...

24 views

ಗಝಲ್..
ಗಝಲ್
*******

ನಿನ್ನಯ ಬರುವಿಕೆಗಾಗಿ ಹಣತೆ ಹಚ್ಚಿಟ್ಟು ಕಾಯುತಿರುವೆ ಇನಿಯ
ಕತ್ತಲ ರಾತ್ರಿಯ ಕನವರಿಕೆಗಳ ಮಲಗಿಸಿ ನಲಿಯುತಿರುವೆ ಇನಿಯ.,

ಸಿಂಗರಿಸಿಕೊಂಡ ದರ್ಪಣಕೂ ಬಟ್ಟೆ ಹೊದ್ದಿಸಿ ಕೂತಿರುವೆ ಗೆಳೆಯ
ನೀನಗಾಗಿಯೇ ಈ ವನಪು ವಯ್ಯಾರವ ಮೀಸಲಿಟ್ಟಿರುವೆ ಇನಿಯ.,

ತಡಮಾಡದೆ ನನ್ನೀ ಹೃದಯದ ಕದ ತಟ್ಟೆಂದು ಕೋರುವೆ ಒಡೆಯ
ವಜ್ರ ವೈಢೂರ್ಯಗಳೂ ಭಾರವಾಗಿ ನಿನ್ನನೇ ಕೂಗುತಿವೆ ಇನಿಯ.,

ನೆನಪುಗಳೂ ನೊಗ ಭಾರವಾದಂತೆ ಹೆಚ್ಚೆಚ್ಚು ನರಳುತಿವೆ ಬಾರೆಯ
ಆಸೆಗಳ ಆಲಂಗಿಸಿ ಸಂತೈಸಲು ನಿನ್ನ ಬಾಹು ಬಯಸುತಿವೆ ಇನಿಯ.,

ಮೊಗತೋರಿ ನಗುಕಾಣಲು ನಾಳೆಗಳು ಅಣಿಯಾದಂತಿವೆ ಕೇಳೆಯ
ಮನಗಳ ಸೇರಿಸಿ ವಾಲಗ ಊದಿಸಲು ಅನುಮತಿ ಕೇಳಿವೆ ಇನಿಯ...

#Kannada #kannadapoem #vijaykumarvm #ವಿಬೆಣ್ಣೆ #ಗಝಲ್
© ವಿಜು ✍ 💞