...

13 views

ಸಂಸ್ಕೃತಿ.......🙏
ಅಲ್ಲ, ಹೆಂಗಸರಲ್ಲಿ ಇರೋ ಒಂದು ಗುಣ ಆದರೂ ನಿನ್ನಲ್ಲಿ ಇದೆಯಾ?ಅಂತ ನನ್ನವರು ನನ್ನ ಪ್ರಶ್ನೆ ಮಾಡಿದಾಗ ಒಮ್ಮೆ ತಬ್ಬಿಬ್ಬಾದೆ😁👧ಯಾಕೆ ಹಿಂಗ್ ಹೇಳ್ತಾ ಇದಾರಪ್ಪಾ ಅಂತ..ನನ್ನ ಹೆಂಡತಿ ಗ್ರೇಟ್ ಅಪ್ಪಾ...ಯಾರ ತಂಟೆ ,ತಕರಾರಿಗೂ ಹೋಗಲ್ಲ.ಹೆಂಗಸರ ಪಂಚಾಯಿತಿ ಕಟ್ಟೆ ಸೇರಲ್ಲ,ಪಕ್ಕದ ಮನೆಯವರ ಸುದ್ದಿ ಇರಲಿ,ಪಕ್ಕದ ಮನೆಯಲ್ಲಿ ಯಾರಿದಾರೆ ಅಂತಾನು ಇಣುಕಿ ನೋಡಲ್ಲ ಅಂತ ಪ್ರಶಂಸೆ ಮಾಡಿದಾಗ ,ಖುಷಿಯಿಂದ ನಿರಾಳವಾಗಿ ಉಸಿರು ಚೆಲ್ಲಿದೆ😁😂..ಯಾಕೆಂದರೆ ಗಂಡ ಹೊಗಳೋಕು, ಹೆಂಡತಿ ಅಷ್ಟು ಪುಣ್ಯ ಮಾಡಿ ಬಂದಿರಬೇಕು😁😂ಹಾಗೆ,ಸುಲಭವಾಗಿ ಹೆಂಡತಿಯನ್ನು ಹೊಗಳಲಾರರು ನಮ್ಮ ಪತಿದೇವರು😁
ಏನ್ ಇಷ್ಟು ಚಿಕ್ಕ ವಿಷಯ.. ಇಷ್ಟು ದೊಡ್ಡದಾಗಿ ಹೇಳ್ತಾ ಇದೀರಲ್ಲ ಅಂತ ನಗಬೇಡಿ😂😁ಇಲ್ಲೇ ಇದೆ ..ಮ್ಯಾಟ್ರು😊😃..ಎರಡು ಜಡೆ ಸೇರಿದರೆ,ಜಗಳ...ಹೆಂಗಸರ ಬಾಯಿ ರಹದಾರಿ ಇದ್ದಂತೆ.. ಗುಟ್ಟು ಏನೂ ನಿಲ್ಲಲ್ಲ ಅನ್ನೋ ಗಾದೆ ಮಾತಿಗೂ ಸೆಡ್ಡು ಹಾಕಿ ,ನಾನಿದೀನಿ ಅಂತ ಭೋ ಖುಷಿ ನಂಗೆ ..😁😝.
