...

1 views

ಹಣವೇ ಬದುಕಲ್ಲ ಗೆಳೆಯರೇ
ಕಥೆ :ಹಣದ ಮರ

ಮರ ಎಂದಾಗ ಹಸಿರು ಎಲೆ, ಹಣ್ಣು, ಕಾಯಿ, ರೆಂಬೆ, ಕೊಂಬೆ, ಎನ್ನುವ ಚಿತ್ರ ನಮ್ಮ ಕಣ್ಣಮುಂದೆ ಬರುತ್ತದೆ. ಆಸರೆ ನೀಡುತ ತ್ಯಾಗಮಾಡುವ ನಿಸ್ವಾರ್ಥ ಜೀವಿ ಎಂದು ನಾವು ಇಲ್ಲಿಯ ತನಕ ಬದುಕಿನುದ್ದಕ್ಕೂ ಸ್ಮರಿಸುತ್ತಾ ಬೆಳೆದಿದ್ದೇವೆ. ಆದರೆ ಇತ್ತೀಚೆಗೆ ದುರಾಸೆಯ ಗೋಡೆಯನ್ನು ಸುತ್ತಲೂ ಕಟ್ಟಿರುವ ಮನುಜನ ಮನದಂಗಳದಲಿ ಬೇರೂರಿ ಚಿಗುರೊಡೆಯುತ್ತಿರುವ ಸಮಾಜದ ಒಂದು ಪರಿಸ್ಥಿತಿಯ ರೂಪವೇ ಹಣದ ಮರ.
ಇಂದಿನ ಕಾಲದಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ಹಣವಿಲ್ಲದವನು ಹೆಣಕ್ಕೆ ಸಮಾನ, ಎನ್ನುವ ಗಾದೆಯ ಸತ್ಯ ಸ್ವರೂಪವನ್ನು ಕಾಣಬಹುದು. ಹಣ್ಣಿರುವ ಮರಕ್ಕೆ ಎಷ್ಟು ಮರ್ಯಾದೆ ಆರೈಕೆಯೋ ಹಾಗೆ ಹಣವಿರುವ ಮನುಜನಿಗೆ ರಾಜ ಮರ್ಯಾದೆ, ಯಾವ ಹಾದಿಯ ತುಳಿದು ಹಣ ಗಳಿಸಿದ ಎನ್ನುವುದಕ್ಕಿಂತ ಹಣ ಎಷ್ಟು ಲಕ್ಷ ಕೋಟಿ ಇಟ್ಟಿದ್ದಾನೆ ಎನ್ನುವುದೇ ಬಹು ಮುಖ್ಯ. ಇಂತಹ ಒಂದು ಪರಿಸ್ಥಿತಿಯಲ್ಲಿ ಶ್ರಮವೇ ಇಲ್ಲದೆ ಗಳಿಸುವ ಒಂದು ದಾರಿ ಸಿಕ್ಕರೆ ಎಷ್ಟು ಚೆಂದ ಅಂತಹ ಒಂದು ಸದಾ ಮನುಜಕುಲ ಬಯಸಿಯೇ ತೀರುವ ಒಂದು ಮನುಜ ಕಾಲ್ಪನಿಕ ಸೃಷ್ಠಿ ಎಂದರೆ ಅದು ಹಣದ ಮರ. ಅದೆಷ್ಟು ಅದ್ಭುತ ಪರಿಕಲ್ಪನೆ, ವಾಸ್ತವದಲ್ಲಿ ನಿಜವಾದರೆ ವಾಹ್! ಅದೆಷ್ಟು ಚೆನ್ನ, ಭಿಕ್ಷುಕ ಬೇಡುವುದನ್ನು
ನಿಲ್ಲಿಸುತ್ತಾನೆ, ಅನಾಥ ಸಂಭಂಧಗಳಲ್ಲಿ ಬೆಸೆಯುತ್ತಾನೆ, ಸಿರಿವಂತನ ಆಸೆ ಕೊನೆಗೊಳ್ಳಬಹುದೆನೋ? ಬಡವ ಸಿರಿತನದ ಹಾದಿಯನ್ನು ಹಿಡಿಯಬಹುದು ಜೊತೆಗೆ ತಮ್ಮ ತಲ ತಲಾಂತರದಿಂದ ಬಂದ ಕೆಲಸಗಳನ್ನು ಮರೆತು ಹಣದ ಹುಚ್ಚು ಇಡೀ ಸೃಷ್ಟಿಯನ್ನು ಆವರಿಸಿ ಅಂತ್ಯದ ಹಾದಿಗೆ ಆದಿಯಾಗುತ್ತಿತ್ತೇನೋ? ಕೊನೆಗೆ ಎಲ್ಲವೂ ಮರೀಚಿಕೆಯಾಗಿ, ಮರ ಒಣಗಿದರೆ ಆಸೆಗಳು ಅಳುತಿತ್ತು, ದುರಾಸೆ ನಗುತಿತ್ತು .
