...

3 views

ದೇವ್ರು...
ರಾಮ ರಾಮಾ.... ಶ್ರೀ ಹರಿ ಮಹಾದೇವಾ ನಾರಾಯಣ ಆದಿಶಕ್ತಿ ಜಗದಂಬೆ ಗಣೇಶಾ ಚಾಮುಂಡೇಶ್ವರಿ ಮಾರುತಿರಾಯಾ ಕೃಷ್ಣ ಕೃಷ್ಣಾ... ಅಬ್.... ... ಏನು? ಸಾಕಾ ಅಲ್ಲ ಇನ್ನೂ ಇದಾವೆ. ಹೌದು ಹೌದು ಮೂರು ಕೋಟಿ ಇದಾವೆ. ಪ್ರತಿಯೊಂದು ದೇವರನ್ನೂ ಒಲಿಸಿಕೊಳ್ಳಲು ಭಾರಿ ಭಕ್ತಿ ಮತ್ತು ಶ್ರದ್ಧೆ ಬೇಕು ಅಂದಾಗಲೇ ನೀನು ದೇವರನ್ನು ಒಲಿಸಿಕೊಳ್ಳಲು ಸಾಧ್ಯ.

ಸರಿ ಹಾಗಿದ್ರೆ ನೀನೇ ಹೇಳು ಮೂರು ಕೋಟಿ ದೇವತೆಗಳಲ್ಲಿ ಯಾವ ದೇವತೆ ಅತಿ ಹೆಚ್ಚು ಶಕ್ತಿ ಉಳ್ಳವರು?

ಇಲ್ಲ ಎಲ್ಲಾ ದೇವತೆಗಳೂ ಸಮಾನ ಶಕ್ತಿ ಉಳ್ಳವರು. ಎಲ್ಲರೂ ಸಮಾನ.

ಮತ್ತೆ ಯಾವ ದೇವತೆಯನ್ನ ನಾನು ಪೂಜಿಸಬೇಕು..?

ಯಾವ ದೇವತೆ ಅಂದ್ರೆ..? ಎಲ್ಲರನ್ನೂ .

ಹಾಗಿದ್ರೆ ಒಂದೊಂದೇ ದಿನ ಒಂದೊಂದೇ ದೇವರನ್ನ ಪೂಜಿಸಿದ್ರೂ ಸಾಯುವುದರೊಳಗೆ ಒಟ್ಟು ಮೂರು ಲಕ್ಷ ಅರವತ್ತೈದು ಸಾವಿರ ದೇವತೆಗಳ ಪೂಜೆ ಮಾಡೋಕೆ ಸಾಧ್ಯ. ಅದೂ ಹುಟ್ಟಿದ ದಿನದಿಂದಲೇ ನೆನೆಯುತ್ತ ಬರಬೇಕು ಮತ್ತೆ ಪೂರ್ತಿ ಒಂದು ನೂರು ವರ್ಷ ಬದುಕಬೇಕು.
ಇಷ್ಟೆಲ್ಲ ಮಾಡಿದ್ರೂ ಎರಡು ಕೋಟಿ ತೊಂಬತ್ತ ಆರು ಲಕ್ಷ ಮೂವತ್ತೈದು ಸಾವಿರ ದೇವತೆಗಳು ಉಳಿತಾವೆ. ಅವುಗಳಲ್ಲಿ ಒಂದಾದರೂ ದೇವರು ದಿನನಿತ್ಯ ಪೂಜಿಸದಿದ್ದರೆ ಕೋಪ ಮಾಡ್ಕೊಂಡು ಶಾಪ ಗಿಪ ಕೊಡೋಲ್ವೆ. ಆಗ ಕೊಡೋಕೆ ಬಂದ್ರೂ ಅಂತ ಇಟ್ಕೋ ಅವಾಗ ಕಾಪಾಡೋಕೆ ಬರೋದು ನಾವು ಪೂಜಿಸುವಂತಹ ದೇವರು. ಹಾಗಿದ್ರೆ ದೇವರುಗಳ ಮದ್ಯೆ ಜಗಳ ತಂದಿಡೋಕೆ ಕಾರಣ ನಾವೇ ಅಲ್ವೇ. ಅಥವಾ ನಾನು ಪೂಜಿಸದಿದ್ದರಿಂದ ಆ ಮುನಿದ/ಪೂಜಿಸಿಕೊಳ್ಳದ ದೇವರಿಗೂ ನನಗೂ ಸಂಬಂಧವೇ ಇಲ್ಲ ಅನ್ನುತ್ತಿಯಾ. ಅಂದರೆ ಆಯಾ ದೇವತೆಗಳಿಗೆ ಆಯಾ ಭಕ್ತರುಗಳ ಸಪರೇಟ್ ಗುಂಪಿದೆ ಅಂತಿಯಾ?

