...

4 views

ಪ್ರೀತಿಯೆಂಬ ಮಾಯಾವಿ😬
ಪ್ರೀತಿಯ ಮೋಡಿಯೊಳಗೆ ಸಿಲುಕಿಸಿ
ಕಲ್ಯಾಣಕ್ಕೆ
ಸೇತುಬಂಧವಾಗಿದ್ದುದು.....

ಪ್ರೀತಿ, ಒಂತರ ವಿಚಿತ್ರ ಪ್ರಕಾರ... ಎಲ್ಲಿ?ಯಾವಾಗ?ಹೇಗೆ?ಹುಟ್ಟುತ್ತದೆ ಎಂಬ ಅರಿವೇ ಇರದಂತೆ ಜನ್ಮ ತಾಳಿಬಿಡುತ್ತದೆ...ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿ ಇರುತ್ತಾರಂತೆ...ಜೋಡಿ ಆದರೆ ನಿಜ ಎನ್ನಬಹುದು.. ಅಕಾಸ್ಮಾತ್ ಆಗಿ ಜೋಡಿಯಾಗಿ ಜೀವನ ಪರ್ಯಂತ ಹೆಜ್ಜೆ ಹಾಕಲಾಗದೇ,ಕಾರಣಾಂತರಗಳಿಂದ ಬ್ರೇಕಪ್ ಆಯಿತೆಂದರೆ,ಎಲ್ಲೋ ಲೂಸ್ ಕನೆಕ್ಷನ್ ಅದು..😬ಋಣ ಇಲ್ಲ ಎಂದೇ ತಿಳಿಯಬೇಕು...

ನಾವು ಪ್ರೀತಿಸಿದ್ದು,ನಂತರ ಹಿರಿಯರ ಒಪ್ಪಿಗೆ ಮೇರೆಗೆ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟದ್ದು ಒಂದು ವಿಚಿತ್ರ ರೀತಿಯಲ್ಲಿ...ಈ ಜೀವನದ ಸಾಂಗತ್ಯದಲಿ,ಏಳು-ಬೀಳು,ಸೋಲು-ಗೆಲುವು,ನೋವು-ನಲಿವು, ಸುಖ-ದುಃಖ,ಎಲ್ಲವನ್ನೂ ಬೇವು ಬೆಲ್ಲದಂತೆ ಸಮನಾಗಿ ಸವಿದಿದ್ದೇವೆ.ಹಾಗೇ ನಮ್ಮ ಈ ಅನುಬಂಧಕ್ಕೆ ಸೇತುಬಂಧವಾಗಿದ್ದ ಮುಖ್ಯ ಅತಿಥಿಯೊಂದಿಗೆ ಹಾಜರಾಗಿರುವೆ. 😀.ಹ್ಮ..ಯಾರವರು?ಕುತೂಹಲವಾ?ಬನ್ನಿ ಪರಿಚಯಿಸಿ ಕೊಡುವೆ..ನಮ್ಮ ಲವ್ ಸ್ಟೋರಿಯ ಪ್ರಯಾಣಕ್ಕೆ ಸುಸ್ವಾಗತ😊.

