...

7 views

Healthy Discussion part 1
ಈ ದಪ್ಪ ಆಗುವುದರ ಬಗ್ಗೆ:

ವರುಷ ಮೂವತ್ತು ಕಳೆದ ಮೇಲೆ ಹಾರ್ಮೋನಿನಲ್ಲಿ ಒಂದಷ್ಟು ಬದಲಾವಣೆ ಕಂಡು
ದಪ್ಪ ಆಗುವುದು, loose muscles, ಬೊಜ್ಜು ಬರುವುದು ಸರ್ವೇ ಸಾಮಾನ್ಯ. ನಿಮಗೆ ಮದುವೆಯಾಗಿರಲಿ, ಇಲ್ಲದೆಇರಲಿ, ಮಗು ಇರಲಿ ಇಲ್ಲದೇ ಇರಲಿ, ಹೊಟ್ಟೆ ಭಾಗದಲ್ಲಿ, ತೊಡೆ ತೋಳಿನ ಭಾಗದಲ್ಲಿ ಮುಖದಲ್ಲಿ ನೀರು ಬರುವುದು ನಾವು ಕಾಣಬಹುದು.

ಹಾಗಾಗಿ ಟೆನ್ಶನ್ ಮಾಡಿಕೊಳ್ಳುವುದು ಏಕೆ?

ಟೆನ್ಶನ್ ಆಗುತ್ತದೆ. ಯಾವಾಗ‌ ನನ್ನ ಲೈಫ್ ನನ್ನ ಆಯ್ಕೆ ಎಂದು ಹೊರಟವರಿಗೆ ಟೆನ್ಶನ್ ಆಗುತ್ತದೆ.
ಕೆಲವರ ಜೀವನ ಇನ್ನೊಬ್ಬರು ಕರ್ಕೊಂಡು ಹೋದಂತೆ ಇರುತ್ತದೆ. ಅಂದರೆ ಹಿರಿಯರು ಹೇಳಿದ ಹಾಗೆ ನಡೆದುಕೊಳ್ಳುತ್ತಾರೆ. ಅದೇ ಕೆಲವರು ತಮ್ಮದೇ ರೂಲ್ಸ್ ನಲ್ಲಿ ಬದುಕುತ್ತಿರುತ್ತಾರೆ..

ಮದುವೆ ವಯಸ್ಸು : 18 -21
ಆದರೆ ಈಗ ಹೆಣ್ಮಕ್ಕಳೇ 26 ರ ಮೇಲೆ ಮದುವೆಯಾಗುತ್ತಿದ್ದಾರೆ.
ಮೊದಲೆಲ್ಲ 22/ 23 ವಯಸ್ಸಿಗೆ ಒಂದು ಮಗುವಾದರೂ ಜನಿಸುತ್ತಿತ್ತು. ಆದರೆ ಈಗ 27/30 ಆಗಿದೆ.

ಈಗೇನೋ ಬಿಸಿ ರಕ್ತ ನಿಮ್ಮ ಲೆಕ್ಕಚಾರ ಚೆನ್ನಾಗಿ ನಡೆಯಬಹುದು.
ಆದರೆ ನಿವೃತ್ತಿ ಜೀವನ ನಿಮಗೆ ನೆಮ್ಮದಿಯಿಂದ ಕೂಡಿರದೇ ಇರಬಹುದು.
ಆಯಸ್ಸು ಮುಗಿದುಹೋಗಲೂ ಬಹುದು.
ಯಾರಿಗೆ ಗೊತ್ತು.??

