...

7 views

ನನ್ನ ಪ್ರತಿಬಿಂಬ
ಬೆಳಗಿನ ಜಾವ ಐದರ ಸಮಯ.
ಕುಷ್ಟಗಿ ಮೂಲಕ ಲಿಂಗಸುಗೂರಿಗೆ ಹೊರಟಿದ್ದೆ.
ದಿನಪತ್ರಿಕೆಗಾಗಿ ಹುಡುಕಾಟ, ಅಂಗಡಿಗಳಿನ್ನೂ ತೆರೆದಿಲ್ಲ. ಕುಷ್ಟಗಿಯ ತಾವರೆಗೆರೆ ಸರ್ಕಲ್ ನಲ್ಲಿ ಸುಮಾರು ಹನ್ನೆರಡರ ಹರೆಯದ ಹುಡುಗನೊಬ್ಬ ಹಳೆಯ ಸೈಕಲ್ ಒಂದರಲ್ಲಿ ಹೊರಟಿದ್ದ. ಸೈಕಲ್ ಕ್ಯಾರಿಯರ್ ಮೇಲೆ ದಿನಪತ್ರಿಕೆ ಇಟ್ಕೊಂಡಿದ್ದ.
ನಿಲ್ಲಿಸಿ ಪೇಪರ್ ತೊಗೊಂಡೆ.
'ಐದು ರೂಪಾಯಿ' ಎಂದ.
'ಯಾವೂರು?' ಎಂದು ಕೇಳಿದೆ.
'ಹುನಗುಂದ' ಎಂದ.
'ಇಲ್ಲೇನು ಮಾಡ್ತಿದ್ದೀಯ?' ಎಂದು ಕೇಳಿದೆ.
'ಮತ್ತೆ ಪೇಪರ್ ಯಾಕೆ ಮಾರುತ್ತಿದ್ದೀಯ?
'ಓದೋಕೆ ದುಡ್ಡು ಬೇಕು' ಎಂದ
ಪರ್ಸ್ ಇಂದ ಹತ್ತು ಸಾವಿರ ಕೊಟ್ಟೆ.
'ನಂಗೆ ಬೇಡ' ಎಂದ.
'ತಗೋ ಇಟ್ಕೋ, ಚೆನ್ನಾಗಿ ಓದು' ಎಂದೆ.
'ಬೇಡ' ಎಂದ.
ನೋಟುಗಳನ್ನು ಕೈಯಲ್ಲಿ ತುರುಕಿದೆ.
ಅವನು ಕಣ್ಣು ಬಿಟ್ಟು ಹಾಗೆಯೇ ನೋಡಿದ.
ನನ್ನ ಕಾರು ನಿಧಾನಕ್ಕೆ ಮುಂದೆ ಸಾಗಿತು.
ಎದೆ ಹಗುರವಾಗಿ ತೇಲಾಡಿತು.
ಎಲ್ಲೂ ಸಿಗದ ಮುದ ಸಿಕ್ಕಿದ ಅನುಭವ.
ನನ್ನನ್ನೇ ಕಂಡ ಅನುಭವ.
ಅಂದ ಹಾಗೆ ಹುಡುಗನ ಹೆಸರು ಕೇಳೋದೇ ಮರೆತೆ...!

© peny

#inspiration