...

2 views

ಎಲ್ಲವೂ ಕೃತಕ.
ಇತ್ತೀಚೆಗೆ ಮನುಷ್ಯನ ಮನಃಸ್ಥಿತಿ ಹೇಗಿದೆ ಅಂದ್ರೆ, ಯಾವುದರಲ್ಲೂ  ಖುಷಿ, ತೃಪ್ತಿ ಇಲ್ಲವಾಗಿದೆ. 
ಆಧುನಿಕತೆ , ಅಭಿವೃದ್ಧಿ, ತಂತ್ರಜ್ಞಾನದ ಆವಿಷ್ಕಾರ ಆದಂತೆಲ್ಲ ಪ್ರಪಂಚವೆ ಚಿಕ್ಕದಾಗಿದೆ. 

ಕೃತಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಹೊಸ ಹೊಸ ಆವಿಷ್ಕಾರಗಳು.

ಮೊದಲೆಲ್ಲ ಅಮೇರಿಕಾ ಅಂದ್ರೆ, ಅಮೇರಿಕಾಕ್ಕೆ ಹೋಗಿ ಬಂದಿದಾರೆ ಅಂದ್ರೆ , ವಿಮಾನದಲ್ಲಿ ಹೋಗಿ ಬಂದಿದಾರೆ ಅಂದ್ರೆ ಏನೋ ಕುತೂಹಲ, ರಾಜ ಮರ್ಯಾದೆ😁. 
ಈಗ ಪ್ರತಿ ಮನೆಯಿಂದ ಒಬ್ಬರಾದ್ರು, ವಿಮಾನ ಪ್ರಯಾಣ ಮಾಡಿಯೇ ಇರ್ತಾರೆ, ಹಣವಂತರಿಗೆ ವಿದೇಶ ಪ್ರಯಾಣ ಸಾಮಾನ್ಯವಾಗಿದೆ. 

ಸಣ್ಣ ಸಣ್ಣ ಖುಷಿಗಳು ಮರೆಯಾಗಿವೆ, ನೈಸರ್ಗಿಕ ಆನಂದ ಮರೆಯಾಗಿ ಕೃತಕ ನಗುವೊಂದು ಮೂಡಿದೆ!!!

ಮೊದಲೆಲ್ಲ ಊರಿನ ಶೆಟ್ಟರ ಅಂಗಡಿಯಲ್ಲಿ ಇಡುತ್ತಿದ್ದ ದಿನಸಿ ಲೆಕ್ಕ ಮರೆಯಾಗಿ, ಮಾಲ್ ಗಳ , ಮಾರ್ಟ್ ಗಳ Offer ಗಳ , Credit Card Discount ಗಳ ಲೆಕ್ಕಾಚಾರ ನಡಿತಿದೆ.

ಈ ಮಾಲ್ ಗಳಲ್ಲಿ ಕ್ರಿಸ್ಮಸ್ ಬಂದರೆ ಕ್ರಿಸ್ಮಸ್ ಮರದ ಕೃತಕ ಆಕೃತಿಯೊಂದನ್ನು ಮಾಡಿ, ಮಾಲ್ ಗಳಿಗೆ ಬರುವವರು ಫೋಟೊ ಕ್ಲಿಕ್ಕಿಸಲು ಅನುಕೂಲ ಮಾಡಿ ಕೊಟ್ಟಿರ್ತಾರೆ.

ಆದರೆ ಯಾವ ಮಾಲ್ ಗಳಲ್ಲಿ ಕೂಡ 
ಗಣೇಶ ಹಬ್ಬಕ್ಕೆ, ಆಯುಧ ಪೂಜೆಗೆ, ವಿಶೇಷ ಆಚರಣೆಗಳಾವುವು ಕಾಣಸಿಗುವುದಿಲ್ಲ.

ವಠಾರಗಳ ಸಂಸ್ಕೃತಿ ಮರೆಯಾಗಿ, ಅಪಾರ್ಟ್ಮೆಂಟ್ ಸಂಸ್ಕೃತಿ ತಲೆ ಎತ್ತಿದೆ. 
ಮೊದಲೆಲ್ಲ ಈ ಪಬ್ , ಕ್ಲಬ್ ಸಂಸ್ಕೃತಿ ಹಣವಂತರಿಗೆ, ಮಾತ್ರ ಎಂಬಂತಿತ್ತು, ಸುಸಂಸ್ಕೃತ ಮನೆಯವರು ಈ ಪಬ್ ಗೆ ಹೋಗೋದು ಅಂದ್ರೆ ಅಪರಾಧ ಎಂಬ ಭಾವನೆ ಇತ್ತು. ಆದ್ರೆ ಈಗ  ಪಬ್, ಕ್ಲಬ್, ರೆಸ್ಟೋರೆಂಟ್ ಗಳಿಗೆ ಹೋಗದ ಜನರೆ ಇಲ್ಲ ಎಂಬಂತಾಗಿದೆ.

ಈ  IT ಉದ್ಯೋಗಿಗಳು ಪಾಪ, 
ವಾರಪೂರ್ತಿ ಕಂಪ್ಯೂಟರ್ ಮುಂದೆ ಕುಳಿತು, ದಣಿದವರು ವಾರಾಂತ್ಯದಲ್ಲಿ ಈ ರೆಸಾರ್ಟ್ ಗಳಿಗೆ ಹೋಗಿ Fire Camp , Group Activity ಅಂತ ಕಾಲ ಕಳೆದು ಬಂದರೆ ಏನೋ ಸಾಧಿಸಿದ ಖುಷಿ!!


Resort ಗಳು 😁  5 ಎಕರೆ ತೆಂಗಿನ ತೋಟ, ಮಾವಿನ ತೋಪು ಇದ್ರೆ ಮಧ್ಯದಲ್ಲಿ ಒಂದು ಸ್ವಿಮ್ಮಿಂಗ್ ಪೂಲ್, ಒಂದು ಹೋಟೆಲ್, 10-15 ರೂಮ್ ಗಳು, ಒಳಾಂಗಣ ಆಟಕ್ಕೆ ಒಂದು ಕೊಠಡಿ, ಹೊರಾಂಗಣ ಆಟಕ್ಕೆ ಅರ್ಧ ಎಕರೆ ಜಾಗ ಸಿದ್ದ ಮಾಡಿರ್ತಾರೆ. 
ಹೀಗೆ ಒಂದು ಹೊಸ ಬ್ಯುಸಿನೆಸ್. 

ಈಗಂತೂ ಎಲ್ಲವೂ ಕೃತಕ!! 
ತಿನ್ನೋ ಅನ್ನದಿಂದ, ಹಿಡಿದು
ಸಂಬಂಧಗಳು, ಭಾವನೆಗಳು, ಪ್ರೀತಿ, ಸ್ನೇಹ.
ಎಲ್ಲವೂ!!!!


© ಮಂಜುನಾಥ್.ಕೆ.ಆರ್