...

4 views

ಜಗ್ಗಿ ವಾಸುದೇವ್...
60+ !

ಅರವತ್ತು ವರ್ಷ ದಾಟಿದವರಿಗೆ ಸದ್ಗುರು ಜಗ್ಗಿ ವಾಸುದೇವ್ ಸಲಹೆಗಳು...

ಇನ್ನು ಹೆಚ್ಚು ವರ್ಷ ನಾವು ಬದುಕದೇ ಇರುವುದರಿಂದ, ನಾವು ಎಲ್ಲವನ್ನೂ ನಮ್ಮ ಜೊತೆ ಹೊತ್ತುಕೊಂಡು ಹೋಗಲಾಗದೇ ಇರುವುದರಿಂದ ನಾವು ಬಹಳ ಉಳಿತಾಯ ಮಾಡಬೇಕಿಲ್ಲ.

ಖರ್ಚು ಮಾಡುವ ಸಂಗತಿಗಳಿಗೆ ಹಣ ಖರ್ಚು ಮಾಡಿ. ಆನಂದಿಸಬೇಕಾದುದನ್ನು ಆನಂದಿಸಿ. ಏನು ದಾನ ಮಾಡಲು ಸಾಧ್ಯವೋ ಅದನ್ನು ದಾನ ಮಾಡಿ.

ನಾವು ಹೋದ ನಂತರ ಏನಾದೀತು ಎಂಬ ಚಿಂತೆ ಇಟ್ಟುಕೊಳ್ಳಬೇಡಿ. ಏಕೆಂದರೆ ನಾವು ಮಣ್ಣಿಗೆ ಮರಳಿದಾಗ ನಮಗೆ ಹೊಗಳಿಕೆ, ಟೀಕೆ ಎರಡೂ ಅಂಟುವುದಿಲ್ಲ. ಪ್ರಾಪಂಚಿಕ ಜೀವನ ಮತ್ತು ನೀವು ಕಷ್ಟಪಟ್ಟು ಗಳಿಸಿದ ಸಂಪತ್ತು ಎರಡನ್ನೂ ಆನಂದಿಸುವ ಸಮಯ ಮುಗಿದು ಹೋಗಿರುತ್ತದೆ.

ನಿಮ್ಮ ಮಕ್ಕಳ ಬಗ್ಗೆ ವಿಪರೀತ ಚಿಂತಿಸಬೇಡಿ. ಅವರಿಗೆ ಅವರದೇ ಆದ ನಿಯತಿ ಇರುತ್ತದೆ. ಅವರ ಹಾದಿಯನ್ನು ಅವರು ಕಂಡುಕೊಳ್ಳುತ್ತಾರೆ. ಅವರಿಗಾಗಿ ಲಕ್ಷ್ಯ ತೋರಿ, ಅವರನ್ನು ಪ್ರೀತಿಸಿ,...