...

6 views

ಆ ನೀಲಿ ಕಣ್ಣು


ಹಾಗೆ ಮನಸ್ಸಿಗೆ ಬೇಸರವಾಗಿ ನಡೆಯುತ್ತಿದ್ದೆ ಕತ್ತಲಾಗಿದ್ದೆ ಗೊತ್ತಾಗಲಿಲ್ಲ ಏನೋ ಯೋಚಿಸುತ್ತ ಕುಳಿತಿದ್ದೆ ಅಷ್ಟರಲ್ಲೆ ಅಲ್ಲೊಬ್ಬ ಮಹಿಳೆ ಅಳುತ್ತಿದ್ದಿದ್ದು ಕಿವಿಗೆ ಬಿತ್ತು ಮಾತಾಡಿಸುವ ಅಂತ ಏನಮ್ಮಾ ಯಾಕೆ ಅಳುತ್ತಿರುವೆ‌ ಎಂದು ಕೇಳಿಬಿಟ್ಟೆ ಅವಳು ನನ್ನ ಒಮ್ಮೆ ತಲೆ ಎತ್ತಿ ನೋಡಿದಳು ಕಣ್ಣೋರೆಸುತ್ತಾ ಹಾಗೆ ತೊದಲಿಸುತ್ತಾ ನನ್ನ ಹೆಸರು ಪರಿ ಎಂದಳು... ಆಹಾ!ಅವಳೊಂದು ಅಪ್ಸರೆಯಂತಿದ್ದಳು ಆ ನೀಲಿ ಕಣ್ಣುಗಳು ಮಾತಾಡಿದವು ಕಂಬನಿಸುರಿಸುತ್ತಲೆ!..

ನಾನೊಬ್ಬಳು ನತದೃಷ್ಟೇ ಏನೆಂದು ಹೇಳಲಿ ನನ್ನ ಗೋಳು ನೀವು ನಡೆಯಿರಿ ಸುಮ್ಮನೆ ಎಂದಳು.. ಆದರೆ ನಾನು ಮತ್ತೆ ಹೇಳಿದೆ ಹಾಗೆನಿಲ್ಲ ನೀನು ಹೇಳು ಏನಾಯಿತು ನಿನಗೆ ಏಕೆ ಇಷ್ಟೋಂದು ರೋಧನೆ ಹೇಳು ಏನಾಯಿತು... ಎಂದು ಮತ್ತೆ ಮತ್ತೆ ಕೇಳಿದೆ... ಆಗ ಅವಳು ತಡವರಿಸುತ್ತಾ ಮಾತಾಡತೊಡಗಿದಳು ಈ ನನ್ನ ಮುಖದ ಚೆಲುವು ‌ನನ್ನ ಜೀವನವ ಹಾಳು ಮಾಡಿಬಿಟ್ಟಿತು..ಸುಂದರವಾಗಿರುವುದೇ ಶಾಪವಾಯಿತು ಎನಗೆ ಎಂದಳು ಅಯ್ಯೋ!..ಏಕೆ ಏನಾಯಿತು ಅಂತಾ ಪರಿಸ್ಥಿತಿ ನನ್ನಲ್ಲಿ ಹೇಳಿ ಮನಸು ಹಗುರ ಮಾಡಿಕೊಳ್ಳಿ ಎಂದು ಹೇಳಿದೆ... ಮಾತು ಮುಂದುವರಿಸುತ್ತಾ ....ಹೇಳಿದಳು ಾನಾನೊಬ್ಬಳು ಅದ್ಭುತ ನಟಿಯಾಗ ಬೇಕೆಂದು ಕೊಂಡೆ ಆದರೆ.... ನನ್ನ ಸ್ವಂತದವರೆ ಎನ್ನ ಕನಸುಗಳನ್ನು ನನ್ನನ್ನು ಕೊಂದು ಹಾಕಿದರು... ಬೇಕಾದ ರೀತಿಯಲ್ಲಿ ಪರಿಪರಿಯಾಗಿ ಹಿಂಸಿ‌ಸಿ ಕಿತ್ತು ತಿಂದರು ಹೇಳುತ್ತಾ ಜೋರಾಗಿ ಅತ್ತಳು....

ಅವಳ ಕಣ್ಣೀರು ಕಂಡು ಎನಗೇನು ಹೇಳಬೇಕೋ ತಿಳಿಯಲಿಲ್ಲ ಕೊಂದರೂ ಅಂದಳಲ್ಲವೇ!? ಮತ್ತೆ ನನಗೆ ಹೇಗೆ ಮಾತಾಡಿಸಿದಳು ಎಂದು ಯೋಚನೆ ಆಯಿತು! ಹೋ..! ನೋವಿನಿಂದ ಹಾಗಂದಿರಬೇಕೆಂದು ಸುಮ್ಮನೆ ಕೇಳುತ್ತಾ ಕುಳಿತೆ ಅಳಬೇಡಿ ಏನಾಯಿತು ಎಂದು ಸರಿಯಾಗಿ ಹೇಳುವಿರಾ ಎಂದು ಕೇಳಿದೆ ಬಡಬಡಿಸುತ್ತಾ..

