...

0 views

ಕನಕದಾಸ..
ಕನ್ನಡ ಸಾರಸ್ವತ ಲೋಕದಲ್ಲಿ ದಾಸ ಪಂಥವು ಅತ್ಯಂತ ಮುಖ್ಯವಾದ ಭೂಮಿಕೆಯನ್ನು ವಹಿಸಿದೆ. ಹಲವಾರು ದಾಸರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ತಮ್ಮ ನವರಸಪೂರ್ಣವಾದ, ಅನನ್ಯವಾದ ಆಧ್ಯಾತ್ಮಿಕ ಚಿಂತನೆಗಳಿಂದ ಶ್ರೀಮಂತಗೊಳಿಸಿದ್ದಾರೆ. ಇಂತಹ ಅನೇಕ ದಾಸವರೇಣ್ಯರ ಪಟ್ಟಿಯಲ್ಲಿ ಕನಕದಾಸರ ಹೆಸರು ಕಲಶಪ್ರಾಯವಾಗಿದೆ.

ಕನಕದಾಸರ ಬಾಲ್ಯ ಹಾಗೂ ಯೌವನಾವಸ್ಥೆಯ ಬಗ್ಗೆ ಕೆಲವು ಮಾಹಿತಿಗಳು ದೊರೆತಿರುವುವಾದರೂ ಅವುಗಳು ಪರಿಪೂರ್ಣವಾಗಿರುವುದಿಲ್ಲ.

ಆದ್ದರಿಂದಲೇ, ಇವರ ಜನನ, ಬಾಲ್ಯ ಮತ್ತು ಯೌವನಾವಸ್ಥೆಯ ಬಗ್ಗೆ ನಿಗೂಢತೆ ಹಾಗೇ ಉಳಿದುಬಿಟ್ಟಿದೆ.

ಆದರೂ, ಶ್ರೀ ವ್ಯಾಸರಾಯ ಮಠದ
ಶ್ರೀ ವ್ಯಾಸತೀರ್ಥರ ಶಿಷ್ಯರಾಗಿದ್ದರು ಮತ್ತು ಸ್ವತಃ ದಿವ್ಯಜ್ಞಾನವನ್ನು ಹೊಂದಿದ್ದರೆಂದು ತಿಳಿದುಬರುತ್ತದೆ. ಇವರು 1509ರಲ್ಲಿ ಜನಿಸಿ 1609ರಲ್ಲಿ ಇಹಲೋಕವನ್ನು ತೊರೆದರೆಂದು ಹೇಳಲಾಗುತ್ತದೆ. “ಕಾಗಿನೆಲೆಯ ಆದಿಕೇಶವ” ಎಂಬುದು ಕನಕದಾಸರ ಕಾವ್ಯನಾಮ.

ಸರಳ ಭಾಷೆ, ಸಹಜ ಭಾವುಕತೆ, ಭಕ್ತಿಪರವಶತೆ, ಪ್ರಾಮಾಣಿಕ ವಿಶ್ಲೇಷಣೆ ಮತ್ತು ಸುಂದರ ನಿರೂಪಣೆಗಳು ಕನಕದಾಸರ ಗೀತೆಗಳ ವೈಶಿಷ್ಟ್ಯ. ಇವರು ಆದಿ ಕೇಶವನ ಭಕ್ತರು. ಆದಿ ಕೇಶವನು ಮಹಾವಿಷ್ಣುವಿನ ವಿಶೇಷ ಅವತಾರವಾಗಿದೆ. ಕುರುಬರ ಮನೆತನದಲ್ಲಿ ಜನಿಸಿದ ಕನಕದಾಸರು ಒಬ್ಬ ಯೋಧರಾಗಿದ್ದರೆಂದು ತಿಳಿದುಬರುತ್ತದೆ. ಒಮ್ಮೆ ಶ್ರೀ ವ್ಯಾಸತೀರ್ಥರು ಕನಕದಾಸರಿಗೆ ಉಡುಪಿಗೆ ಬರಲು ಆಹ್ವಾನ ನೀಡಿದರು. ಗುರುಗಳ ಆದೇಶದ ಮೇರೆಗೆ, ಕನಕದಾಸರು ಉಡುಪಿಗೆ ಬಂದು, ಗುರುಗಳಿಗೆ ನಮಸ್ಕರಿಸಿ ಶ್ರೀ ಕೃಷ್ಣನನ್ನು ಆರಾಧಿಸಿದರು.

ನಂತರ ಆದಿಕೇಶವನ ಅಂಕಿತವನ್ನಿಟ್ಟುಕೊಂಡು ಪರಮಾತ್ಮನ ಅಪ್ರಮೇಯ ಗುಣಗಳನ್ನು ತಮ್ಮ ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಉಡುಪಿಯಲ್ಲಿ ಅನೇಕ ದಿನ ತಂಗಿದ್ದ ಕನಕದಾಸರ ಹೆಸರಿನಲ್ಲಿ ಒಂದು ಸಭಾಗೃಹವನ್ನು ನಿರ್ಮಿಸಲಾಗಿದೆ. ಕನಕನಿಗೆ ದರ್ಶನ ನೀಡಲೆಂದು ಶ್ರೀ ಕೃಷ್ಣನು ದೇವಾಲಯದ ಗೋಡೆಯನ್ನು ಒಡೆದನೆಂದು ಹೇಳಲಾಗಿದ್ದು ಇಂದಿಗೂ ಉಡುಪಿಯ ಕೃಷ್ಣನ ದೇವಾಲಯದಲ್ಲಿ ಕನಕನಕಿಂಡಿ ಇರುವುದನ್ನು ಗಮನಿಸಬಹುದು.

ಅವರ ಭಕ್ತಿ ಅನಿರ್ವಚನೀಯವಾದು, ಅಚಿಂತ್ಯವಾದುದು.

#Kannada #Kannadaquote #vijaykumarvm #ಸಂಗ್ರಹ #ವಿಬೆಣ್ಣೆ

© ವಿಜು ✍ 💞