...

4 views

ಎರಡು ಘಟನೆ! ವಿಭಿನ್ನ ಮನಸ್ಥಿತಿ!
ಕೆಲಸದ ನಿಮಿತ್ತ ದೆಹಲಿಗೆ ಹೋಗ ಬೇಕಿತ್ತು.
ನಾವು ಮೂವರು ಗೆಳೆಯರು ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಮನಸಿಲ್ಲದ ಮನಸ್ಸಿನಿಂದ ಹೊರಟಿದ್ದೆವು. 6-7 ತಿಂಗಳ ಕೆಲಸವದು, ಆದರೆ ಮನೆಯವರನ್ನೆಲ್ಲ ಬಿಟ್ಟು 6-7 ತಿಂಗಳು ಇರುವುದು ಹೇಗೆ ಎಂಬುದೇ ಗೊಂದಲ.
ನಾವಿಬ್ಬರು ಹೇಗೊ ಮನಸ್ಸು ಗಟ್ಟಿ ಮಾಡಿ ಒಂದು ಬದಲಾವಣೆಯನ್ನು ಬಯಸಿ, ಹೊರಟಿದ್ದೆವು. ಆದರೆ ನಮ್ಮ ತಂಡದಲ್ಲಿದ್ದ ಮತ್ತೊಬ್ಬ ನಮ್ಮ ಸಹೋದ್ಯೋಗಿಗೆ ಅವನ ತಾಯಿಯನ್ನು ಬಿಟ್ಟು ಬರುವುದಕ್ಕೆ ಮನಸ್ಸಿರಲಿಲ್ಲ, ನನ್ನದು ಒಂದು ರೀತಿ ಅದೇ ಪರಿಸ್ಥಿತಿ, ಆದರೆ ಏನು ಮಾಡುವುದು ಪರಿಸ್ಥಿತಿ, ಹೇಗೊ 2 ತಿಂಗಳಿಗೊಮ್ಮೆ ಒಂದು ವಾರ ರಜೆ ಇರುತ್ತೆ, ಬಂದು ಹೋಗಲು ವ್ಯವಸ್ಥೆ ಕಂಪನಿಯವರೆ ಮಾಡ್ತೀವಿ ಅಂತ ಭರವಸೆ ಕೊಟ್ಟ ಮೇಲೆ, ಅವನಿಗೂ ಧೈರ್ಯ ಹೇಳಿ ಜೊತೆಯಲ್ಲಿ ಕರ್ಕೊಂಡ್ ಹೋದ್ವಿ. ರಾತ್ರಿ 8 ಕ್ಕೆ ರಾಜಧಾನಿ ಎಕ್ಸ್ ಪ್ರೆಸ್ ಗೆ ಹೊರಡಬೇಕಿತ್ತು,  ನಾವಿಬ್ರು 7-20ಕ್ಕೆಲ್ಲ ರೈಲ್ವೆ ಸ್ಟೇಷನ್ ತಲುಪಿ ಕಾಯ್ತಿದ್ರೆ 7-45 ಆದ್ರು ಅವನ ಪತ್ತೆ ಇಲ್ಲ, ಕಾಲ್ ಮಾಡಿದ್ರೆ ಅದು ಕನೆಕ್ಟ್ ಆಗ್ತಿಲ್ಲ ಏನು ಮಾಡೋದು ಅಂತ ಚಿಂತೆಯಲ್ಲಿರುವಾಗ್ಲೆ ಅವನ ಕರೆ ಬಂತು, ಅವನು ರೈಲ್ವೆ ಸ್ಟೇಷನ್ ತಲುಪಿದ್ದ, ಅವನನ್ನು ಬೀಳ್ಕೊಡಲು ಅವನ ತಮ್ಮ ಮತ್ತು ತಾಯಿ ಕೂಡ ಬಂದಿದ್ರು, ರೈಲು ಹೊರಡಲು ಇನ್ನು 10 ನಿಮಿಷ ಮಾತ್ರ ಉಳಿದಿತ್ತು,  ನಾವು ನಮ್ಮ ಪರಿಚಯ ಮಾಡ್ಕೊಂಡು ಅವನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಅಂತ ಹೇಳಿ ಅವರನ್ನು ಸಮಾಧಾನ ಮಾಡಿ, ಆಗಲೆ ತಡವಾಗಿದ್ದರಿಂದ ರೈಲು ಹತ್ತಿ ಕುಳಿತೆವು, ರೈಲು ಹೊರಡುವವರೆಗು ಆ ತಾಯಿ ಫ್ಲಾಟ್ ಫಾರಂನಲ್ಲಿ ನಿಂತೇ ಇದ್ದರು.

ಆ ಪ್ರೀತಿ...