...

4 views

ಪತ್ನಿಯೇ ಪತಿಯ ಸರ್ವಸ್ವ
ಪತ್ನಿಯೇ ಪತಿಯ ಸರ್ವಸ್ವ

ರಾತ್ರಿಯ ಸುಮಾರು ಎಂಟು ಗಂಟೆಯ ಸಮಯದಲ್ಲಿ ಪತ್ನಿಯ ಜೊತೆ ಚಿಕ್ಕ ವಿಷಯಕ್ಕೆ ಜಗಳಾಡುತ್ತಾ ಮನೆಯ ಹತ್ತಿರದಲ್ಲಿದ್ದ ಬೀಡಂಗಡಿಗೆ ಹೊರಡುವಾಗ ನಾನು ಮನಸಲ್ಲೇ ಯೋಚಿಸಿದೆ - ಇವತ್ತಿನ ರಾತ್ರಿ ಆಕೆ ಒಬ್ಬಳೇ ಮಲಗಲಿ. ಆಗ ಮಾತ್ರ ಆಕೆಗೆ ಬುದ್ಧಿ ಬರುತ್ತೆ...

ಅಂಗಡಿಯ ಮುದಿ ವಯಸ್ಕನಾದ ರಾಮಣ್ಣನಿಂದ ಒಂದು ಸೋಡಾ ಕೊಡಲು ಹೇಳುತ್ತಾ, ದೂರದಲ್ಲಿರುವ ಮನೆಯ ಮಂದ ಬೆಳಕನ್ನು ನೋಡುತ್ತಾ ನಿಂತೆ...

ಸೋಡಾ ಕೊಡುತ್ತಾ ಆ ವೃದ್ಧ ಕೇಳುತ್ತಾರೆ - ಯಾವತ್ತೂ ಈ ಸಮಯದಲ್ಲಿ ನೀನು ಬರುತ್ತಿರಲಿಲ್ಲವಲ್ಲಾ ಮುಖ ನೋಡಿದರೆ ಏನೋ ಬೇಜಾರಲ್ಲಿ ಇದ್ದಿ ಅನಿಸುತ್ತೆ. ಏನಾಯಿತು?

ನನ್ನ ಪತ್ನಿಯ ಪ್ರತಿದಿನದ ಕಿರಿಕಿರಿ ನಿಲ್ಲುತ್ತಲೇ ಇಲ್ಲ... ಏನಾದರೂ ಕಾರಣ ಹುಡುಕಿ ದಿನಂಪ್ರತಿ ಜಗಳಾಡುತ್ತಾಳೆ...

ತಾನು ಅನುಭವಿಸಿ ಬಂದ ಹಾದಿಯಲ್ಲೇ ಇವನ ಯಾತ್ರೆ ಕೂಡಾ ಅಂತ ರಾಮಣ್ಣನಿಗೆ ಅನಿಸಿತು...

ಆ ವೃದ್ಧನಾದ ರಾಮಣ್ಣ ಹೇಳುತ್ತಾರೆ - ನೋಡು ತಮ್ಮಾ ನನ್ನ ಪತ್ನಿ ತೀರಿಕೊಂಡು ಎಂಟು ವರ್ಷಗಳಾಯಿತು. ನಾವೂ ಕೂಡಾ ನಿಮ್ಮ ಹಾಗೇನೇ ಇದ್ದೆವು...
ಆಕೆ ಹೋದ ನಂತರವೇ ಆಕೆಯ ಬೆಲೆ ನನಗೆ ಗೊತ್ತಾದದ್ದು...

ಅಷ್ಟು ಹೇಳುವಾಗ ಆ ವೃದ್ಧನ ಕಂಠ ಗದ್ಗರಿತವಾಗುವುದನ್ನು ಮತ್ತು ಕಣ್ಣಿನಿಂದ ಎರಡು ಹನಿ ಕಣ್ಣೀರನ್ನು ಒರೆಸುತ್ತಿರುವುದನ್ನು ನಾನು ಗಮನಿಸದೆ ಇರಲಿಲ್ಲ...

ನೀನು ಒಂದು ಬಾರಿ ಯೋಚಿಸಿ ನೋಡು... ನಿನ್ನ ಪತ್ನಿಯಿಲ್ಲದ ಆ ನಿನ್ನ ಜೀವನದ ಕುರಿತು...

ಆ ವೃದ್ಧನ ಉಪದೇಶದ ಮಾತುಗಳು ನನ್ನ ಮನಸಿಗೆ ಒಂದು ಸಿಡಿಲಿನ ಶಬ್ದದಂತೆ ಮೊಳಗುತ್ತಾ ಪ್ರತಿಧ್ವನಿಸುತ್ತಿತ್ತು... ಹತ್ತು ಹಲವು ಚಿಂತೆಗಳು ನನ್ನನ್ನು ಕಾಡ ತೊಡಗಿತು...

ಆಕೆಯು ನನಗೋಸ್ಕರ ಪ್ರತಿದಿನ ಮಾಡುತ್ತಿರುವ ಸೇವೆ, ಶ್ರಮ ಮತ್ತು ಕಾಳಜಿಯ ಬಗ್ಗೆ, ನನ್ನ ಆಯಸು,ಆರೋಗ್ಯಕ್ಕಾಗಿ ಹರಕೆ ಪ್ರಾರ್ಥನೆಗಾಗಿ ಪ್ರತಿದಿನ ದೇವಸ್ಥಾನಕ್ಕೆ ಹೋಗುವವಳು....
ನನ್ನನ್ನು ಆಕೆಯ ಹೃದಯಗೂಡಿನಲ್ಲಿ ಕಾಯ್ದಿರಿಸಿದವಳು...

