು ತಡವಾದರೂ ಸರಿ
ನನ್ನೀ ಕೋರಿಕೆಯನು
ಸ್ವೀಕರಿಸಿ ವಸಿ ಮುಗುಳುನಗೆ
ರವಾನಿಸು ಗೆಳತಿ.,
ಜತನದಿ ಜೋಪಾನವಾಗಿಸಿ
ಜೋಗುಳ ಹಾಡುತ
ನನ್ನೆದೆಯ ಉಸಿರಾಗಿಸುವೆ
ಕೊಡುವೆಯಾ ನೀ ಸಮ್ಮತಿ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞
ಗೀಚುವ ತರಾತುರಿ ಹೆಚ್ಚಿದೆ
ನನ್ನೀ ಬೆರಳಲಡಗಿರುವ
ಲೇಖನಿಗೀಗ ಸಖಿ.,
ನಿನ್ನ ಆ ಮುದ್ದು ಮೊಗವು
ಕಂಡಾಗಿನಿಂದ ನನಗರಿವಿಲ್ಲದೆ
ಲೇಖನಿಯೂ ಅದರುವುದು
ಅಕ್ಷರ ಪೋಣಿಸಲು.,
ಕನಸುಗಳ ಹೆಣೆದು
ಕಂಗಳಲ್ಲೇ ಅವಿತಿರುವ
ನನ್ಮನದ ಚಿಂತಕಿ ನೀ.,
ಬಹುದಿನದ ಬೇಡಿಕೆಯೊಂದು
ಬತ್ತಳಿಕೆಯಲ್ಲೇ ಬಸವಳಿದು
ಹೂ ಬಾಣವಾಗಿ ನಿನ್ನೆದೆಯ
ಅಂಗಳ ಸೇರಲು ಕಾದಿಹುದು.,
ತುಸು ತಡವಾದರೂ ಸರಿ
ನನ್ನೀ ಕೋರಿಕೆಯನು
ಸ್ವೀಕರಿಸಿ ವಸಿ ಮುಗುಳುನಗೆ
ರವಾನಿಸು ಗೆಳತಿ.,
ಜತನದಿ ಜೋಪಾನವಾಗಿಸಿ
ಜೋಗುಳ ಹಾಡುತ
ನನ್ನೆದೆಯ ಉಸಿರಾಗಿಸುವೆ
ಕೊಡುವೆಯಾ ನೀ ಸಮ್ಮತಿ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