...

2 views

"ಪ್ರೀತಿಯ ಉಡುಗೊರೆ....
#AnticipatingLove"ಪ್ರೀತಿಯ ನಲ್ಲೆ
ಕಾದಿಹೆ ನಾನಿಲ್ಲೇ

ಮನದಲಿ ನೂರು ಆಸೆ
ಹೇಳಲು ನನ್ನಾಸೆ

ಚಡಪಡಿಕೆಯಲಿ
ಪುಳಕವು ಮೈಯಲಿ

ಸೋತಿಹೆ ನಿನಗಾಗಿ
ಈ ದಿನ ನಾನು

ಪ್ರೀತಿಸಿ ನೋಡು
ನನ್ನೊಮ್ಮೆ ನೀನು

ಬಳಿಗೆ ಬಾರೆಯಾ
ಪ್ರೇಮದಿ ವರಿಸೆಯಾ

ಕೇಳದೆ ನನ್ನ ಈ
ಮೊರೆಯಾ

ಆತುರವು ನನ್ನಲಿ
ಅಚ್ಚರಿಯು ನಿನ್ನಲಿ

ನಿನಗಾಗಿ ಉಡುಗೊರೆಯ
ತಂದಿಹೆನು ತಿಳಿದೆಯಾ

ಪ್ರೇಯಸಿಯ ಬರುವಿಕೆಗೆ
ಕಾದಿರುವೆ ಬಲ್ಲೆಯಾ

ಉಡುಗೊರೆಯು ನಿನಗೆ
ನೀಡು ನೀ ಒಪ್ಪಿಗೆ

ನನ್ನಯ ಪ್ರೀತಿಗೆ
ನೀನಾದೇ ದೀವಿಗೆ..,✍
💘shobha⚘💍