ಕೆಲವೊಮ್ಮೆ ನಿರ್ಜೀವ ವಸ್ತು ಕೂಡಾ ನಮ್ಮ ಬದುಕಿಗೆ ಟರ್ನಿಂಗ್ ಪಾಯಿಂಟ್ ನೀಡಬಹುದು.. ನಿಜ..ನನ್ನ ಬದುಕಿನಲ್ಲಿ ಅಕ್ಷರಶಃ ಸತ್ಯವಿದು. ನನ್ನ ಮತ್ತು ನನ್ನವರ ಒಂದು ಮಾಡಿದ್ದು ...ಅಡಿಕೆ ಹಾಳೆ.ನಮ್ಮ ಮನೆಯಲ್ಲಿ ಅಡಿಕೆ ಹಾಳೆಯಿಂದ ಪ್ಲೇಟ್ ತಯಾರಿಸುವ ಮಷಿನ್ ಇತ್ತು. ಅದಕ್ಕಾಗಿ ಅಡಿಕೆ ಹಾಳೆಗಳು ತುಂಬಾ ಬೇಕಾದುದರಿಂದ,ಯಜಮಾನರು,ಊರು,ಊರಿಗೆ ತೆರಳಿ,ಅಡಿಕೆ ಹಾಳೆ ಖರೀದಿಸುತ್ತಿದ್ದರು.ಹಾಗೇ ನಮ್ಮ ಊರಿಗೂ ಬಂದು ಖರೀದಿ ಮಾಡಿದ್ದರು,ನಮ್ಮ ಮನೆಗೂ ಕೂಡ ಬಂದಿದ್ರು..ಆಗಲೇ ನನ್ನ ನೋಡಿದ್ದರವರು.😃.ಆದರೆ ಹಾಳೆ ಜೊತೆ ನಾನು,ಅವರ ಬಾಳಿಗೆ ಆಯ್ಕೆ ಆಗಿರೋದು ನನಗೆ ಗೊತ್ತೇ ಆಗಲಿಲ್ಲ..😀.
ಎರಡು ವರ್ಷಗಳ ಕಾಲ ನಮ್ಮ ಪ್ರೀತಿ ನಿರಂತರವಾಗಿ,ಒನ್ ವೇ ಆಗಿ ನಡೆದಿತ್ತು...😬😂 ನನ್ನ ಅರಿವಿಗೆ ಬಂದದ್ದು ಒಂದು ವರ್ಷದ ನಂತರ...ಪಾಪ,ನನ್ನವರು ಮನಸಿನಲ್ಲೇ ಒಲವಿನಿಂದ ನನ್ನ ಆರಾಧಿಸುತ್ತಿದ್ದರು 😬❤️
ಋಣಾನುಬಂಧ ರೂಪೇಣ,ಪತಿ,ಪತ್ನಿ ಸುತಾಲಯಃ !ನಿಜ ಅಲ್ವಾ?ಋಣ ಇದ್ದರೆ ನಮಗೆ ಅರಿವೆ ಇಲ್ಲದೆಯೂ ನಮ್ಮನ್ನು ಯಾವುದೊ ಒಂದು ಕಾರಣ ಸಿಕ್ಕು,ಒಂದು ಕಡೆ ಸೇರಿಸಿ ಬಿಡುತ್ತದೆ.. ಹಾಗೇ ನನಗೂ ನನ್ನ ಬದುಕಿಗೆ ,ಒಬ್ಬ ಉತ್ತಮ ಸ್ನೇಹಿತ, ಉತ್ತಮ ಮಾರ್ಗದರ್ಶನ ನೀಡುವ , ತಾಯ್ಮನದಂತಹ ಸಂಗಾತಿ ನೀಡುವಲ್ಲಿ ಅಡಿಕೆ ಹಾಳೆ ಕಾರಣವಾಯಿತು..ಆಶ್ಚರ್ಯವಾದರೂ ಇದು ಸತ್ಯ ಕಣ್ರೀ😃.
ಅದಿಕ್ಕೆ ಅಡಿಕೆ ಹಾಳೆಯ ಜೊತೆಯಲ್ಲಿ ನಮ್ಮ ಪೋಟೋ... ಉಪಕಾರ ಮಾಡಿದವರು ಯಾರಾದರೇನು?ವಸ್ತುವೇ ಆಗಿರಲಿ,ಮನುಷ್ಯನೇ ಆಗಿರಲಿ.ಕೃತಜ್ಞತೆ ಹೇಳುವುದು ನಮ್ಮ ಸಂಸ್ಕೃತಿ.... ನನ್ನ ದೃಷ್ಟಿಯಲ್ಲಿ ಅಡಿಕೆ ಹಾಳೆ ಅದೊಂದು ವಸ್ತು ಅಲ್ಲ. ಅದೊಂದು ಪೂಜ್ಯನೀಯ ನನಗೆ. ಕಾರಣ ನನ್ನ ಬದುಕಿಗೊಂದು ಅರ್ಥ ನೀಡಿದ,ನನಗೊಂದು ಬಾಳ ಬಂಗಾರವ ಉಡುಗೊರೆ ನೀಡಿದ.....ಅನರ್ಘ್ಯ ರತ್ನವದು.....
.❤️ಪೂರ್ವವಾಹಿನಿ❤️
© All Rights Reserved