ಹ್ಮ...ಇದು ನನ್ನ ಅಮ್ಮ ನನಗೆ ಕಲಿಸಿದ ಅಚ್ಚುಕಟ್ಟಿನ ಸಂಸ್ಕೃತಿ.. ಮೊದಲಿನಿಂದಲೂ ಅಷ್ಟೇ ನಾನು...ನಾನಾಯಿತು,ನನ್ನ ಪಾಡಾಯಿತು ಅಂತಲೇ ಬದುಕಿದವಳು..ಯಾರ ಬದುಕಿನ ಬಗೆಗೂ ಕೆಟ್ಟ ಕುತೂಹಲ ತಾಳಲಾರೆ.ವಯಸ್ಸಿನ ಬೇಧ ಇಲ್ದೇ ತುಂಬಾ ಹೃನ್ಮನಗಳು ತಮ್ಮ ಕಷ್ಟ ಸುಖ ಹೇಳಿಕೊಂಡು ನಿರಾಳರಾಗ್ತಾರೆ..ಅದು ನನ್ನ ಒಂದು ಕಿವಿಯೊಳಗೇ ಸಮಾಧಿ ಆಗುತ್ತದೆಯೇ ವಿನಃ ,ಇನ್ನೊಂದು ಕಿವಿಗೆ ತಲುಪದು😁😃ನನ್ನ ಶಕ್ತಿ ಮೀರಿ,ಸಮಾಧಾನ ಹೇಳುವೆ ಪ್ರಾಮಾಣಿಕವಾಗಿ.. ಯಾರ ವೈಯಕ್ತಿಕ ಹಿತಾಸಕ್ತಿ ನನಗೆ ಇಲ್ಲ.. ಅವರು ಹೇಳಿದಷ್ಟು ಮಾತ್ರ ನಾನು ಕಿವಿಯಾಗುವೆ..ಎಷ್ಟೇ ಆಪ್ತತೆ ಇರಲಿ..ಅವರನ್ನು ಕೆದಕಿ ,ಕೆದಕಿ,ಕೇಳುವ ಅಭ್ಯಾಸ ಮೊದಲಿನಿಂದಲೂ ಇಲ್ಲ😃

ನಾನು ಚಿಕ್ಕವಳು ಅಂದ್ರೆ, ನಾಲ್ಕೈದು ವರ್ಷದವಳು ಇರಬಹುದೇನೋ..ಆಗಷ್ಟೇ ತಿಳುವಳಿಕೆ ಬಲಿಯುವ ವಯಸ್ಸು.. ಹೀಗೇ ಬಂಧುಗಳ ಮನೆಗೆ ಹೋದಾಗ, ಯಾರೋ ಸುದ್ದಿ ಹೇಳುವ ಭರದಲ್ಲಿ ,ಏನೇನೋ ಬೇರೆಯವರ ಸುದ್ದಿಯನ್ನು, ಅಲ್ಲಿ ಹೆಂಗಸರು ಹೇಳಿದಾಗ,ಅದನ್ನೇ ಬಂದು ಅಮ್ಮನಿಗೆ ಹೇಳಿಬಿಟ್ಟಿದ್ದೆ😊ಎಲ್ಲಿ ಇತ್ತೋ ಅಮ್ಮನಿಗೆ ಕೋಪ...ಅಲ್ಲೇ ಇದ್ದ ಛತ್ರಿ ತಗೊಂಡು ಬಾರಿಸಿದ್ರು..ಚಾಡಿ ಹೇಳ್ತ್ಯ..ಅವರ ಸುದ್ದಿ, ಇವರ ಸುದ್ದಿ ಅಂತ ಹಾಗೆಲ್ಲ ಹೇಳಬಾರದು.. ಈಗೇನೋ ನನ್ನ ಹತ್ತಿರ ಹೇಳಿದೆ ಸರಿ...ಸಂಬಂಧ ಪಟ್ಟವರಿಗೆ ವಿಷಯ ಹೇಳಿದ್ರೆ,ಅಲ್ಲಿ ಮನಸ್ಥಾಪಗಳು ಆಗ್ತಾ ಇತ್ತು ಅಂತ...ಅಂದಿನಿಂದ ಹೌದು,ಆ ತಪ್ಪು ಎಂದಿಗೂ ನನ್ನ ಬದುಕಿನಲ್ಲಿ ನಾನು ಮಾಡಬಾರದು ಎಂದು ನಿರ್ಧರಿಸಿದೆ,ಆ ಪುಟ್ಟ ವಯಸ್ಸಿನಲ್ಲಿ.