ಸ್ನೇಹಿತರೆ ಇದೊಂದು ನಗುವನ್ನು ತರಿಸುವ, ಆಶ್ಚರ್ಯವಾಗುವ, ಭಯವನ್ನು ಹುಟ್ಟಿಸುವ ಒಂದು ಸುಂದರ ಪರಿಕಲ್ಪನೆ ಆದರೂ ಸಹ, ಸೃಷ್ಟಿಯ ಸೊಬಗಿನಲಿ ಉಸಿರಿಗಾಗಿ ಹಸಿರನ್ನು ಬೆಳೆಸುವ ಕಾಯಕದಲಿ ಮನುಜಮತ ತಲ್ಲೀನನಾದುದರಿಂದ ಈ ಸೃಷ್ಠಿ ಇಷ್ಟಾದರೂ ಉಸಿರಾಡುತ್ತಿದೆ, ಇನ್ನು ಹಣದ ಮರವೇನಾದರೂ ಇದ್ದಿದ್ದರೆ ದುಡಿಯುವ ಕಾಯಕ ಮರೆತು ಹಣದ ಮರವನ್ನು ಬೆಳೆಸುತ ಆಹಾರವೇ ಇಲ್ಲದೆ ಹಸಿವು ದಾಹವ ಮರೆತು , ಕಾಲ್ಪನಿಕ ಜಗತ್ತಿಗೆ ಒಡೆಯನಂತೆ ಮೆರೆಯುತ್ತಿದ್ದ ಅಷ್ಟೆ. ಅದು ಕ್ಷಣಿಕ ಮಾತ್ರ ಬಡವ ಹಸಿವನ್ನು ಮರೆಯುತ್ತಿದ್ದ , ಸಿರಿವಂತ ಕೂಡಿಡುವುದೆ ಬದುಕೆಂದು ಬೆಳೆದು ಬೆಳೆದು ಅಸ್ಥೀಪಂಜರವಾಗಿ ನಶಿಸುತ್ತಿದ್ದ ಅಷ್ಟೆ.
ಇದೊಂದು ವಾಸ್ತವತೆಯ ಪ್ರತಿಬಿಂಬ ಗರ್ಭದಲ್ಲಿ ಜನಿಸುವ ಶಿಶುವಿನಿಂದ ಹಿಡಿದು ಮಣ್ಣಿಗೆ ಸೇರುವ ಕ್ಷಣದವರೆಗೆ ಹಣದ ಹೊಳೆಯೇ ಹರಿಸಿದರೆ ಮಾತ್ರ ಬದುಕು ಎಂದು ಬದುಕುವವರು ಕಾಣದ ಕಡಲನ್ನು ಸೇರಿ ಮಣ್ಣಿಗೆ ಮಾಣ್ಣಾಗಿ ಮತ್ತೊಂದು ಜೀವಿಯ ಜೊತೆಗೆ ಸೇರಿ ಮನಸನ್ನು ಆವರಿಸಿ ಆತ್ಮಕ್ಕು ಮನಸಿಗು ಇರುವ ಕೊಂಡಿಯನ್ನು ಮುರಿದು ಮಾನವೀಯತೆ, ಅನುಕಂಪ, ಮಾನವಧರ್ಮವನ್ನು ಕೊಂದುತ್ತಾ ಸಾಗುತ್ತಾ ಮತ್ತದೇ ಇನ್ನೊಂದು ಜೀವಿಯ ರಕ್ತವನ್ನು ಬಲವನ್ನು ಹೀರುವ ಜಾಲವಾಗಿ ಬೇರೂರಿ ಇಡೀ ಮನುಜ ಕುಲವನ್ನೆ ತನ್ನ ವಿಷದ ಬಲೆಯಿಂದ ಸಿಕ್ಕಿಸಿ ತೊಳಲಾಡುವಂತೆ ಮಾಡುವ ಒಂದು ಮರ.
