...

6 views

ಮುಗಿಯದ ಧಾರಾವಾಹಿ 😬
ಧಾರಾವಾಹಿಗಳು ಅಂದ್ರೆ ಎಲ್ಲಿಲ್ಲದ ಕೋಪ ನನಗೆ...😬ಕಾರಣ,ಮುಗಿಯುವ ಲಕ್ಷಣಗಳು ಇಲ್ಲದೆಯೇ ಸಾಗುತ್ತಿರುತ್ತದೆ..
ನಿಜ ಹೇಳಬೇಕೆಂದರೆ ನಮ್ಮ ಮನೆಯಲ್ಲಿ ಟಿವಿಯನ್ನೇ ಬಳಸುವುದಿಲ್ಲ....😂ಯಾರೋ ಕೇಳಿದ್ರು ಒಮ್ಮೆ... ನಿಜಕ್ಕೂ ಟಿವಿ ಇಲ್ವಾ,ಮನೆಯಲ್ಲಿ ಅಂತ😬 ..ನಂಬಿದ್ರೆ ನಂಬಿ..ಇಲ್ಲ ಅಂದ್ರೆ ಬಿಡಿ ಟಿವಿ ಮೇಲಾಣೆ ,😂ಮನೆಯಲ್ಲಿ ಟಿವಿ ಇಲ್ಲ 😬.ಪ್ರೆಸ್ಟೀಜ್ ಗೋಸ್ಕರ ಇಡುವ ಆಸಾಮಿ ನಾನಲ್ಲ 😂ನಮಗೆ ಅವಶ್ಯಕತೆ ಇಲ್ಲ.. ಇಟ್ಟಿಲ್ಲ ಅಷ್ಟೇ.ಯಾಕೆಂದರೆ ಅಂಗೈನ ಜಗತ್ತೇ ನಮಗೆ ಎಲ್ಲಾ😬.ಎಲ್ಲದಕ್ಕೂ ಮದ್ದು ,ಕೈಯೊಳಗಿನ ಫೋನ್ 😝😝.

ಇರಲಿ ವಿಷಯಕ್ಕೆ ಬರುವೆ...ಊರಿಂದ ಅತ್ತೆ ಬಂದ್ರು...ಅಲ್ಲಿ ಧಾರಾವಾಹಿ ನೋಡಿ ರೂಢಿ. ಏನು ಮಾಡೋದು.. ವ್ಯವಸ್ಥೆ ಮಾಡಬೇಕಲ್ಲ😬ನನ್ನ ಪೋನ್ ಟಿವಿಯಾಗಿ ಮಾರ್ಪಾಡು ಆಯಿತು... ಅವರು ಸೀರಿಯಸ್ ಆಗಿ ನೋಡೋದು,ಕೃಷ್ಣ ಸುಂದರಿ,ಪಾರು,ಹಿಟ್ಲರ್ ಕಲ್ಯಾಣ..😬
ಒಂದೆರಡು ಬಾರಿ ,ವೇಳೆ ಇದ್ದಾಗ ಅವರ ಜೊತೆಯಲ್ಲಿ ಕೂತು ನೋಡಿದೆ ..ಅಯ್ಯಪ್ಪ.. ಅದೇನ್ ಕಥೆ..ಅಂತೀರಾ?...ಮನೆಯಲ್ಲೇ ಮನೆಯವರಿಗೆ ಶತ್ರುಗಳು...ಅತ್ತೆ,ಸೊಸೆ, ಗಂಡ,ಹೆಂಡತಿ, ಅಕ್ಕ, ತಂಗಿ ಮಕ್ಕಳು ಇಷ್ಟೇ ಪಾತ್ರ... ಅವರವರೊಳಗೇ ಶತ್ರು ಮುಖಗಳು... ಥತ್!!ನೋಡಿ ತಲೆ ಕೆಡ್ತು😬ಆ ಪಾಟಿ,ಕ್ರಿಮಿನಲ್ ಐಡಿಯಾಗಳು.‌‌..ಆ ಕಥೆ ಬರೆದವರಿಗೆ ಸಲಾಂ ಅನ್ನಬೇಕು... ಲೇಡಿ ಡಾನ್ ಗಳ ವಿಜೃಂಭಣೆ, ಪ್ರತೀ ದಿನವೂ ಕೆಟ್ಟದ್ದಕ್ಕೇ ಗೆಲುವು... ಒಳ್ಳೆಯ ವ್ಯಕ್ತಿತ್ವ ದಿನಾಲೂ ನೋವು ಪಟ್ಟು, ಕಣ್ಣೀರು ಸುರಿಸುತ್ತಾ ಇರೋದು... ಒಟ್ಟಾರೆ ಧಾರಾವಾಹಿ ನೋಡಿದ ಮೇಲೆ ಮನಸ್ಸು ಒಂಥರ ಕೆರಳುವುದಂತೂ ಅಪ್ಪಟ ಸತ್ಯ...‌

