...

2 views

ಓದಿದನ್ನು ನೆನಪಿನಲ್ಲಿ ಟ್ಟುಕೊಳ್ಳಲು ಏನು ಮಾಡಬೇಕು? ಹೇಗೆ ಓದಬೇಕು?
ಪರಿಶ್ರಮದಿಂದ ಓದುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಅದೆಲ್ಲವನ್ನು ನೆನಪಿಡುವುದು ಒಂದು ರೀತಿಯ ಶ್ರಮವೇ. ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ ತರಗತಿ ಪರೀಕ್ಷೆಗೆ ಆಗಲಿ ಓದುವ ಬಹುಸಂಖ್ಯಾತರಿಗೆ ಕಾಡುವ ಒಂದೇ ಒಂದು ಪ್ರಶ್ನೆ ಓದಿದನ್ನು ಹೇಗೆ ನೆನಪಿನಲ್ಲಿಡುವುದು ಎಂಬುದು. ಇನ್ನು ಕೆಲವರಿಗೆ ಓದಿದೆಲ್ಲ ಕಳಸುಮೆಣಸಾಗಿ ಕನ್ಪ್ಯೂಸ್ ಆಗುವ ಸಮಸ್ಯೆ ಕಾಡುವುದು. ಇಂತಹ ಒಂದಲ್ಲ ಒಂದು ಸಮಸ್ಯೆ ಎಲ್ಲರಿಗೂ ಇದ್ದದೇ. ಸಾಮಾನ್ಯವಾಗಿ ಒಮ್ಮೆ ಓದಿದನ್ನು ನೆನಪಿಸಿಕೊಂಡು ಬರೆದರೆ ಮಾತ್ರ ಅದು ಮಾರುಕಲಿಸುತ್ತದೆ ಹಾಗೇ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಅಗತ್ಯ ಸಂದರ್ಭದಲ್ಲಿ ಓದಿದ ಯಾವುದೇ ಮಹಿಗಳನ್ನು ನೆನಪಿಗೆ ತಂದುಕೊಳ್ಳಲು ಕೆಲವು ವಿಧಾನಗಳಿವೆ. ಬಹಳಷ್ಟು ವಿದ್ಯಾರ್ಥಿಗಳು ಇದರಲ್ಲಿ ಸಾಫಲರು ಆಗಿದ್ದಾರೆ. ಅಂತಹ ಕೆಲವು ವಿಧಾನಗಳನ್ನು ಈ ಕೆಳಗಿಂನಂತೆ ನೀಡಲಾಗಿದೆ

ಮಾಹಿತಿ ಸರಿಯಾಗಿ ಅರ್ಥ ಮಾಡಿಕೊಳ್ಳಿ =
ಪುಸ್ತಕ ನೋಟ್ಸ್ ಯಾವುದರಲ್ಲೇ ಓದಿದರೂ ಸಹ ಮಾಹಿತಿಗಳನ್ನು ಸ್ಪಷ್ಟವಾಗಿ ಅರ್ಥವಾಗುವಂತೆ ಓಧಿಕೊಳ್ಳಿ ಆಸ್ಪಷ್ಟವಾಗಿದ್ದರೆ, ಗೊಂದಲಗಳಿಂದ ತುಂಬಿದರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ ಅದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬೇಕಾದಾಗ ಸ್ಮರಿಸಬಹುದು ಹಾಗೂ ನಿಮ್ಮದೇ ಆದ ಪದಗಳಲ್ಲಿ ಟಿಪ್ಪಣಿ ಮಾಡಿಕೊಂಡು ಮೆದುಳು ಎಂಬ ಕಂಪ್ಯೂಟರ್ ಒಳಗೆ ಭರ್ತಿ ಮಾಡಿ. ಇದು ನಿಮಗೆ ಸಾಧ್ಯವಾಗಲಿಲ್ಲ ಎಂದರೇ ನೀವದನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ

ಮಾಹಿತಿ ಸಂಗ್ರಹ ಕ್ರಮಬದ್ದವಾಗಿರಲಿ=
ಓದಿದ ಮಾಹಿತಿಯನ್ನು ಬೇರೆ ಬೇರೆ ವಿಭಾಗಗಳಲ್ಲಿ ಕ್ರೂಡಿಕರಿಸಿ ಉದಾಹರಣೆಗೆ ನೀವು ಇಂಗ್ಲಿಷ್ ಭಾಷೆ ವಿಷಯ ಓದುತ್ತಿತ್ತಿದಿರಿ ಎಂದಲ್ಲಿ ಅದರಲ್ಲಿ ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳನ್ನು ಒಂದು ವಿಭಾಗದಲ್ಲಿ ಕ್ರೂಡಿಕರಿಸಿ ಸ್ಮರಣೆಯನ್ನು ಇಟ್ಟುಕೊಳ್ಳಬಹುದು ಇನ್ನೊಂದು ಬಗೆ ಎಂದರೆ ಉದ್ದನೆಯ ನಂಬರ್ ಅನ್ನು ತುಂಡು ತುಂಡಾಗಿ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಇತಿಹಾಸಕ್ಕೆ ಸಂಬಂಧಪಟ್ಟಂತೆ ಓದುವಾಗ ಕಳನುಕ್ರಮದಲ್ಲಿ, ಆಡಳಿತ ನಡೆಸಿದ ರಾಜ ಕುಟುಂಬಗಳಿಗೆ ಅನುಗುಣವಾಗಿ ಒಕೊಳ್ಳಬೇಕು ಪಠ್ಯಕ್ಕಿಂತ ಚಿತ್ರವನ್ನು ನೆನಪಿಸಿಕೊಳ್ಳುವುದು ಸುಲಭ ಇದನ್ನು ವಿವರಗಳಿಗೂ ಅನ್ವಹಿಸಬಹುದು ಯಾವುದೋ ಸಂಕಿರ್ಣವಾದ ಗಣಿತದ ಸಮಸ್ಯೆ ಅಥವಾ ಗೊಂದಲದ ವಿವರಗಳಿದ್ದರೆ ಪಠ್ಯದಲ್ಲಿರುವ ವಿವರಗಳನ್ನು ಪದೇ ಪದೇ ನೋಡಿ ಮೆದುಳಿನಲ್ಲಿ ದೃಶ್ಯಕರಿಸಲು ಪ್ರಯತ್ನಿಸಿ ಕಿಸ್ತಾಕರವಾದ ಸೂತ್ರಗಳನ್ನು ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿ ಚಾರ್ಟ್ ಮಾಡಿಕೊಂಡು ಓದಿ