27 ಕ್ಕೆ ಒಂದು ಮಗುವಾದರೆ 54 ವಯಸ್ಸಿನಲ್ಲಿ ನಿಮ್ಮ ಮಗಳಿಗೆ 27 ವಯಸ್ಸಾಗುತ್ತದೆ. ಆಗ ನಿಮ್ಮ ಗಂಡನಿಗೆ58 ವಯಸ್ಸು ದಾಟಿರಬಹುದು.
suppose ಮೂವತ್ತಾದರೂ ಮಗು ಜನಿಸಲೇ ಇಲ್ಲ ಎಂದಾಗ ಎಷ್ಟು ಟೆನ್ಶನ್ ಅಲ್ಲವೇ?
ಜೊತೆಗೆ ಬೊಜ್ಜು ಬಂದರೆ??
ಅಥವಾ ಆರೋಗ್ಯಪೂರ್ಣ ಮಗು ಜನಿಸದೇ ಹೋದರೆ ಎಷ್ಟು ಟೆನ್ಶನ್..
ಎಳೆ ವಯಸ್ಸಿನಲ್ಲಿ ಅಂದರೆ 22 ವಯಸ್ಸಿಗೆ ಇರುವ ಉತ್ಸಾಹ ಶಕ್ತಿ ಆಸಕ್ತಿ ಮುಗ್ಧತೆ 27 ನೇ ವಯಸ್ಸಿನ ಹೆಣ್ಮಕ್ಕಳಿಗೆ ಇರುವುದಿಲ್ಲ. ಅವರು ದುಡಿಯುವವರು. ಹಣ ಸಂಪಾದನೆ ಲೆಕ್ಕಾಚಾರ ಆರ್ಥಿಕ ಏರುಪೇರು ಎಲ್ಲ ನೋಡಿ ವ್ಯಾವಹಾರಿಕವಾಗಿ ಯೋಚಿಸುತ್ತಿರುತ್ತಾರೆ.
ಮದುವೆ ಎನ್ನುವುದು ಕೂಡ ಲೆಕ್ಕಚಾರದ ಮೇಲೆ ನಡೆಯುತ್ತದೆ. ಹಾರ್ಮೋನಿನಲ್ಲಿ ವ್ಯತ್ಯಾಸ ಸರಿಯಾದ ರೀತಿಯಲ್ಲಿ ಪೌಷ್ಟಿಕಾಹಾರ ಸೇವನೆ ಮಾಡದೇ ಇರುವುದು, ಕಾಫಿ ಟೀ ಜಾಸ್ತಿ ಸೇವಿಸುವುದು, ನಿದ್ದೆ ಸರಿಯಾಗಿ ಮಾಡದೇ ಇರುವುದು, ಪೀರಿಯಡ್ ತಿಂಗಳಿಗೂ ಆಗುತ್ತದಾ? ಇಲ್ಲವಾ? ಎಂದು ಗಮನಿಸದೇ ಇರುವುದು...
ನಂತರದಲ್ಲಿ ಮದುವೆಯಾದ ಮೇಲೆ ಹೊಂದಾಣಿಕೆ ಕೊರತೆ, ಮಗು ಬೇಕೋ ಬೇಡವೋ? ಎಂಬ ಪ್ರಶ್ನೆ.
ಮಗು ಬೇಕೆಂದರೆ ಯಾರು ನೋಡಿಕೊಳ್ಳುವರು ಎಂಬ ಪ್ರಶ್ನೆ..
ಪ್ರಮೋಷನ್ ,ಸಾಲರಿ ಹೈಕ್, ಪ್ರಾಜೆಕ್ಸ್ ಬದಲಾವಣೆ ,ವಿದೇಶ ಪ್ರಯಾಣ ಎಂಬೆಲ್ಲ ಲೆಕ್ಕಾಚಾರದಲ್ಲಿ ಮಗು ಎಂಬುದು ಹೊರೆಯಾಗಿ ಭಾಸವಾಗುತ್ತದೆ. ಒತ್ತಡಕ್ಕೆ ಸಿಲುಕಲೂ ಬಹುದು.

ಲಕ್ಷ ಲಕ್ಷ ದುಡಿಮೆಯ ನಿಲ್ಲಿಸಲು ಯಾರಿಗೆ ತಾನೆ ಮನಸ್ಸಾಗುತ್ತದೆ...

ತ್ಯಾಗ ಒಂದಷ್ಟು sacrifice ಮಾಡದೇ‌ಹೋದರೆ ಮಗುವಿಗೆ ಭವಿಷ್ಯ ಕೊಡಬಹುದು ಆದರೆ ಅದರ ಸುಂದರ ಮುಗ್ಧ ಬಾಲ್ಯವನ್ನು ಕೊಡಲು ಸಾಧ್ಯವಾಗದು.

ಯೋಚನೆ ಮಾಡಿ : ನಿಮಗೆ ಮೂವತ್ತು ವರುಷ ವಾಗುವಾಗ ನಿಮ್ಮ ಮಗುವಿಗೆ 2/3 ವರ್ಷ ಆಗಿದ್ದರೆ ಅದನ್ನು ನೋಡಿಕೊಳ್ಳುವುದಾ? ಜಾಬ್ ನಲ್ಲಿ ಪ್ರಮೋಷನ್ ಪ್ರಾಜೆಕ್ಟ್ ವರ್ಕ್ ಮೇಲೆ ಗಮನ ಹರಿಸುವುದಾ?? ಅದೇ ಬೇಗ ಮಗು ಜನಿಸಿದ್ದರೆ ಅವಲಂಬನೆ ಇಲ್ಲದೇ ಆ‌ ಮಗು ಸ್ಕೂಲ್ ಗೆ ಹೋಗಿ ಬರುತ್ತಿರುತ್ತದೆ. ನೀವು ನಿಮ್ಮ ವೃತ್ತಿಯಲ್ಲಿ ಗಮನಹರಿಸಬಹುದು.

ಮಧ್ಯ ವಯಸ್ಸಿಗೆ ಕಾಲಿಡುವ ಸಮಯದಲ್ಲಿ ಹೆಚ್ಚೆಚ್ಚು ದುಡಿಯಬೇಕು, ಹಣ ಸಂಪಾದಿಸಬೇಕು ಎಂಬ ಆಸೆಯಿರುವಾಗ Healing ಆರೈಕೆ ಹೇಗೆ ಮಾಡಲು ಸಾಧ್ಯ. ಕೆಲಸದವರಿಗೆ ಹೇಳಿ, ಡೇ ಕೇರ್ ಗೆ ಸೇರಿಸಿದರೂ ಚಿಂತೆ ತಪ್ಪುವುದಿಲ್ಲ. ಅದಕ್ಕೆ ಹೇಳುವುದು ಲೆಕ್ಕಚಾರ ತಪ್ಪುತ್ತದೆ ಎಂದು.



ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava