...

2 views

ತಟ್ಟೆ ಕಾಸೆಂದರೆ.......????.
#ತಟ್ಟೆ_ಕಾಸೆಂದರೆ_ಭಿಕ್ಷೆ_ತಟ್ಟೆಯಾ?

ಒಂದು ಸಮುದಾಯದ ಬಗ್ಗೆ ಸಮರ್ಥನೆಯಾಗಲಿ,,ಅಥವಾ ಪರ,ವಿರೋಧದ ಬರಹ ಖಂಡಿತ ಇದಲ್ಲ.. ದಯವಿಟ್ಟು ಪೂರ್ವಾಗ್ರಹ ಪೀಡಿತ ಮನಸಿಂದ ಓದದಿರಿ🙏
"ತಟ್ಟೆ ಕಾಸು","ಭಿಕ್ಷೆ ತಟ್ಟೆ" ಅನ್ನುವ ಅಂಬೋಣ ಹಲವರದು...ಈ ಬರಹ ನನಗೆ ಸಂಬಂಧಿಸಿದ್ದೂ ಅಲ್ಲ. ಆದರೆ, ನನಗೆ ತಿಳಿದ ಸತ್ಯವನ್ನು ಪ್ರಸ್ತುತ ಪಡಿಸುವ ಹಂಬಲ ಮಾತ್ರ ನನ್ನದು.
ಮೊದಲಿಗೆ ಈ" ತಟ್ಟೆ ಕಾಸು"ಎಂದರೇನು?ನೋಡೋಣ.
ಕೆಲವೊಂದು ದೇವಸ್ಥಾನಗಳಲ್ಲಿ ಬೋರ್ಡ್ ಹಾಕಿರುತ್ತಾರೆ ನಾವೆಲ್ಲರೂ ಓದಿರ್ತೀವಿ ಕೂಡ...ಏನಂತ?"ದಯವಿಟ್ಟು ಮಂಗಳಾರತಿ ತಟ್ಟೆಗೆ ಕಾಸು ಹಾಕಬೇಡಿ..ದೇವರ ಹುಂಡಿಗೇ ಹಣ ಹಾಕಿ" ಅಂತ.ಅಂದರೆ ಇಂತಹ ದೇವಸ್ಥಾನಗಳಲ್ಲಿ ,ಅರ್ಚಕರಿಗೆ ,ಅವರವರ ಕೆಲಸದ ಅನುಸಾರವಾಗಿ ಒಳ್ಳೆಯ ಸಂಬಳವನ್ನು ನಿಗದಿ ಮಾಡಿರ್ತಾರೆ ,ದೇವಸ್ಥಾನದ ಕಮಿಟಿಯವರು..ದೇವಸ್ಥಾನಕ್ಕೆ ಬಂದ ಭಕ್ತಾದಿಗಳು,ಏನು, ಹಣವನ್ನು ದೇವರ ಹುಂಡಿಗೆ ಹಾಕಿರ್ತಾರಲ್ವಾ?ಆ ಹಣದಿಂದಲೇ ತಿಂಗಳು, ತಿಂಗಳು ,ದೇವಸ್ಥಾನದಲ್ಲಿ ,ಪೂಜೆ ಮಾಡುವ ಅರ್ಚಕರಿಗೆ ಸಂಬಳ ನೀಡಲಾಗುವುದರಿಂದ ,ಇಲ್ಲಿ ತಟ್ಟೆ ಕಾಸು ನಿಷೇಧ...
ಇನ್ನೂ ಹಲವು ದೇವಸ್ಥಾನಗಳಲ್ಲಿ ,ಹುಂಡಿಗೇ ಹಣ ಹಾಕಿ ಎನ್ನುವ ಬೋರ್ಡ್ ಇರುವುದಿಲ್ಲ...ಇಲ್ಲಿ ಪೂಜೆ ಮಾಡುವ ಅರ್ಚಕರಿಗೆ ,ತಿಂಗಳ ಸಂಬಳ ,ಬರೀ ಒಂದು ಸಾವಿರ ಮಾತ್ರ.. ಬಂದ ಭಕ್ತಾದಿಗಳು ಹಾಕಿದ ತಟ್ಟೆ ಕಾಸೇ ಇವರ ಸಂಬಳ..ಈಗಲಾದರೂ ತಟ್ಟೆ ಕಾಸು ,ಅವರ ನೌಕರಿಯ ಸಂಬಳ ಎಂದು ಅರ್ಥ ಮಾಡಿಕೊಂಡರೆ ತುಂಬಾ ಒಳ್ಳೆಯದು..
ಕೆಲ ಪೂರ್ವಾಗ್ರಹ ಪೀಡಿತ ಮನದಿಂದ ,ಮನ ಬಂದಂತೆ ಈ ಬಗ್ಗೆ ಮಾತಾಡ್ತಾರೆ.ಯಾವುದೇ ವಿಷಯವನ್ನು ಕೂಡ ,ಮಾತನಾಡುವಾಗ ,ಸರಿಯಾಗಿ ಅರಿತು,ಮಾತನಾಡಿದರೆ ಚಂದ.ಸಮಾಜಕ್ಕೆ ತಪ್ಪು ಸಂದೇಶ ನೀಡುವಂತೆ ಇರಬಾರದು ಕೂಡ... ಇನ್ನು ,ಪೂಜೆ ಮಾಡುವ ಅರ್ಚಕರು ಎಂದರೆ ಕೇವಲ ಬ್ರಾಹ್ಮಣ ಸಮುದಾಯ ಒಂದೇ ಸೀಮಿತ ಅಲ್ಲ..ಆ ಆ ಪ್ರಾದೇಶಿಕ ,ಪರಿಸರ, ದೇವರು ಪ್ರಕಾರಕ್ಕೆ ಅನುಗುಣವಾಗಿ, ಇನ್ನೂ ಕೆಲ ಸಮುದಾಯದ ಪೂಜಾರಿಗಳೂ ಇರುತ್ತಾರೆ. ಅವರೂ ಕೂಡ ಈ ತಟ್ಟೆ ಕಾಸಿನ ಸಂಬಳದಲ್ಲೇ ಬದುಕು ನಡೆಸ್ತಾ ಇದಾರೆ....
ಇನ್ನು ದೇವಸ್ಥಾನಗಳು, ಒಂದು ಸಮುದಾಯದಕ್ಕೆ ಮಾತ್ರ ಸೀಮಿತವಾಗಿಲ್ಲ... ದಿನಕೊಂದು ದೇವಸ್ಥಾನ, ಹುಟ್ಟಿ ಕೊಳ್ಳುತ್ತಿದೆ..ಬೇರೆ ,ಬೇರೆ ವರ್ಗದ ಒಡೆತನಗಳಲ್ಲಿ..ಪ್ರತೀ ದೇವಸ್ಥಾನಗಳಲ್ಲೂ ಕಮಿಟಿ, ಟ್ರಸ್ಟ್ ಇರುತ್ತದೆ.. ಅದರಲ್ಲೂ ಕೂಡ ಎಲ್ಲಾ ವರ್ಗದ ಸದಸ್ಯರು ಇರುತ್ತಾರೆ... ಈ ಎಲ್ಲಾ ರೀತಿಯ ಸಹಬಾಳ್ವೆಯಿಂದ ಕೂಡಿದ ದೇವಸ್ಥಾನಗಳಲ್ಲೂ ಕೂಡ ,ನೌಕರಿ ಮಾಡಿ ,ಅವರ ಸಂಬಳ ಅವರು ಪಡೆದುಕೊಳ್ಳುವ ಅರ್ಚಕರು ಮಾತ್ರ, ಭಿಕ್ಷೆ ಬೇಡಲು ಕುಳಿತಂತೆ ಕಾಣುತ್ತಾರೆ ಮಂದಿಗೆ ಅಂದ್ರೆ, ಇದಕಿಂತಲೂ ವಿಪರ್ಯಾಸದ ಕೌತುಕ ಮತ್ತೊಂದು ಇಲ್ಲ.
ಬಿಜನೆಸ್ ಸಲುವಾಗಿ ಬೇಕಾದಷ್ಟು ದೇವಸ್ಥಾನಗಳು ,ಇವತ್ತು ಹುಟ್ಟಿ ಕೊಳ್ತಿವೆ..ಅದರ ಒಡೆತನ ಸಾಮಾನ್ಯ ಎಲ್ಲಾ ವರ್ಗದ ಮಂದಿಯೂ ಇರುತ್ತಾರೆ...ದೇವಸ್ಥಾನದ ದೇವರನ್ನು ಕೂಡ ಬಿಜನೆಸ್ ಲೇವಲ್ ಗೆ ಉಪಯೋಗಿಸುವಂತಹ ಅಂಥಹ ವ್ಯಕ್ತಿಗಳು ಯಾರ ಕಣ್ಣಿಗೂ ಬೀಳಲಾರರು..ದೇವಸ್ಥಾನಗಳಲ್ಲಿ ,.ಪೂಜಾರಿಗಳು ತಾವು ಮಾಡಿದ ಕೆಲಸಕ್ಕೆ ಸಂಬಳ ಪಡೆವ ಈ ತಟ್ಟೆ ಕಾಸು,
ಭಿಕ್ಷೆ ಬೇಡುವಂತೆ ಕಾಣ್ತಾ ಇರೋದು ಎಷ್ಟರ ಮಟ್ಟಿಗಿನ ಪೂರ್ವಾಗ್ರಹ ನೋಟ ಆಗಿರಬಹುದು ಹೇಳಿ?
ಸುಖಾಸುಮ್ಮನೆ ,ಪೂರ್ವಾಗ್ರಹ ಪೀಡಿತರಾಗಿ,ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಮನಃಸ್ಥಿತಿಗಳು ,ಖಂಡಿತ ಬದಲಾಗಬೇಕಿದೆ...ಡಾಂಬಿಕತೆ,ಮೋಸ,ವಂಚನೆ ಮಾಡುವವರ ಹೊರತಾಗಿ, ನಿಯತ್ತಾಗಿ,ಅವರ ಕರ್ತವ್ಯ ಚಾಚೂತಪ್ಪದೇ ,ನಿರ್ವಂಚನೆಯಿಂದ ದೇವರ ಕೆಲಸ ಮಾಡಿ,ದೇವರಿಗೂ, ಮನುಷ್ಯರಿಗೂ ,ತಮ್ಮ ಪೂಜಾ ನಿಷ್ಠೆಯಿಂದ, ಸೇತು ಬಂಧರಾಗುವ ಪೂಜಾರಿ ನೌಕರರರನ್ನು, ನಾವು ಹಾಕಿ ಬರುವ ಒಂದು,ಎರಡು ರೂಪಾಯಿಯನ್ನು ,ಭಿಕ್ಷಾಟನೆಗೆ ಹೋಲಿಸಿದರೆ, ಆ ಭಗವಂತ ಕೂಡ ,ಮೆಚ್ಚಲಾರ..ಯಾಕೆಂದರೆ, ಅದು ಅವರ ಶ್ರಮಕ್ಕೆ ಸಿಗುವ ಸಂಬಳವೇ ಹೊರತು,ಖಂಡಿತ ಗಿಂಬಳವಲ್ಲ...ಇದರಲ್ಲೇ ಅವರ ಬದುಕು ನಡೆವ ಅನಿವಾರ್ಯತೆ.
ಹತ್ತಿರದಿಂದ ನೋಡಿದುದಕ್ಕೆ ,ಸತ್ಯದ ಅರಿವು,ನನಗೆ ಆದುದರಿಂದ ಇಲ್ಲಿ ಪ್ರಸ್ತುತ ಪಡಿಸಿದ್ದೇನೆಯೇ ಹೊರತು,ಇನ್ಯಾವ ಉದ್ದೇಶ ಕೂಡ ಇರುವುದಿಲ್ಲ. ಇದರಿಂದ ನನಗೆ ಆಗುವ ಲಾಭ,ನಷ್ಟ ಕೂಡ ಏನೂ ಇಲ್ಲ😊.ಅಥವಾ ಬರಹ ಓದಿ,ಒಪ್ಪಿ ಎನ್ನುವ ಬಲವಂತ ಕೂಡ ಇಲ್ಲ.. ಇರುವುದನ್ನು, ತಿಳಿದ ಸತ್ಯವನ್ನು ಹೇಳುವುದು ತಪ್ಪಿಲ್ಲ ಎಂಬ ಭಾವದಿಂದ ಬರೆದ ಭಾವನೆಯ ಬರಹ ಅಷ್ಟೇ... ಯಾಕೆಂದರೆ ಭ್ರಷ್ಟರನ್ನು ಭ್ರಷ್ಟರು ಎಂದರೆ, ಏನೂ ಅನಿಸದು..ಆದರೆ ನಿಯತ್ತಿನ ಕಾಯಕ ಮಾಡಿ,ಹೊತ್ತಿನ ಖೂಳಿಗೆ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ,ಗೌರಯುತವಾಗಿ ಪಡೆವ ಈ "ತಟ್ಟೆ ಕಾಸಿನ" ಸಂಬಳ ಪಡೆವವರನ್ನು,ಭಿಕ್ಷುಕರಿಗೆ ಹೋಲಿಸಿದರೆ, ಏನೋ ಒಂದುರೀತಿ ಖೇದ ಎನಿಸುತ್ತದೆ.. ,ಗೌರವಯುತವಾಗಿ ನಡೆದುಕೊಳ್ಳುವ,ಪ್ರತೀಯೊಬ್ಬ ಅರ್ಚಕರು,ಹಾಗೂ ಪೂಜಾರಿಗಳಿಗೆ ಈ ಬರಹ ಅರ್ಪಿತ🙏.
✍️ಶೋಭಾ ನಾರಾಯಣ ಹೆಗಡೆ.

ಪೋಟೋ, ಗೂಗಲ್ ಕೃಪೆ.