ಅವಳೆಂದಳು ನನಗೆ ನ್ಯಾಯ ದೊರಕಿಸಿ ಕೊಡುವಿರೆ ಎಂದು ಆಗ ಸರಿ ಏನಾಗಬೇಕು ಹೇಳು ನಿನಗೆ ಅನ್ಯಾಯವಾಗಿದ್ದರೆ ಖಂಡಿತವಾಗಿ ಸಹಾಯ ಮಾಡಲು ಯೋಚಿಸುವೆ ಎಂದೆ ... ಅವಳ ದುಃಖತಪ್ತ ಮಾತುಗಳು ನನಗೂ ಬಹಳ ಬೇಸರ ತರುತ್ತಿದ್ದವು; ಏನಾಗಿರಬಹುದು ?ಅವಳ ಜೀವನದಲ್ಲಿ ಎಂದು ಆಲೋಚನೆ ಎನ್ನ ತಲೆ ಕೆಡಿಸತೊಡಗಿತ್ತು... ಅಳುವ ಮುಖವ ನೋಡಿ ಎನ್ನ ಮನಸಿಗೂ ಬಹಳ ಘಾಸಿಯಾಗಿತ್ತು... ಆ ರೀತಿ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಳು. ನೋಡಲು ತುಂಬಾ ಚೆಂದ ಒಂದು ಬಾರಿ ಅವಳ ನೋಡಿದರೆ ಯಾರಾದರೂ ಒಮ್ಮೆಗೆ ಕಳೆದೇ ಹೋಗುವರೋ ಏನೋ ಎಂಬಂತಾ ಚೆಲುವು ಅವಳದ್ದು ಎಷ್ಟು ಹೊಗಳಿದರೂ ಕಡಿಮೆಯೆ ಆಗಬಹುದೇನೋ.. ಸರಿ ಅವಳು ಕೊಂಚ ಸುಧಾರಿಸಿಕೊಂಡು ಮಾತನಾಡಲು ಶುರುಮಾಡಿದಳು ಕೇಳೋಣ ಏನಾಗಿದೆ ..!?ಎಂದು ಅವಳೇಕೆ ಹೀಗೆ ರೋಧಿಸುತ್ತಿರುವಳೆಂದು ಅಂತ ಅವಳ ಮಾತುಗಳ ಆಲಿಸತೊಡಗಿದೆ..!

ನಾನು ಮಂಡಗಾವಿ ಸಮೀಪದವಳು ನನಗೆ ನಟನೆ ಎಂದರೆ ಬಲು ಇಷ್ಟ ಅದನ್ನು ತಿಳಿದಿದ್ದ ನನ್ನ ಚಿಕ್ಕಪ್ಪ ಸಹಾಯ ಮಾಡುವೆ ದೊಡ್ಡ ನಾಯಕಿಯನ್ನಾಗಿ ಮಾಡುವೆ ಎಂದು ಹೇಳಿದರು ನನಗೆ ಎಲ್ಲಾ ನಿರ್ಮಾಪಕರ ಪರಿಚಯವಿದೆ ಎಂದು ಕರೆದುಕೊಂಡು ಮುಂಬೈಗೆ ಬಂದರೂ ಇಲ್ಲಿ ನೋಡಿದರೆ!.. ನನ್ನನ್ನು ಮಾರಿದ್ದಾರೆ ಲಕ್ಷಗಟ್ಟಲೆ ಹಣಕ್ಕಾಗಿ ಕೆಟ್ಟವರ ಕೈಗೆ ಸಿಕ್ಕಿಕೊಂಡ ನನ್ನನ್ನು ದೇಹದ ಮೇಲಿನಾಸೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ.. ಇದನ್ನೆಲ್ಲಾ ಸಹಿಸಿ ತಪ್ಪಿಸಿಕೊಂಡು ಹೇಗೋ ಅವರುಗಳು ಮಾಡುವ ಹೀನಕೃತ್ಯವನ್ನು ಸೆರೆಹಿಡಿದಿದ್ದೆ ಅದನ್ನು ಹೇಗಾದರೂ ಆರಕ್ಷಕರಿಗೆ ತಿಳಿಸಿ ನನ್ನಂತೆ ಕಷ್ಟದಲ್ಲಿರುವ ಹೆಣ್ಣುಮಕ್ಕಳ ಜೀವನ ಸರಿ ಮಾಡಬೇಕೆಂದುಕೊಂಡಿದ್ದೆ ಆದರೆ ಹೇಗೋ ಅವರಿಗೆ ನಾನು ಓಡಿಹೋಗಿ ಪೋಲಿಸರ ಬಳಿ ಹೇಳುವೆನೆಂದು ತಿಳಿದು ಕಣ್ಣುತಪ್ಪಿಸಿ ಬರುವಾಗ ನನ್ನ ಅಟ್ಟಿಸಿಕೊಂಡು ಬಂದಿದ್ದಾರೆ... ತಪ್ಪಿಸಿಕೊಂಡು ಬಂದು ನಾನು ಈ ಮರದ ಆಚೆ ಕಡೆ ಇರುವ ಮನೆಯಲ್ಲಿ ಅಡಗಿ ಕೂತಿದ್ದೆ ಆದರೂ ಅವರು ನನ್ನ ಬಿಡಲಿಲ್ಲ ಹುಡುಕಿಕೊಂಡು ಬಂದಿದ್ದಾರೆ ನನ್ನನ್ನು ಅಚೆ ಇಚೆ ಓಡದಂತೆ ಹಿಡಿದು ಕಟ್ಟಿಹಾಕಿ ಹಿಂಸಿಸಿದ್ದಾರೆ ನನ್ನ ಬಳಿಯಿರುವ ಸಾಕ್ಷಿಕೊಡೆಂದು ಹೇಳಿ ನನ್ನ ಮೈಯ್ಯೆಲ್ಲಾ ಘಾಸಿಗೊಳಿಸಿದ್ದಾರೆ ನಾನು ಆದರೂ ಕೊಡಲಿಲ್ಲ ಕಳೆದು ಕೊಂಡಿರುವೆ ನನ್ನ ಬಿಟ್ಟು ಬಿಡಿ ಎಂದರೂ ನನ್ನ ಬಿಡದೆ ಚಿತ್ರ ಹಿಂಸೆ ಕೊಟ್ಟು ಕೊಂದು ಹಾಕಿದ್ದಾರೆ ನನ್ನ ದೇಹವೂ ಅಲ್ಲೇ ಇದೆ ಅದನ್ನು ಪೋಲಿಸರಿಗೆ ತಿಳಿಸಿ ನನಗೆ ನ್ಯಾಯ ಕೊಡುತ್ತೀರ..? ಬೇಕಾದ ಸಾಕ್ಷಿ ನಾನು ಧರಿಸಿರುವ ಒಳ ಉಡುಪಿನೊಳು ಬಚ್ಚಿಟ್ಟಿರುವೆ ಅದನ್ನು ಅರಕ್ಷಕರಲ್ಲಿ ತಿಳಿಸಿ ನ್ಯಾಯ ದೊರಕಿಸಿ ಕೊಡಿ ಎಂದು ಜೊರಾಗಿ ಅತ್ತಳು .
ಒಂದು ಕ್ಷಣ ನನ್ನ ಮೈ ಜುಮ್ ಎಂದಿತು..! ಇಷ್ಟು ಹೊತ್ತು ಮಾತಾಡಿದ್ದು ಆತ್ಮದ ಜೊತೆಗೆಯೇ ಅಬ್ಬಾ! ಇದೆಲ್ಲಾ ನಿಜವೇ ಅಥವಾ ನನ್ನ ಭ್ರಮೆಯೇ ಎಂದು ನನ್ನ ಕೈಯ ಚಿವುಟಿಕೊಂಡೆ ಅಯ್ಯೋ..!? ಅಲ್ಲ ಇದು ಭ್ರಮೆಯು ಅಲ್ಲಾ ಕನಸೂ ಅಲ್ಲ ನಿಜವಾಗಿಯೂ ನಡೆಯುತ್ತಿರುವ ಘಟನೆ.. ಛೇ ಎಷ್ಟೋಂದು ಕಷ್ಟ ಅನುಭವಿಸಿದ್ದಾಳೆ ಈ ಚೆಲುವೆ... ಸತ್ತರೂ ಕೆಲವೊಂದು ಆತ್ಮಗಳು ತನ್ನ ಹಗೆಯನ್ನು ತೀರಿಸದೇ ಬಿಡುವುದಿಲ್ಲ ಎಂದೂ ಎಲ್ಲೊ ಕೇಳಿದ್ದೆ ಕೆಲವೊಂದು ಪುಸ್ತಕದಲ್ಲೂ ಓದಿದ ನೆನಪು ಆಯಿತೂ ಈಗ ಅದು ನನ್ನ ಕಣ್ಣಮುಂದೆಯೇ ನಡೆಯುತ್ತಿದೆಯಲ್ಲವೇ ಎಂದು ಒಂದು ಬಾರಿ ಮನಸು ದಿಗ್ಭ್ರಮೆಗೊಳಗಾಯಿತು!!? ಆ ಆತ್ಮದ ಕಥೆಯನ್ನು ಕೇಳಿ ಸಹಾಯ ಮಾಡಲೇ ಬೇಕೆಂದು ನಿರ್ಧರಿಸಿದೆ.. ಪರಿ ನೀನು ಅಳಬೇಡ ಎಲ್ಲವನ್ನು ಪೋಲಿಸರಿಗೆ ತಿಳಿಸಿ ನಿನಗೆ ನ್ಯಾಯ ದೊರಕಿಸಿಕೊಡುವೆ ನಿನ್ನ ಆತ್ಮಕ್ಕೆ ನೆಮ್ಮದಿ ಸಿಗಲಿ ಎಂದು ಹೇಳಿ ಅಲ್ಲಿಂದ ಹೊರಟೆ ಆರಕ್ಷಕ ಠಾಣೆಗೆ...

