...

5 views

ರವಿಬೆಳಗೆರೆ ಜೀಗೆ ದೀಪನಮನ
"ದೀಪನಮನ"
ಭಾವಪೂರ್ಣ ಶೃದ್ಧಾಂಜಲಿ
ಭೃಂಗಿಮಠ ಅವರ ರಚನೆಬೆಳೆಗೆರೆ ಜೀ ಗೆ ಕಾವ್ಯ ನಮನ*
(ಕವಿ:ಭೃಂಗಿಮಠ)

ತಳದಿಂದ ಬಾನೆತ್ತರದ
ಪತ್ರಿಕಾಲೋಕದಿ ಬೆಳೆದೆ
ಅಕ್ಷರ ಪೋಣಿಸಿದ ಸುದ್ದಿಯ ಸಾರ ನೀಡಿದೆ

ವಿಭಿನ್ನತೆಯ
ವಿಚಾರದಿ
ಹೊಸತು ಸೃಷ್ಠಿಸಿದೆ
ಖಾಸ್ ಬಾತ್ ಹೇಳಿ ಸರ್ವರಿಗೂ ಖಾಸ್ ಆದೆ

ಮೂಲಾಜೀ ಇಲ್ಲದೇ
ಬದುಕ ಪಯಣಗೈದೆ
ಸಮಾಜ ಘಾತುಕ ಶಕ್ತಿಯ
ಸದೆಬಡೆಯಲೆತ್ನಿಸಿದೆ

ಓ ಮನಸ್ಸಿನ‌ ಮೂಲಕ ಸರ್ವಮನಗೆದ್ದೆ
ಅನಾಥ ಸಾವಿರಾರು ಮಕ್ಕಳಿಗೆ
ಶಿಕ್ಷಣ ಕೊಡಿಸಿದೆ
ಪಾಪಿಗಳ ಲೋಕದ ಜಾತಕ ಬರೆದೆ
ಭೀಮಾತೀರದ ರಕ್ತದೋಕುಳಿಯ ಚರಿತ್ರೆ ಬರೆದೆ

ನಟನಾಗಿ ಅಭಿನಯಕ್ಕೂ ಸಹಿ ಎನಿಸಿದೆ
ಪತ್ರಕರ್ತರ ಎದೆಗಾರಿಕೆಗೆ ಸಾಕ್ಷಿಯಾದೆ
ಕೆಲಸ ಮಡ್ತೀನಿ ದುಡಿತೀನಂತ ಹೊರಟು
ದುಡ್ಡೂ ಹೆಸರು ಮಾಡಿದೆ

ಬಾಟಮ್ ಐಟಮ್ ನಲ್ಲಿ ಮಾತನಾಡಿದೆ...