...

11 views

ಹುಡುಗಿ

ಮನದಲಿ ಸಾವಿರಾರು ನೋವುಗಳು
ಆದರೂ ಮುಖದಲ್ಲಿ ಸಂತಸದ ನಗೆ.. ತನ್ನ ನೋವುಗಳನ್ನು ಮರೆಮಾಚಿ ಬೆರೆಯವರ ನಗುವಿನ ಕಾರಣವಾಗುವ ಬಯಕೆ ಹೊಂದಿರುವ ಮುಗ್ಧ ಜೀವ...ಎಲ್ಲರ ಕಣ್ಣಿಗೆ ಜಗತ್ತಿನ ಅತ್ಯಂತ ಸಂತೋಷದ ಹುಡುಗಿ ಆದರೆ ಆ ಹುಡುಗಿಗೆ ಮಾತ್ರ ಗೊತ್ತು ಅವಳ ಜೀವನದ ರಹಸ್ಯ...
ಎಲ್ಲರ ಜೀವನದ ನೋವುಗಳನ್ನು ತನ್ನ ಮಕ್ಕಳಂತಹ ವರ್ತನೆ ಇಂದ ಆದಷ್ಟು ಕಡಿಮೆ ಮಾಡುತ್ತಾ ಸದಾ ಮುಖ ದಲ್ಲಿ ನಗು ,ಮಾತಿನಲ್ಲಿ ಎಲ್ಲರ ಹೃದಯ ಗೆಲ್ಲುವ ಶಕ್ತಿ ಹೊಂದಿರುವ ಈ ಹುಡುಗಿಗೆ ಸ್ನೇಹಿತರೇ ಪ್ರಪಂಚ...
ಸಾವಿರಾರು ನೋವುಗಳೋಂದಿಗೆ ಸಾವಿರಾರು ಕನಸುಗಳೂ ಇವೆ... ಆದರೆ ಅದೆಲ್ಲ ಈಡೆರುವುದು ಸುಲಭವಲ್ಲ... ತನ್ನ ನೋವು ನಲಿವುಗಳಲ್ಲಿ ಸದಾ ಶ್ರೀ ಕೃಷ್ಣ ಪರಮಾತ್ಮ ನನ್ನೆ ನಂಬಿ ಆತ ನನ್ನ ಕೈ ಬಿಡಲಾರ ಎಂದು ಮುನ್ನಡೆಯುವ ಈಕೆ ಮುಂದೆ ಏನಾದರೂ ಸಾಧಿಸಬಲ್ಲ ಳೇ???