...

6 views

ಅಪ್ಪ...
ಮಂಜೂಷಳಿಗಿನ್ನು ಒಂಭತ್ತರ ವಯಸ್ಸು
ತನ್ನ ಓರಗೆಯ ಜೊತೆಗಾರರೊಂದಿಗೆ ಆಡಿನಲಿಯುವ ಪ್ರಪಂಚ ತಿಳಿಯದ ಮುಗ್ಧಮಗುವಿನ ಮನಸು,
ಆದರೂ ಆಕಾಶವೇ ಕಳಚಿ ತಲೆಮೇಲೆ ಬಿದ್ದಿದೆ ಎನ್ನುವಂತೆ ಯಾವಾಗಲಾದರೊಮ್ಮೆ ಅಗಾಧ ಯೋಚನೆಯ ಮೊಗ ಹೊತ್ತು ಮೂಲೆ ಹಿಡಿದು ಒಬ್ಬಳೆ ಇದ್ದುಬಿಡುತ್ತಿದ್ದಳು.!

ಇದನ್ನೆಲ್ಲಾ ಗಮನಿಸುತ್ತಿದ್ದ ಅವಳ ಪ್ರೀತಿಯ ಶಿಕ್ಷಕಿಗೆ ಬಗೆಹರಿಯದ ಗೊಂದಲ ಯಾಕೆ ಈ ಹುಡುಗಿ ದಿನೆದಿನೆ ಬಗೆಹರಿಯದ ನಿಘಂಟಿನಂತಾಗುತಿಹಳಲ್ಲ ಎಂದು ಹತ್ತಿರ ಕರೆದು ಪ್ರೀತಿಯಿಂದ ಉಪಚರಿಸಿ ಎಷ್ಟೇ ಕೇಳಿದರೂ ಸಮಸ್ಯೆ ಏನೆಂದು ಬಾಯಿಬಿಡುತ್ತಿರಲಿಲ್ಲ ಆದರೆ ಕಣ್ಣಿನಿಂದ ಗಂಗಾಮಾತೆ ಸದ್ದಿಲ್ಲದೆ ಕೆನ್ನೆಮೇಲೆ ಜಾರುತ್ತಿದ್ದಳು ಅದನ್ನು ನೋಡಿ ಅವರೆ ಸಮಾಧನಮಾಡಿ ಸುಮ್ಮನಾಗುತ್ತಿದ್ದರು ಆದರೂ ಈ ಮಗುವಿನ ಸಮಸ್ಯೆ ಏನೆಂದು ತಿಳಿಯಬೇಕು ಇಲ್ಲದಿದ್ದರೆ ಆಟಪಾಟ ಎಲ್ಲಾ ಚಟುವಟಿಕೆಯಲ್ಲೂ ಮುಂದಿರುವವಳು ಡಲ್ ಆದರೆ ಕಷ್ಟ ಮಗುವಿಗೆ ಎಂದೆಣಿಸಿದರು..!!

ಅದೊಂದು ದಿನ ಶಾಲಾ ಮಟ್ಟದ ಪ್ರತಿಭಾಕಾರಂಜಿಯು ಈ ಸಲ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದು ಎಲ್ಲರು ಪ್ರತಿಯೊಂದು ಸ್ಪರ್ಧೆ ಗಳನ್ನು ಚೆನ್ನಾಗಿ ನಡೆಸಲು ಸಹಕರಿಸಬೇಕು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಪ್ರಶಸ್ತಿಗಳನ್ನು ನಮ್ಮ ಶಾಲೆಮಕ್ಕಳೆ ಹೆಚ್ಚು ಹೆಚ್ಚು ಗೆಲ್ಲಬೇಕೆಂದು ತಿಳಿಸಿ ಎಲ್ಲರೂ ಚೆನ್ನಾಗಿ ಭಾಗವಹಿಸಿ ಎಂದು ಹೇಳಿ ಯಾರು ಯಾರು ಯಾವ ಯಾವ
ಸ್ಪರ್ಧೆ ಗಳಲ್ಲಿ ಭಾಗವಹಿಸಬೇಕೆಂದು ತಿಳಿಸುತ್ತಿದ್ದ ಸಮಯದಲ್ಲೇ ಮಂಜೂಷಳ ಪ್ರೀತಿಯ ಟೀಚರ್ ಅವಳಿಗೊಂದು ಅಭಿನಯ ಗೀತೆಯನ್ನು ಮಾಡು ಅಂತ ಹೇಳಿ ಒಪ್ಪಸಿದರು ಅವಳು ಖುಷಿಯಿಂದ ಆಯಿತು ಟೀಚರ್ ನೀವೆ ಹೇಳಿಕೊಡಿ ಅಂತ ಹೇಳಿ ಕುಣಿದಾಡಿಬಿಟ್ಟಳು...!!

ಮೊದಮೊದಲು ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು ಮಂಜೂಷಾಳು ಚೆನ್ನಾಗಿಯೇ ಮಾಡುತ್ತಿದ್ದಳು ಪ್ರೈಜ್ ಗೆದ್ದು ಪ್ರೀತಿಯ ಶಿಕ್ಷಕಿಯ ಮನಗೆಲ್ಲಬೇಕೆಂಬ ಹಂಬಲ ಹೆಚ್ಚಾಗಿತ್ತು ಅವಳಲ್ಲಿ..

ಮುಂದುವರೆಯುವುದು....
© ಮಧುಶ್ರೀ S ಭಾಗವತ್