ನಿಂಗ್ಯಾರು ಹೇಳಿದ್ದು ಎಲ್ಲಾ ದೇವರನ್ನೂ ಒಂದೇ ಸಮಯಕ್ಕೆ ಪೂಜಿಸಲು ಸಾಧ್ಯ ಇಲ್ಲ ಅಂತ.

ಸರಿ ಆಯ್ತು. ಪೂಜಿಸಬಹುದು. ಇನ್ನೊಂದು ಹೇಳು ದೇವರನ್ನ ಯಾಕೆ ಪೂಜಿಸಬೇಕು?
ಇನ್ಯಾತಕ್ಕೆ ಒಳ್ಳೇದು ಆಗೋಕೆ. ನಮ್ಮ ಬದುಕು ಒಳ್ಳೆತನದಿಂದ ಒರುವುದಕ್ಕೆ. ನಮಗ್ಯಾವುದೂ ತೊಂದರೆ ಆಗದೆ ಇರಲಿ ಅಂತ.

ಹಾಗಿದ್ರೆ ದೇವರನ್ನ ಪೂಜಿಸಿದ್ರೆ ಒಳ್ಳೆದಾಗುತ್ತೆ ಇಲ್ಲ ಅಂದ್ರೆ ಒಳ್ಳೆದಾಗೋಲ್ಲ ಅಂತಿಯಾ?. ಅಂದ್ರೆ ಒಟ್ಟಿನಲ್ಲಿ ನಾವು ಏನೋ ಒಂದು ಬೇಡುವುದಕ್ಕೆ ದೇವರನ್ನು ಪೂಜಿಸುವುದು ಅಂತ ಅರ್ಥ.
ಹಾಗಿದ್ರೆ ನಾವು ಬೇಡಿದ್ರೆ ಮಾತ್ರ/ಬೇಡಿದ್ದನ್ನ ಮಾತ್ರ ದೇವರು ಕೊಡ್ತಾನಾ? ನಾನೆಂದೂ ಚಿಕ್ಕವನಿದ್ದಾಗ ದೇವರನ್ನ "ನಾನು ಬೆಳೆಯಲಿ" ಎಂದು ಬೇಡಿಕೊಂಡಿಲ್ಲ ಆದರೂ ಬೆಳೆದೆ. ಮತ್ತೆ "ನಾನು ಎದ್ದು ನಿಂತು ನಡೆಯಲಿ" ಎಂದು ಬೇಡಿಕೊಳ್ಳಲಿಲ್ಲ ಆದರೂ ಎದ್ದು ನಿಂತು ನಡೆಯಲು ಶುರು ಮಾಡಿದೆ. ಎಂದೂ "ನಂಗೆ ಮಾತು ಬರಲಿ" ಎಂದು ಬೇಡಿಕೊಳ್ಳಲಿಲ್ಲ ಆದರೂ ನಾನು ಮಾತನಾಡಲು ಕಲತೆ. ಮತ್ತಿದೆಲ್ಲ ಹೇಗೆ ಸಾಧ್ಯ.

ಅರೇ ಅದನ್ನೆಲ್ಲ ಕೇಳಿಕೊಳ್ಳಲು ಸಾಧ್ಯವಾ? ಬೆಳೆಯುವುದು, ನಡಿಯುವುದು, ಮಾತನಾಡುವುದು, ಇದೆಲ್ಲ ಮಾನವ ಸಹಜ ಗುಣಗಳು ಅಲ್ಲವಾ. ಮತ್ತೆ...