ಅಮ್ಮ ಕೂಡ ಹಾಗೇ ಇದ್ದಿದ್ದು.. ಅನಗತ್ಯವಾಗಿ ಯಾರ ಮನೆಗೂ ಹೋಗ್ತಾ ಇರಲಿಲ್ಲ. ಹೆಂಗಸರ ಕಟ್ಟೆ ಪಂಚಾಯಿತಿಗೆ ಕೂಡ ಎಂಟ್ರಿ ಕೊಡ್ತಾ ಇರಲಿಲ್ಲ. ಯಾರೇ ಏನೇ ಹೇಳಿದರೂ ಕೂಡ, ಅವರೊಳಗೆ ಸಮಾಧಿ ಆಗ್ತಾ ಇತ್ತು ವಿಷಯ ಹೊರತು,ಹೊರಗೆ ನಾಲ್ಕು ಮಂದಿಗೆ ಗೊತ್ತಾಗ್ತಿರಲಿಲ್ಲ...ಆಗೆಲ್ಲ ಊರವರೇ ಕೆಲವರು ಆಡ್ಕೋತಾ ಇದ್ರು...ಈ ಯಮ್ಮ ಯಾರ ಜೊತೆಯಲ್ಲೂ ಬೆರೆಯೋಲ್ಲ..ಇನ್ನು ಹೆಣ್ಣು ಮಕ್ಕಳ ಅದ್ಹೇಗೆ ಬೆಳೆಸ್ತಾರೋ ಅಂತ ..ಆದರೆ ಖುಷಿ ಇದೆ ಅಮ್ಮನ ಬಗ್ಗೆ... ನನ್ನ ಕಂದ ನನ್ನ ಬಗ್ಗೆ ಹೀಗೇ ಖುಷಿ ಪಡೋದು..ನಿಜಕ್ಕೂ ನನ್ನ ಅಮ್ಮ ಗ್ರೇಟ್... ನನ್ನ ನೋಡಿ,ಮಕ್ಕಳು, ಶಿಕ್ಷಕರು ಎಲ್ಲಾ ಹೇಳ್ತಾರೆ.ನೀನೇ ಒಂತರ ಡಿಫರೆಂಟ್.. ತುಂಬಾ ಮೆಚ್ಯೂರ್ಡ್ ಇದೀಯಾ ಎಲ್ಲಾ ವಿಷಯಗಳಲ್ಲಿ ..ಅಂತ ನನ್ನ ಹೊಗಳಿದರೆ,ಈ ಕ್ರೆಡಿಟ್ ನನ್ನ ಅಮ್ಮನಿಗೆ ಸೇರ್ಬೇಕು..ಅವರು ಕಲಿಸಿದ ಸಂಸ್ಕಾರ ಇದು ಅಂತ ಹೆಮ್ಮೆಯಿಂದ ಹೇಳ್ಕೊಳ್ಳುತ್ತೆ ಅದು...ಆದರೆ ,ನಿಜವಾಗಿಯೂ,ಕ್ರೆಡಿಟ್ ನನಗೆ ಅಲ್ಲ. ನನ್ನ ಅಮ್ಮನಿಗೆ ಸಲ್ಲಬೇಕು.. ಬದುಕು ಹೇಗೆ ಬಂತೋ ಹಾಗೇ ಸ್ವೀಕರಿಸಿ, ಯಾರ ಬಳಿಯೂ ಕೈಚಾಚದೆ,ಸ್ವಾಭಿಮಾನದ ಬದುಕನ್ನು ಛಲದಿಂದ ಹೋರಾಡುವ ಅರಿವು ಮೂಡಿಸಿದ್ದು ನನ್ನ ಅಮ್ಮ....ಹೆಂಗಸರ ಬುದ್ಧಿ ಇಷ್ಟೇ ಎಂಬ ಮಾತಿನಿಂದ ನನ್ನ ಹೊರಗಡೆ ನಿಲ್ಲಿಸಿ ನಾನು, ಮಂದಿಯ ದೃಷ್ಟಿಯಲ್ಲಿ ಚೂರು ಡಿಫರೆಂಟ್ ಕಾಣುವಂತೆ ನನ್ನ ಉಳಿ ಪೆಟ್ಟಿನಿಂದ ಕೆತ್ತಿ ವಿಗ್ರಹ ವಿನ್ಯಾಸಗೊಳಿಸಿದ್ದು ನನ್ನ ಅಮ್ಮ...
