...

4 views

ದೇಶ ಪ್ರೇಮಿಗಳ ದಿನವಿದು...!!
ಪ್ರೀತಿಯ ಸೈನಿಕರೇ....!!!

Rose Day....!!!
ಕೈಯೆಲ್ಲಾ ನೆತ್ತರಿನೊಕುಳಿ ಶತ್ರುಗಳ
ಎದೆ ಬಗೆದಲೆಲ್ಲಾ ಧೈರ್ಯ ದ ಕೆಂಪಿನ ರಂಗು
ರಕ್ತದ ಕೆಂಪನಲೇ ಭಾರತಾಂಬೆಯ ಪಾದ
ತೊಳೆದು ತಿಲಕವಿರಿಸುವ ನಿಮಗೆ
,ಕೆಂಗುಲಾಬಿಯ ಕೈಯಲ್ಲಿಟ್ಟು ಹರಸುವೆವು
ಓ ವೀರ ಯೋಧರೆ We love you....❤️❤️
★★★★
Prapose Day...!!!
ಪ್ರತಿಕ್ಷಣ ಸಾವಿನ ಸಮೀಪವಿದ್ದರು ಅದರ ಅರಿವಿದ್ದರೂ ನಗು ನಗುತ್ತಲೇ ದೇಶದ ಒಳಿತ ಬಯಸಿ ವೀರಾವೇಶದಿ ಎದೆಗೊಟ್ಟು ಹೊರಾಡುವ ವೀರ ಸೈನಿಕರೇ
ನಮದೊಂದು ನಿವೇದನೆಯಿದೆ ನಿಮಗೆ..,ಮತ್ತೆ ಮತ್ತೆ ಭಾರತದ ಮಣ್ಣಲ್ಲೇ ಜನಿಸಿ ಬನ್ನಿ ನಿಮ್ಮ ಸೇವೆಯ ಋಣ ತೀರಿಸುವ ಹಂಬಲವೊಂದಿದೆ ನಮಗೆ.
ಓ ವೀರ ಯೋಧರೆ We love you....❤️❤️
★★★★
Chocolate Day...!!!
ಸಿಹಿಯಾದ ಹೃದಯಕ್ಕೆ ದೇಶಭಕ್ತಿಯ ಒಲವ ತುಂಬಿ
ಪ್ರತಿಕ್ಷಣ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮ ಸಿಹಿ ಕನಸುಗಳನೆಲ್ಲಾ ದೇಶಕರ್ಪಿಸಿ ಭಾರತವ ಪ್ರತಿದಿನ ಸಿಹಿ ನಿದ್ದೆಗೆ ಜಾರುವಂತೆ ಕಾಯುವ ನಿಮಗೆ ನಮ್ಮ ಸಿಹಿಯಾದ ಮಾತೊಂದಿದೆ ನಿಮ್ಮ ಹೆತ್ತ ತಾಯಿಯ ಒಡಲು ಸದಾ ತಂಪಾಗಿರಲಿ
ಓ ವೀರ ಯೋಧರೆ We love you....❤️❤️
★★★
Teddy Day...!!!
ಮುದ್ದು ಮುದ್ದು ಗೊಂಬೆಯಂತ ತಮ್ಮ ಕಂದಮ್ಮಗಳ ಸ್ಪರ್ಶವಿಲ್ಲದೇ,ತೊದಲ ನುಡಿಯ ಅವರ ಬಾಲ್ಯದಅತ್ಯಮೂಲ್ಯ ದಿನಗಳ ಸಮೀಪ ಕಳೆಯುವ ಅವಕಾಶವಿಲ್ಲದೆ ಹೊತ್ತ ತಾಯಿಯ ಸದಾ ಲಾಲಿಸುವ ನಿಮಗೆ ನಾವೇನು ಕೊಡಲು ಸಾಧ್ಯ ನಿಮ್ಮ ಗೊಂಬೆಯಂತ ಮುಗ್ಧ ಮನಸ್ಸಿನ ತ್ಯಾಗಕ್ಕೆ.
ಓ ವೀರ ಯೋಧರೆ We love you....❤️❤️★★★
Promise Day...!!!
ದೇಶ ಕಾಯುವ ಆಣೆ ಇಟ್ಟು ಹೆತ್ತವರ ದೂರ ಇಟ್ಟು ಹೆತ್ತ ತಾಯಿಗಿಂತ ಹೊತ್ತ ಭೂಮಿ ಮಿಗಿಲೆಂದು ಆ ಆಣೆಗೆ ಬದ್ದರಾಗಿ ಅನುಕ್ಷಣ ಕಾಯುವ ನಿಮಗೆ
ನಮ್ಮದೊಂದು ಭರವಸೆಯಿದೆ ನಿಮ್ಮ ಸದಾ ಗೌರವಿಸಿ ನಿಮ್ಮ ಶೌರ್ಯ ವ ಆರಾಧಿಸುತ್ತೇವೆ
ಓ ವೀರ ಯೋಧರೆ We love you....❤️❤️
★★★
Kiss Day...!!!
ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ನೆಲದ ಮಣ್ಣಿಗೆ ಮುತ್ತಿಟ್ಟು ಮತ್ತೆ ಇಲ್ಲೇ ಹುಟ್ಟಿ ನಿನ್ನ ಸೇವೆಗೆ ಅವಕಾಶ ಕೊಡು ಎನ್ನುತ್ತಲೇ ಮಡಿವ ವೀರ ಯೋಧರೆ ನಿಮಗೆ ಭಾರತಾಂಬೆಯ ಕುಡಿಗಳ ಭರವಸೆಯ ನಲ್ಮೆಯ ಸಿಹಿ ಮುತ್ತೊಂದಿದೆ.
ಓ ವೀರ ಯೋಧರೆ We love you....❤️❤️
★★★
Hug Day...!!!
ಹೆತ್ತ ತಾಯಿ,ಮಡದಿ ಮಕ್ಕಳ ಒಲವ ಅಪ್ಪುಗೆಯಿಂದ ವಂಚಿತರಾಗಿ, ದೂರದಿಂದಲೇ ಅವರನ್ನು ಪ್ರೀತಿಸುತ್ತಾ ಹಂಬಲಿಸುತ್ತಾ ,ನಿತ್ಯಭಾರತ ಮಾತೆಯನ್ನೇ ಅಪ್ಪಿ ನಡೆವ ನಿಮಗೆ ಕೋಟಿ ಕೋಟಿ ಭಾರತೀಯರ ಸಿಹಿ ಅಪ್ಪುಗೆಯಿದ
ಓ ವೀರ ಯೋಧರೆ We love you....❤️❤️
★★★
Valentine's Day...!!!
ನಿಮ್ಮ ಹೃದಯಕ್ಕೆ ಎಂದಿಗೂ ದೇಶವೇ ಮೊದಲ ಸಂಗಾತಿ ಅದರ ಹಿತಕ್ಕಾಗಿಯೇ ಈ ದಿನ ಮಡಿದ ವೀರ ಯೋಧರೆ
ಮತ್ತೆ ಹೋರಾಡುತ್ತಿರುವ ಧೀರ ಯೋಧರೆ ನಿಮಗಾಗಿ ನಮ್ಮೆಲ್ಲರಾ ಹೃದಯಗಳು ಸದಾ ಮಿಡಿಯುತ್ತಿರುತ್ತದೆ.
ಓ ವೀರ ಯೋಧರೆ We love you....❤️❤️

-ಮೌನ ಹೃದಯ