...

5 views

ಅಕ್ಷರ ಯುದ್ಧ.. ಟಿಪ್ಪು
ಇಷ್ಟಕ್ಕೂ ನಿಮ್ಮ ಹೀರೋ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಯಾವುವು..? ಕರ್ನಾಟಕದ ಸುಪುತ್ರ ಎಂದು ಹೊಗಳಲು ಆತ ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಯಾವುದು..? ಪರ್ಷಿಯನ್ ಭಾಷೆಯ ಹೇರಿಕೆಯೇ..?

ಅದನ್ನು ಡಾ. ಭೈರಪ್ಪನವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ ಎನ್ನುತ್ತಾರೆ ಭೈರಪ್ಪ. ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ ಭಾಷೆಯನ್ನು ತಂದವರಾರು..? ಕಂದಾಯ ಇಲಾಖೆಯಲ್ಲಿ ಹಾಸುಹೊಕ್ಕಾಗಿರುವ ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮಲ್ದಾರ, ಶಿರಸ್ತೇದಾರ ಈ ಪದಗಳು ಎಲ್ಲಿಂದ ಬಂದವು..?

ಯಾಮ್‍ಸುಬ(ಕರಾವಳಿ ಭಾಗಕ್ಕೆ),...