ಜಡೆಕವನ
ಪದವಿರದ ಮೌನ ಕವನದ ಸಾಲುಗಳು ನೀನಾದೆ
ನೀನಾದೆ ನನ್ನೆದೆಯ ವೇದನೆಯ ಕವನಕೆ ಕಾರಣ
ಕಾರಣವಿಲ್ಲದೆ ನೀನೇಕೆ ಮೌನಿಯಾದೆ ನನ್ನೊಲವೆ
ನನ್ನೊಲವ ನೀನರಿಯದೆ ಮೂಕ ರಾಗವ ಹಾಡಿದೆ
ಹಾಡೊಂದ ಗುನುಗುವ ಸಮಯ ಪದಗಳ ಮರೆತೆ
ಮರೆತ ಮನದಿ ಸಾಲುಗಳಾಗಿ ಅವಿತು ಕವನವಾದೆ
ಕವನಕೆ ರಾಗ ಸಂಯೋಜಿಸದೆ ಸಂಬಂಧ ತೊರೆದೆ
ತೊರೆದು ಹೋಗುವ ವೇಳೆಯಲಿ ನನ್ನೇಕೆ ದೂರಿದೆ
ದೂರುತ ಹೃದಯಕಿಂದು ಗಾಯ ಮಾಡಿ ಹೋದೆ
ಹೋದುದಕೆ ಕಾರಣ ಹೇಳದೆ ನನ್ನ ನೋಯಿಸಿದೆ
ನೋಯಿಸುವ ನಿನ್ನಾ ನೆನೆಪು ಮತ್ತೆ ಮತ್ತೆ ಕಾಡಿದೆ
ಕಾಡಿದ ಕ್ಷಣಗಳು ಕಂಗಾಲಾಗಿ ಕಂಬನಿ ಸುರಿಸಿವೆ
ಸುರಿವ ಕಂಬನಿಯೂ ಕಾರಣ ಕೇಳುತ ಸೊರಗಿವೆ
ಸೊರಗಿದ ಸ್ವರಕೆ ಉಸಿರಾಗಲು ನಿನ್ನೇ ಬಯಸಿವೆ
ಬಯಸಿದ ಬದುಕಿಗೆ ಪದವಾಗು ಬಾ ನನ್ನೊಲವೆ
ನೀ ಪದವಾದರೆ ಕವನವಾಗಿ ನಾ ನಿನ್ನಾವರಿಸುವೆ
ನಿನ್ನಾವರಿಸಿ ನೀ ಹಾಡುವ ಹಾಡಿಗೆ ಸಾಲಾಗುವೆ
ಸಾಲುಗಳಲಿ ಮೆರಗುವ ಪದವಾಗಿ ಪಲ್ಲವಿಸುವೆ
ಪಲ್ಲವಿಸುವ ಪಲ್ಲವಿಯಾಗಿ ರಾಗದಿ ಬೆರೆಯುವೆ
ಬೆರೆತು ಬಾಳುವ ಪ್ರತಿ ಕ್ಷಣಕೆ ಕನ್ನಡಿಯಾಗುವೆ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞
ನೀನಾದೆ ನನ್ನೆದೆಯ ವೇದನೆಯ ಕವನಕೆ ಕಾರಣ
ಕಾರಣವಿಲ್ಲದೆ ನೀನೇಕೆ ಮೌನಿಯಾದೆ ನನ್ನೊಲವೆ
ನನ್ನೊಲವ ನೀನರಿಯದೆ ಮೂಕ ರಾಗವ ಹಾಡಿದೆ
ಹಾಡೊಂದ ಗುನುಗುವ ಸಮಯ ಪದಗಳ ಮರೆತೆ
ಮರೆತ ಮನದಿ ಸಾಲುಗಳಾಗಿ ಅವಿತು ಕವನವಾದೆ
ಕವನಕೆ ರಾಗ ಸಂಯೋಜಿಸದೆ ಸಂಬಂಧ ತೊರೆದೆ
ತೊರೆದು ಹೋಗುವ ವೇಳೆಯಲಿ ನನ್ನೇಕೆ ದೂರಿದೆ
ದೂರುತ ಹೃದಯಕಿಂದು ಗಾಯ ಮಾಡಿ ಹೋದೆ
ಹೋದುದಕೆ ಕಾರಣ ಹೇಳದೆ ನನ್ನ ನೋಯಿಸಿದೆ
ನೋಯಿಸುವ ನಿನ್ನಾ ನೆನೆಪು ಮತ್ತೆ ಮತ್ತೆ ಕಾಡಿದೆ
ಕಾಡಿದ ಕ್ಷಣಗಳು ಕಂಗಾಲಾಗಿ ಕಂಬನಿ ಸುರಿಸಿವೆ
ಸುರಿವ ಕಂಬನಿಯೂ ಕಾರಣ ಕೇಳುತ ಸೊರಗಿವೆ
ಸೊರಗಿದ ಸ್ವರಕೆ ಉಸಿರಾಗಲು ನಿನ್ನೇ ಬಯಸಿವೆ
ಬಯಸಿದ ಬದುಕಿಗೆ ಪದವಾಗು ಬಾ ನನ್ನೊಲವೆ
ನೀ ಪದವಾದರೆ ಕವನವಾಗಿ ನಾ ನಿನ್ನಾವರಿಸುವೆ
ನಿನ್ನಾವರಿಸಿ ನೀ ಹಾಡುವ ಹಾಡಿಗೆ ಸಾಲಾಗುವೆ
ಸಾಲುಗಳಲಿ ಮೆರಗುವ ಪದವಾಗಿ ಪಲ್ಲವಿಸುವೆ
ಪಲ್ಲವಿಸುವ ಪಲ್ಲವಿಯಾಗಿ ರಾಗದಿ ಬೆರೆಯುವೆ
ಬೆರೆತು ಬಾಳುವ ಪ್ರತಿ ಕ್ಷಣಕೆ ಕನ್ನಡಿಯಾಗುವೆ..
#Kannada #Kannadaquote #vijaykumarvm #ವಿಬೆಣ್ಣೆ
© ವಿಜು ✍ 💞