ಬಂದುಗಳೇ ಯಾಕೆ ಬೇಕು ನಮಗೆ ಈ ಹಣದ ಮರ ಬದುಕನ್ನು ಅಳಿಸಿ ಕೆರಳಿಸಿ ನೋಯಿಸಿ ನಿಧಾನವಾಗಿ ಆವರಿಸಿ ನಮ್ಮ ಅಸ್ತಿತ್ವವನ್ನೆ ನಮಗೆ ಅರಿವಿಲ್ಲದಂತೆ ಕಿತ್ತುಕೊಂಡು ನಿಧಾನವಾಗಿ ಮೆಲ್ಲುತ್ತ ಕುಹುಕು ನಗೆಯಿಂದ ಬೆನ್ನ ಹಿಂದೆ ಹೊಂಡ ತೋಡುವ ಕೆಲಸ ಈ ಹಣದ ಮರ ತನ್ನ ಬೇರು ಕಾಂಡ ಬೀಜಗಳಿಂದ ಇಡೀ ವಿಶ್ವವನ್ನೇ ಕಬಳಿಸುವ ಕಾರ್ಯವನ್ನು ಮಾಡಲು ಬಿಡದೆ ಶ್ರಮದಿಂದ ಗಳಿಸಿದವನೆ ಜಗದಲಿ ಉತ್ತಮನು ಎಂದು ಬದುಕೋಣ ಬನ್ನಿ ಪ್ರಕೃತಿ ಸಂಪತ್ತು ಇಡಿ ಜಗತ್ತಿಗೆ ಉಚಿತವಾಗಿ ದೊರೆಯುವ ಬಹು ದೊಡ್ಡ ಸೃಷ್ಟಿಯ ವಿಸ್ಮಯ ಇದರಿಂದಲೇ ಕೊಲಕೋಟಿ ಜೀವನ ರಾಶಿಗಳು ಉಸಿರಾಡಲು ಗಾಳಿ ನೀರು ಬೆಳಕು ಸುಂದರ ವಾತಾವರಣ ನಿರ್ಮಾಣದ ಮಧ್ಯೆಯೇ ಇದ್ರು ಮನುಷ್ಯನ ಜೀವ ಸಣ್ಣದು ಪ್ರತಿ ಕ್ಷಣ ಹುಚ್ಚ ಹುಚ್ಚ ಆಸೆಗಳ ಕಲ್ಪನೆಯೇ ಜೊತೆಗೆ ಹಣದ ಆಸೆಗೆ ಒಳಗಾಗಿ ಉತ್ತಮ ರೀತಿಯ ಕಾರ್ಯಗಳಿಗಿತಲು ಕೆಟ್ಟ ಅನ್ಯ ಮಾರ್ಗಗಳಲ್ಲಿ ವೇಗವಾಗಿ ಹಣಮಾಡು ದಾರಿಯಲ್ಲಿ ಯುವ ಜನತೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ಬೆಲೆ ನೀಡದೆ ಗುರು ಹಿರಿಯರ ಮೌಲ್ಯ ತಿಳಿಯದೇ ಆತ್ಮಸಾಕ್ಷಿಗೆ ವಿರುದ್ಧವಾಗಿ ಅದೆಷ್ಟೋ ದೃಷಚಟಗಳಿಗೆ ಬಲಿಯಾಗಿ ಕುಟುಂಬದ ಗೌರವವನ್ನು ಅಳಮಾಡಿ ಸಮಾಜಕ್ಕೆ ದೃಷರು ಎಂಬ ಅಣಿಪಟ್ಟಿಯನ್ನು ಪಡೆದು ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಸಮನ್ವಯತೆ ಕೊರತೆಯಿಂದಾಗಿ ಕೇವಲ ಹಣ ಮಾಡುವ ಉದ್ದೇಶದಿಂದ ಕಳ್ಳತನ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿವ ಅನೇಕ ಯುವಕರು ಅಕ್ಷರಸ್ಥರೆ ನಮಗೆ ಕಾಣುತ್ತಾರೆ ಗೆಳೆಯರೇ ಅಂದರೆ ನಾವು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಉಳಿಸಿ ಕೊಳ್ಳದೇ ಕೇವಲ ಹಣ ಹಣ ಎಂದು ಬೇರೆ ಎಲ್ಲವನ್ನೂ ಬಿಟ್ಟು ಬಿಡಬಾರದು ಶ್ರಮದ ಕೆಲಸದಿಂದ ದುಡಿಮೆ ಎಂದಿಗೂ ಶಾಶ್ವತ ನಾವು ನಮ್ಮಂದು ಎಂಬುದು ಕೇವಲ ಕಾಲ್ಪನಿಕ ನಮ್ಮ ಉಸಿರು ಇಲ್ಲದಿದ್ದರೂ ಸಹ ಪ್ರಕೃತಿ ತಮ್ಮ ಕೊಡುಗೆ ನಿಲ್ಲಿಸುವುದಿಲ್ಲ ದಯವಿಟ್ಟು ಗಿಡ ಮರ ಬಳ್ಳಿಗಳು ತಾವಾಗಿಯೇ ಮನುಷ್ಯನ ನಿಷ್ಕಲ್ಮಶ ಪ್ರೀತಿ ವಾತ್ಸಲ್ಯಕ್ಕೆ ಮಮತೆಯನ್ನು ಉಳಿಯಲು ಬೆಳೆಯಲು ಸಾಧ್ಯ ನಮ್ಮ ಆಹಾರ, ವಸತಿ, ಪ್ರತಿ ಒಂದು ನಿಸರ್ಗದ ಭಿಕ್ಷೆಯೇ ಸರಿ ನಾವು ಜೀವಿಸುವ ಕಾಲದವರಿಗೂ ಉತ್ತಮ ಕಾರ್ಯಗಳಿಗೆ ಕೈ ಜೋಡಿಸಿ ನಮ್ಮ ತಂದೆ ತಾಯಿ ಸ್ನೇಹಿತರಿಗೆ ಗೌರವತರುವ ರೀತಿ ಬದುಕೋಣ ಎಂಬುದು ಬುದ್ಧಿ ಜೀವಿಗಳ ಕಳಕಳಿಯ ಮನವಿ ಆಗಿದೆ.ಅದೇ ರೀತಿ ಅಧುನಿಕ ಯುಗದಲ್ಲಿ ಯಾಂತ್ರಗಳ ಮೇಲೆ ಅವಲಂಬಿತವಾಗಿದೆ ಎಲ್ಲವನ್ನೂ ಹಣದಿಂದಲೇ ಅಳೆಯುವ ಮಾನದಂಡ ಹುಟ್ಟಿಕೊಂಡಿದೆ ಪ್ರಪಂಚ ಎಷ್ಟೇ ಮುಂದುವರಿದರೂ ಪರಿಸರದ ಮುಂದಿನ ಎಲ್ಲಾ ಹಣದ ಸಂಪತ್ತು ಶೂನ್ಯವೇ ಸರಿ ಗೆಳೆಯರೇ.......

ಚಂದು ವಾಗೀಶ ದಾವಣಗೆರೆ