...

21 views

ನನ್ನ ಅಮ್ಮ.
ನನ್ನ ಅಮ್ಮ.
ಆಕೆಯ ಬಗ್ಗೆ ವಿವರಿಸುವ ಬದಲು ಇವತ್ತು ಆದ ಒಂದು ಘಟನೆಯನ್ನು ಹಂಚಿಕೊಳ್ಳುತ್ತೇನೆ.
ರಜೆ ಎಂದು ಊರಿಗೆ ಹೋದರೆ ನನ್ನ ಮೊಟ್ಟ ಮೊದಲ ಕೆಲಸ ಅಮ್ನನ ಕರೆದುಕೊಂಡು ಅಲ್ಲಿ ಇಲ್ಲಿ ಸುತ್ತಾಡುವುದು. ಹಾಗೆಯೇ ಈ ಬಾರಿಯೂ ನಾನು ಅಮ್ಮನ ಕರೆದುಕೊಂಡು ಸಿಟಿಗೆ ಏನೊ ತರಲೆಂದು ಹೋದೆ. ಎಲ್ಲ ಮುಗಿಸಿ ಇನ್ನೇನು ಮನೆ ತಲುಪಬೇಕು ಆಗ ಒಂದು‌ ಮುದ್ದಾದ ಪಾರಿವಾಳ ತನ್ನ ಜೀವ ರಕ್ಷಣೆಗಾಗಿ ಓಡಿ ಬರುತ್ತಿರುವುದನ್ನು ಕಂಡ ನನ್ನ ಅಮ್ಮ ಕೂಡಲೇ ಅದರ ರಕ್ಷಣೆಗೆ ಮುಂದಾದಳು. ಆ ಮೂಕ ಪಕ್ಷಿಯ ನೋವನ್ನು ತನ್ನ ನೋವೆಂದು ನನ್ನ ಅಮ್ಮ ಮಿಡಿಯುತ್ತಿರುವುದನ್ನು ಕಂಡ ನನ್ನ ಕಣ್ಣುಗಳು ಒದ್ದೆಯಾದವು. ಕೂಡಲೆ ತನ್ನ ಕೈಯಲ್ಲಿ ಅದನ್ನು ಹಿಡಿದುಕೊಂಡು ತನ್ನ ಸೆರಗಿನಿಂದ ಅದಕ್ಕೆ ಅಂಟಿಕೊಂಡ ಧೂಳನ್ನು ಒರೆಸಿದಳು. ನಂತರ ನಾವು ಅದನ್ನ ಮನೆಗೆ ಕರೆದುಕೊಂಡು ಹೋದೆವು. ನಾನು ಅಮ್ಮನ್ನನ್ನು ಕೇಳಿದೆ, ಇದಕ್ಕೆ ಹಾರಲು ಆಗುತಿಲ್ಲವಲ್ಲ ಏನು ಮಾಡುವುದು ಎಂದು. ಅದಕ್ಕೆ ಅಮ್ಮ ಇದು ಹಾರಿ ಹೋಗಬಾರದು ಎಂದು ಯಾರೊ ಮಾನವೀಯತೆ ಇಲ್ಲದವರು ಇದರ ರೆಕ್ಕೆಯನ್ನು ಕತ್ತರಿಸಿದ್ದಾರೆ. ಪುನಃ ರೆಕ್ಕೆ ಬೆಳೆದು ಇದು ಹಾರುವ ಹಾಗೆ ಆಗುವವರೆಗೂ ಇಲ್ಲಿಯೇ ಇರಲಿ ಎಂದರು. ಇದಕ್ಕೆ ಅಪ್ಪ ಕೂಡ ಒಪ್ಪಿಗೆ ಸೂಚಿಸಿದರು. ನಾನು ಮುಗುಳ್ ನಕ್ಕು ಹೋಸ ಅಥಿತಿಯನ್ನು ಸ್ವಾಗತಿಸಿದೆ. ನಮ್ಮ ಮನೆಯಲ್ಲಿ ಇದೆಲ್ಲಾ ಹೋಸದೆನಲ್ಲ. ಪಕ್ಷಿ ಪ್ರಾಣಿಗಳು ಎಂದರೆ ಅಮ್ಮನಿಗೆ ಎಲ್ಲಿಲ್ಲದ ಪ್ರೀತಿ. ಒಮ್ಮೆ ಗರುಡ ಪಕ್ಷಿಯಿಂದ ಗಾಯಗೊಂಡು ಹಾರಲು ಆಗದೆ ಮೇಲಿಂದ ಕೆಳಗೆ ಬೀಳುತ್ತಿದ್ದ ಆ ಗಿಳಿಯನ್ನು ಅಮ್ಮ ‌ತನ್ನ ಸೆರಗಿನಲ್ಲಿ ಹಿಡಿದು ಕಾಪಾಡಿದ್ದಳು. ಆದರೆ ಆ ಗರುಡ ಪಕ್ಷಿ ಸೆರಗಿನಲ್ಲಿದ್ದ ಗಿಳಿಯನ್ನು‌ ನೋಡಿ ಅಮ್ಮನ ಮೇಲೆಯೇ ದಾಳಿ ಮಾಡಿತು. ಹೇಗೋ ಹರಸಾಹಸ ಮಾಡಿ ಅದರಿಂದ ತಪ್ಪಿಸಿಕೊಂಡು ಅಮ್ಮ ಮನೆಗೆ ಬಂದಳು. ಕೆಲವು ದಿನಗಳವರೆಗೆ ಅದನ್ನು ಉಪಚರಿಸಿ ಹಾರಲು ಬಿಟ್ಟೇವು. ಮತ್ತೊಮ್ಮೆ ಒಂದು ಬೆಕ್ಕಿನಿಂದ ಒಂದು‌‌ ಗುಬ್ಬಚ್ಚಿಯನ್ನು , ಮೋರಿಯಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ,ನೀರಿಗಾಗಿ ಪರದಾಡುತ್ತಿದ್ದ ಹಸುವನ್ನು ,ಚಿಕ್ಕ ಹುಡುಗರಿಂದ‌ ಹಿಂಸೆಗೆ ಒಳಪಟ್ಟು ನರಳುತ್ತಿದ್ದ, ಈಗ ತಾನೆ‌ ಪ್ರಪಂಚವನ್ನು ‌ನೋಡುತ್ತಿದ್ದ ಬೆಕ್ಕಿನ ‌ಮರಿಗಳನ್ನು ಕಾಪಾಡಿ‌ ಉಪಚರಿಸುತ್ತಿದ್ದಳು. ಹೀಗೆ ಹೇಳಲು ಹೊರಟರೆ ನೂರಾರಿದೆ. ಅದೆನೊ ನನಗೆ ಇದರ ಬಗ್ಗೆ ಯೋಚಿಸಿದಾಗೆಲ್ಲ ಅನಿಸುವುದು , ದೇವರು ನನ್ನ ಅಮ್ಮನ ಈ‌ ಮುದ್ದು ಮನಸ್ಸನ್ನು ನೋಡಿ , ಪ್ರಾಣಿ-ಪಕ್ಷಿಗಳ ಬಗ್ಗೆ ಅವಳಿಗಿರುವ ಒಲವನ್ನು ಅರಿತು, ಅವಳ ಕಿವಿಗೆ ಈ ಮೂಕ ಜೀವಿಗಳ ಕಷ್ಟದ ಕೂಗು ಕೇಳುವಂತೆ ಮಾಡುತ್ತಾನೇನೊ ಎಂದು. ಅದೇನೇ ಆಗಲಿ ನನ್ನ ಅಮ್ಮನ್ನನ್ನು ನೋಡಿದಾಗಲೆಲ್ಲ‌ ತುಂಬಾ ಭಾವುಕಳಾಗುತ್ತೇನೆ. ಧರೆಗೆ ಇಳಿದ ದೇವತೆಯಂತೆ ಗೋಚರಿಸುತ್ತಾಳೆ. ನಾನು ಎಷ್ಟು ಪುಣ್ಯವತಿ ಅಲ್ವ ಇಂತಹ ದೇವತೆಗೆ ಮಗಳಾಗಿರುವುದು.
ಅಮ್ಮ I Love You.

#ಅಮ್ಮ #Mother