ಅದಕ್ಕೆ, "ಬೆಳೆಯುವ ಸಿರಿ ಮೊಳಕೆಯಲ್ಲಿ "ಅಂತಾರೆ...ಮಕ್ಕಳು ,ಹೆತ್ತವರ ನೋಡಿಯೇ ಅನುಸರಿಸಿ ಬದುಕು ಕಲಿಯೋದು...ನಾವು ,ಸುಸಂಸ್ಕೃತರಾದರೆ,ಆಧುನಿಕತೆಯ ಬಿರುಗಾಳಿ ಎಷ್ಟೇ ಬಲವಾಗಿ ಬೀಸುತ್ತಿರಲಿ,ಪಾಶ್ಚಿಮಾತ್ಯ ಸಂಸ್ಕೃತಿಯ ಕರಿನೆರಳು, ಎಷ್ಟೇ ಗಾಢವಾಗಿ ಬೀಳಲಿ,ನಮ್ಮ ಸನಾತನ ಧರ್ಮ ಅಳಿಯದು ಎಂದಿಗೂ.. ನಮ್ಮ ಸುಸಂಸ್ಕೃತ ತನ ಎನ್ನುವುದು ಮಕ್ಕಳನ್ನೂ ಕೂಡಾ ನಮ್ಮ ದಾರಿಯಲ್ಲೇ ನಡೆಯುವಂತೆ ಮಾಡುತ್ತದೆ ಎಂಬುದು ಕೂಡ ಅಷ್ಟೇ ಸತ್ಯ... ಇಲ್ಲಿ ನನ್ನ ಬೆನ್ನು ನಾನು ತಟ್ಟಿ ಕೊಳ್ತಿಲ್ಲ .ಬದಲಿಗೆ ನನ್ನ ಅಮ್ಮನ ಬೆನ್ನು ತಟ್ಟುವಿಕೆಯ ಹೆಮ್ಮೆಯ ಪ್ರಯತ್ನ ನನ್ನದು.ನನ್ನ ಅಮ್ಮನ ದಾರಿಯಲ್ಲಿ ನಾ ನಡೆದು ಬಂದೆ...ನನ್ನ ಕಂದ ನನ್ನ ದಾರಿಯಲ್ಲಿ ನಡೆದು ಬರ್ತಿದೆ..ಅದಕ್ಕೆ ತಾನೇ?ಅಮ್ಮನಂತೆ ಮಗಳು,ನೂಲಿನಂತೆ ಸೀರೆ ಎಂದರು ಹಿರಿಯರು..
ಕಾಲ ಎಷ್ಟೇ ಬದಲಾಗಲಿ,ಜಗತ್ತು ಕೂಡ ಆಧುನಿಕತೆಯ ಮೆರಗಿಗೆ ಎಷ್ಟೇ ಮಿನುಗಲಿ.. .ನಮ್ಮ ಸನಾತನ ಸುಸಂಸ್ಕೃತಿ ಎಂದಿಗೂ ಬದಲಾಗದು..ಅದನ್ನು ಅರಿತು,ಲೋಪವಾಗದಂತೆ , ನಡೆಯಬೇಕಾದದ್ದು ನಮ್ಮ ಕರ್ತವ್ಯ...ಕರ್ತವ್ಯ ಪ್ರಜ್ಞೆ ನಮ್ಮೊಳಗೆ ಆವೀರ್ಭವಿಸಿದರೆ ...ಖಂಡಿತ ಮುಂದಿನ ಪೀಳಿಗೆಗೂ,ನಮ್ಮ ಸುಸಂಸ್ಕೃತಿಯ ಅಮೂಲ್ಯ ಕೊಡುಗೆಯನ್ನು ಧಾರಾಳವಾಗಿ ನೀಡಬಹುದು ನಾವು...
✍️ಪೂರ್ವವಾಹಿನಿ.