...

18 views

😢 😢
ಅತ್ತಿತ್ತ ನೋಡುತ್ತಾ
ಮೇವನ್ನು ಅರಸುತ್ತಾ
ಬಂತೊಂದು ಗರ್ಭಿಣಿ ಆನೆ
ಕಾಡನ್ನು ಬಿಟ್ಟು
ಗಜನಡೆಯನಿಟ್ಟು
ಬಂದಿತು ನಮಲ್ಲಿ ನಂಬಿಕೆಯನಿಟ್ಟು
ಮನುಜನಾ ವೇಷದಲಿ
ದನುಜನು ಮೆರೆಯುತಿರಲು
ಅದ ತಿಳಿಯದ ಗಜವು
ತಿಂದಿತು ಸಿಡಿಮದ್ದು ತುಂಬಿದ್ದ ಹಣ್ಣನ್ನು
ಅದ ತಟ್ಟನೆ ತಿನ್ನಲು
ಅದು ಫಟ್ಟನೆ ಸಿಡಿಯಲು
ಏನಾಯಿತೆಂದರಿಯದೆ ತತ್ತರಿಸಿ ಬಿತ್ತು
ಗರ್ಭದಲ್ಲಿದ್ದ ಮರಿಯನ್ನು ನೆನೆದು
ಗಾಬರಿಗೊಂಡು ಸೊಂಡಿಲನು ಹೊಟ್ಟೆಯಲ್ಲಿದ್ದ ಮರಿಯ ಮೇಲ್ ಸವರುತ್ತ ಹೇಳಿತು
ಕೂಸೇ ನೀ ಬರುವ
ನಿನ್ನ ಜೊತೆ ಕುಣಿದು ಮೆರೆವ
ಕನಸನ್ನು ಹೊತ್ತು
ಮಾಡಿದೆ ಈ ತಪ್ಪು
ಕ್ಷಮಿಸೆನ್ನ ಕಂದ
ನಾ ಕಂಡ ಕನಸು ಮುರಿದದ್ದಲ್ಲದೆ
ನೀ ಕಣ್ತೆರೆವ ಮುನ್ನವೇ
ನಿನ್ನ ಸ್ವಪ್ನಗಳನ್ನೂ ಮುರಿದ ಪಾಪಿ ನಾ ಎಂದಿತು
ಅಳಬೇಡ ಅಮ್ಮಾ
ನಿನ್ನ ಸೊಂಡಿಲನು ಹಿಡಿದು ನಡೆಯಲು
ಎತ್ತಿ ಬರುವೆ ಮರು ಜನ್ಮ
ನನ್ನ ಜೊತೆ ನೀನಿರಲು
ನಾಕವೋ ನರಕವೋ
ಖುಷಿಯಿಂದ ನಲಿವೆ
ಆದರೊಂದು ಪ್ರಶ್ನೆ ಕೇಳಲೇ ನಾನು?
ಇವೆಲ್ಲದರಲ್ಲಿ ನಾ ಮಾಡಿದ ತಪ್ಪೇನು?