...

2 views

"ಮನುಷ್ಯನ ವರ್ತನೆ ಅರಿಯದ ಸತ್ಯ....
"ಮನುಷ್ಯನ ಮನಸ್ಸು ಚಂಚಲ ಯಾವಾಗ ಹೇಗಿರುವನೋ ಹೇಳಲು ಸಾಧ್ಯವಿಲ್ಲ ಏಕೆಂದರೆ ಸಾವಿರಾರು ನೂರಾರು ಸದಾ ಯೋಚನೆಯಲ್ಲಿ ಮುಳುಗಿರುತ್ತಾನೆ.

ತನ್ನದೇ ಬದುಕ ಸಾಗಿಸುವಲ್ಲಿ ತನ್ನನ್ನೇ ಮರೆತಿರುತ್ತಾನೆ ತನ್ನಲ್ಲಿ ತಾನು ಯಂತ್ರವಾಗಿ ಬಿಡುತ್ತಾನೆ ಬಿಡುವು ಎನ್ನುವ ಸಮಸ್ಯೆಯು ಇಲ್ಲ
ಕಾಲವು ಉರುಳಿದಂತೆ ದಿನಗಳು ಕಳೆದಂತೆ

ಇನ್ನೂ ಧೃಡವಾಗುತ್ತಾನೆ ಆತ್ಮ ಬಲ ದೇಹ ಬಲದಿ
ಛಲವಂತನಾಗುತ್ತಾನೆ ಕಾರಣ ಇಷ್ಟೇ..ದುಡಿಮೆಯೇ ದೇವರೆಂಬ ಸತ್ಯವ ಅರಿತಿರುತ್ತಾನೆ ಬೇರಾವುದು ಅವನಿಗೆ ದೊಡ್ಡದಲ್ಲ ಮನುಷ್ಯ ಭಾವಜೀವಿ,

ತನ್ನಲ್ಲೇ ಎಲ್ಲವ ಭಾವಿಸುತ್ತಾನೆ ಚಿಕ್ಕ ವಿಷಯವು
ಅವನ ಕಲ್ಪನೆಯಲಿ ದೊಡ್ಡದೆಂಬಂತೆ ಗ್ರಹಿಸಿದಾಗ
ಭಾವದಲಿ ಮರಿಚಿಕೆಯಂತೆ ಕಾಲದಲ್ಲಿ ಬೆರೆಯುತ್ತಾನೆ.,

ಬದುಕಿನ ಭೆಲೆಯ ಜೀವನದ ಅರ್ಥ ತಿಳಿದವನಾಗಿರುತ್ತಾನೆ ಕಾಯುವ ತಾಳ್ಮೆ ಸಹನೆಯುಳ್ಳವ ಈ ಮನುಜ ಬದುಕಿನ ಸಹಜತೆ
ತಿಳಿದವ ಏಕಾಂತದಿ ಸಾಗುತ್ತಾನೆ..

ಮೌನದಿ ಒಂಟಿಯಾಗಿ ಭಾವದಲಿ ಮೌನಿಯಾಗಿ
ನಡೆದಾಗ ಅಂತರಾತ್ಮ ಅವನನ್ನು ಬಡಿದೆಬ್ಬಿಸಿದಾಗ
ತನ್ನಲಿ ಎಚ್ಚರವಾಗುತ್ತಾನೆ ಜೀವನದಿ ಸುಖಿಯಾಗುತ್ತಾನೆ ಕಲ್ಪನಕಾರ ಈ ಮಾನವ.

ಸುಂದರ ಪ್ರಪಂಚವ ಅವನಲ್ಲಿ ಸೃಷ್ಟಿಸುವ ಶಕ್ತಿಯ
ಕಣಜ ಈ ಮನುಷ್ಯನ ಮನಸ್ಸು ಅರಿತವ ಬದುಕಿನ ಸೊಗಸು ಅವನ ಧೈರ್ಯ ಬಲದ ಹುಮ್ಮಸ್ಸು ಸೋಲದ ಚಾಣಕ್ಯ ಈ ಮನುಷ್ಯ

ಅವನಿಗೆ ಅವನೇ ಸರಿಸಾಟಿ ಮಾನವ ಜನ್ಮ ದೊಡ್ಡದು ಸಂಬಂಧಗಳ ಸಾಗರ ಈ ಜೀವನ ನಡೆಸುವ ನೇಸರನಾಗುವನು ಎಂದಿಗೂ ಆಯಾಸವೆಂಬುದು ಅರಿವಿಗೆ ಬಾರದು.,

ಮಾನವ ನೆಪಮಾತ್ರವೇ ಆದರೆ ಶಕ್ತಿಯ ಚಾಲಕ
ತಲೆಯಲಿ ಯಂತ್ರ ವೇ ಚಲಿಸುತ್ತಿರುತ್ತದೆ ನೂರಾರು ಕಲೆಗಳ ಸರಧಾರ ಈ ಮಾನವ ಅವನ ಎಲ್ಲಾ ವರ್ತನೆ ಅವನೇ ಆಲಿಸದ ನಾವಿಕ ಜೀವನ ಸಾದಕ

ಮಾನವ ನೀ ನೆಪವು ನೀನೊಂದು ಜೀವವು
ನಿನಗಿದೋ ನನ್ನ ನಮಸ್ಕಾರ..,✍
👍 shobha 🙏