ಹೀಗೆ ತುಂಬಾ ನೆನಪುಗಳಲವು ಕ್ಷಣಮಾತ್ರದಲ್ಲಿ ಮನವನ್ನು ಸೀಳುತ್ತಾ ಹಾದು ಹೋದವು... ಕಣ್ಣಿಂದ ಕಣ್ಣೀರು ಸುರಿಯಲಾರಂಬಿಸಿದವು... ಸೋಡಾದ ದುಡ್ಡನ್ನು ಕೊಟ್ಟು, ಸರಸರನೆ ಮನೆಯಕಡೆ ನಡೆದೆ...

ದೂರದಿಂದಲೇ ನೋಡಿದೆ ನನ್ನಾಕೆಯು ನನಗಾಗಿ ಕಾಯುತ್ತಾ ಬಾಗಿಲಬಳಿಯೇ ಕುಳಿತಿದ್ದಳು...

ನನ್ನನ್ನು ನೋಡಿದ ಕೂಡಲೇ ಆಕೆ - ಯಾಕೆ ರೀ.. ಈ ಚಳಿಯ ಸಮಯದಲ್ಲಿ ಜಾಕೆಟ್ ಧರಿಸದೆ, ತಲೆಯಲ್ಲಿ ಟೋಪಿ ಹಾಕದೆ ಹೊರಗಡೆ ಹೋದದ್ದು? ಈಗ ಸಂಜೆಯಿಂದಲೇ ಮಂಜು ಬೀಳಲು ಆರಂಭಿಸುತ್ತೆ ಅಂತ ಗೊತ್ತಿಲ್ಲವೇ...? ಈಕೆ ನನ್ನ ಮೇಲೆ ಎಷ್ಟೊಂದು ಕಾಳಜಿವಹಿಸುತ್ತಿದ್ದಾಳೆ ಎಂಬುದು ಆಕೆಯ ಮಾತಿನಿಂದಲೇ ಅರ್ಥಮಾಡಿಕೊಂಡೆ... ನಾನು ಕೇಳಿದೆ - ನೀನು ಯಾಕೆ ಜಾಕೆಟ್ ಏನೂ ಧರಿಸದೆ ಇಲ್ಲಿ ಕಾಯುತ್ತಿರುವೆ...?

ಅಷ್ಟರಲ್ಲಿ ನಮ್ಮಿಬ್ಬರ ಮಧ್ಯೆ ಒಂದು ತಂಗಾಳಿಯು ಬೀಸುತ್ತಾ ಪ್ರಣಯಗೀತೆಯನ್ನು ಹಾಡಲಾರಂಬಿಸಿತು...

ಆ ನಿಮಿಷದಲ್ಲಿ ನಾವು ಕಣ್ಣುಗಳಿಂದ ಪ್ರಣಯಿಸುತ್ತಿದ್ದೆವು...

ಪ್ರತಿ ದಿನದ ಆರಂಭಿಸುವುದು ನಮ್ಮ ಮುಂದಿನ ಪೀಳಿಗೆಗೆ ಹೊಸ ಹೊಸದಾಗಿ ನಾವುಗಳು ಅನೇಕ ರೀತಿಯಲ್ಲಿ ಮಾನಸಿಕ,ದೈಹಿಕ,ಅರ್ಥ
ಸ್ಥಿತಿ-ಗತಿ ಅನುಕೂಲ ಮಾಡಿಕೊಡುವ ಶಕ್ತಿಯು ದಾಂಪತ್ಯ ನಂತರ ಪೂಷಕರಗಿಯು ಕೇವು ಸುಶ್ಮಾ ವಿಚಾರಗಳಲ್ಲಿ ಸಾಮಾಜಿಕವಾಗಿ ಘನತೆ ಗೌರವ ಪ್ರತಿಷ್ಠೆಯನ್ನು ಕಾಪಾಡಿ ಕೊಂಡು ಜೀವನದ ಸಾಮರಸ್ಯ ಉಳಿಸಿ ಇದರೆ ಮಾತ್ರ ನಮ್ಮ ಮುಪಿನ ಕಾಲಕ್ಕೆ ಮಕ್ಕಳು ನಮ್ಮನು ಪ್ರೀತಿ ವಾತ್ಸಲ್ಯ ಮಮತೆಯಿಂದ ನೋಡುವರು ಗೆಳೆಯರೇ ಮಾನವ ಜನ್ಮ ಶ್ರೇಷ್ಠ ಜನ್ಮ ದಯವಿಟ್ಟು ತಪ್ಪುಗಳಿಗೆ ಕ್ಷಮೆ ಇರಲಿ ಸರಿದಾರಿಗೆ ತರುವ ಉತ್ತಮ ಗುಣದ ಮನಸಿರಲಿ ನಮಸ್ಕಾರ.....

(ದಾಂಪತ್ಯ ಅಂದರೆ, ಅದಕ್ಕೊಂದು ಪವಿತ್ರತೆಯಿದೆ... ಪರಿಶುದ್ಧವಾದ ಪ್ರೀತಿ ವಿಶಾಸವಿದೆ... *ಅದರಲ್ಲಿ ಎರಡು ಮನಸುಗಳ ಬಂಧನವಿದೆ... ಸುಖ, ಸಂತೋಷ, ನೆಮ್ಮದಿ ಎಲ್ಲವೂ ಅಡಗಿದೆ...
ಅದು ಎಲ್ಲರ ಜೀವನದಲ್ಲೂ ಶಾಶ್ವತವಾಗಿ ನೆಲೆಸುವಂತೆ ದೇವರು ಕರುಣಿಸಲಿ...

ಚಂದು ವಾಗೀಶ ದಾವಣಗೆರೆ