ಪೋಲಿಸರ ಬಳಿ ಬಂದು ದೂರು ನೀಡಿದೆ ನನ್ನ ಗೆಳತಿಯನ್ನು ಕೊಂದಿದ್ದಾರೆ ದಯಮಾಡಿ ನ್ಯಾಯಕೊಡಿಸಿಯೆಂದು ತಕ್ಷಣವೇ ಕಾರ್ಯನಿರತರಾದ ಪೋಲಿಸರು ಎನ್ನ ಜೊತೆಗೆ ಘಟನೆ ನಡೆದ ಸ್ಥಳಕ್ಕೆ ಬಂದರು ಹಾಗೆ ಹೇಳಿದೆ ಅವಳು ಸಾಯುವ ಮುನ್ನ ನನಗೆ ಕರೆಮಾಡಿ ನನಗೆ ಈ ಪರಿಸ್ತಿತಿ ತಂದ ರಾಕ್ಷಸರ ವಿರುದ್ಧದ ಸಾಕ್ಷಿ ಎಲ್ಲಿ ಇಟ್ಟಿದ್ದಾಳೆ ಎಂದು ಹೇಳಿದ್ದಾಳೆ ಅವಳ ಒಳ ಉಡುಪಿನೊಳಗಿದೆ ದಯಮಾಡಿ ಕೂಲಂಕುಷವಾಗಿ ಪರಿಶೀಲಿಸಿ ಅವಳಿಗೆ ನ್ಯಾಯಕೊಡಿಸಿ ಎಂದು ಹೇಳಿದೆ... ಪೋಲಿಸರು ತನಿಖೆ ಮಾಡಿ ಸಾಕ್ಷಿ ಸಮೇತವಾಗಿ ಅವಳ ಚಿಕ್ಕಪ್ಪ ಹಾಗು ಇನ್ನುಳಿದ ಪಾಪಿಗಳನ್ನು ವಶಕ್ಕೆ ಪಡೆದರು ಆ ಪಾಪಿಗಳ ವಶವಾಗಿ ನರಕ ಪಡುತ್ತಿದ್ದ ಹೆಣ್ಣುಮಕ್ಕಳ ರಕ್ಷಣೆಯು ಆಯಿತು..
ಎಲ್ಲಾ ಸುಖಾಂತ್ಯವಾದಾಗ ಮನಸಿಗೆ ಸಂತೋಷವಾಯಿತು ಆ ಆತ್ಮವು ಖುಷಿಪಟ್ಟು ಸಾಗಿರಬಹುದು ಎಂದುಕೊಂಡು ಮನೆಕಡೆ ನಡೆದೆ ಆಗಸದಿಂದ ನಕ್ಷತ್ರದೊಳು ಅವಳ ಮುಖವ ಕಂಡಂತಾಯಿತು ಏನೋ ನೆಮ್ಮದಿಯ ಭಾವ ಅವಳಲ್ಲಿ.....ಹಾಗೆ ನಡೆದೆ ಎಲ್ಲವ ಮರೆತು. ಒಂದು ಕ್ಷಣದಲ್ಲಿ ನನ್ನ ನೋವೆಲ್ಲಾ ಮರೆತೇ ಹೋಯಿತು ಈ ಜೀವನದಲ್ಲಿ ಏನೇನು ನಡೆಯುವುದೋ ತಿಳಿಯದಲ್ಲ ಎಂದು ಯೋಚಿಸುತ್ತಾ ಮನೆಗೆ ಬಂದು ಮಲಗಿದೆ ಏನೋ ಒಂದು ಮನದಲ್ಲಿ ಸಂತೋಷದಿಂದ ಏನೋ ಸಾಧಿಸಿದಂತಾ ಖುಷಿ ನನಗೆ.


© ಸುಮನ.ಜಿ.ಕಾರಂತ್