ಈಗಾಗಲೇ ನಿಜ ಸಂಸಾರ ಎನ್ನುವುದು ಕೆರೆ ಹಿಡಿದು ಹೋಗ್ತಾ ಇದೆ...ಅವಿಭಕ್ತ ಕುಟುಂಬ ಸಂಕುಚಿತ ಭಾವಕ್ಕೆ ಸಿಲುಕಿ, ವಿಭಕ್ತವಾಗಿ ವಿಭಜನೆ ಗೊಂಡಿದೆ...‌ಒಂದೇ ಮನೆಯಲ್ಲಿನ ಮೂರ್ನಾಲ್ಕು ಮನಗಳು ದಾಯಾದಿ ಮತ್ಸರದಲ್ಲಿ ಬೆಂದು ಹೈರಾಣಾಗುವ ಈ ವಾಸ್ತವದ ದಿನಗಳಲ್ಲಿ,ಇಂತಹ ಕಥೆಗಳು, ಜನರ ಮನದಂಗಳದಲ್ಲಿ,ಇನ್ನೂ ಹೆಚ್ಚು ಕಂದಕ ಸೃಷ್ಟಿಸುತ್ತವೆಯೇ ಹೊರತು,ಉತ್ತಮ ಚಿಂತನೆಗಳನ್ನು ಖಂಡಿತ, ಕಟ್ಟಿ ಕೊಡಲಾರವು...
ಮಾಧ್ಯಮ ಎನ್ನುವುದು ಒಂದು ಉತ್ತಮ ಚಿಂತನೆ ಮಾಡುವಲ್ಲಿ ಮನಸ್ಸಿಗೆ ಒತ್ತು ನೀಡಿ ಗ್ರಾಸವಾಗುವಂತಿರಬೇಕು...ಮನಸ್ಸು, ನೋಡಿದ್ದು,ಕೇಳಿದ್ದು,ಓದಿದ್ದು, ಅನುಭವಿಸಿದ್ದನ್ನೇ ಗ್ರಹಿಸಿ ಬದುಕೋದು...ಹಾಗಾಗಿ, ನೋಡುವುದೂ ಕೂಡ, ಕಿರುಕುಳ, ನೋವು,ಹತಾಶೆ, ಮನೆಯೊಳಗೇ ಹುಟ್ಟಿ ಕೊಳ್ಳುವ ಶತ್ರುಗಳು ಇಂತಹ ಕಥಾವಸ್ತುಗಳು ಮನುಜನ ಬದುಕಿಗೆ ನಿಜಕ್ಕೂ ಮಾರಕವೇ..
ಅತ್ಯುತ್ತಮ ಸಂಬಂಧಗಳನ್ನು ,ಕಟ್ಟಿ ಬೆಳೆಸುವ ಕಥೆಯೇ ಸಿಗದಾ ಹಾಗಿದ್ರೆ?
ನಿಜದ ದಿನ ನಿತ್ಯ ಬದುಕಿನಲ್ಲಿ ಕೂಡ ಕೆಲ ಮನೆಗಳಲ್ಲಿ ಧಾರಾವಾಹಿ ಖಳನಾಯಕರ ಪಾತ್ರದವರನೇಕರ ದರ್ಶನ ಆಗುತ್ತದೆ... ಇನ್ನೂ ಕೆಟ್ಟ ಪಾತ್ರಗಳನ್ನು ವೈಭವೀಕರಿಸಿ ತೋರಿಸುವುದರಿಂದ ಪ್ರಯೋಜನ ಏನು?ಸಮಾಜದ ವ್ಯವಸ್ಥೆ ಇನ್ನೂ ಹಾಳಾಗುತ್ತದೆ ಅಲ್ಲವೇ?
ಸರೀತಪ್ಪುಗಳ ಸೂಕ್ಷ್ಮ ಅವಲೋಕನ ಮಾಡುವಂತಹ ದಿಟ್ಟ ಪಾತ್ರಗಳನ್ನು ಹುಟ್ಟು ಹಾಕಿದರೆ,ತಪ್ಪು ಮಾಡುವ ಅಥವಾ, ಕೆಟ್ಟ ದಾರಿಯಲ್ಲಿ ನಡೆವ ಮನುಷ್ಯ ಕೂಡ ಖಂಡಿತ ಅರಿತು ಸನ್ಮಾರ್ಗದಲ್ಲಿ ನಡೆಯಬಹುದು...
ಧಾರಾವಾಹಿ ನೋಡುವ ಮನಸ್ಸು, ನೋಡಿದ ಮೇಲೆ ನಿರಾಳತೆ,ಹಾಗೂ ಮನೋರಂಜನಾತ್ಮಕ ಸಮಾಧಾನವನ್ನು ತಾಳಬೇಕೇ ಹೊರತು,ಕೆಟ್ಟ ದೃಶ್ಯಗಳಿಂದ,ಭಯ,ವಿಕೃತ ಆನಂದ ಅನುಭವಿಸುವಂತೆ ಇರಬಾರದು...ಯಾಕೆಂದರೆ, ಇದನ್ನು ಅತೀಯಾಗಿ ನೋಡುವವರು ವೃದ್ಧರು..ಅರ್ಥಾತ್, ಅತ್ತೆ,ಸೊಸೆ ವಯಸ್ಸಿನವರು😬ಅತ್ತೆ,ಸೊಸೆ ಎಂದರೆ ಮೊದಲಿನಿಂದಲೂ ಹಾವು,ಮುಂಗುಸಿ ಎಂಬ ಮಾತು ಪ್ರಚಲಿತವಿರುವಂತಹುದು😬(ಇಂದು ಬಹುತೇಕ ಬದಲಾವಣೆ ಹೊಂದಿದೆ ದೃಷ್ಟಿಕೋನ)ಅದರಲ್ಲೂ ಧಾರಾವಾಹಿಗಳಲ್ಲಿ, ಅತ್ತೆ ಸೊಸೆಯನ್ನೇ ವೈರಿಗಳಾಗಿ ಬಿಂಬಿಸಿದರೆ😂🤦ಏನಾಗಬಹುದು ಹೇಳಿ ಮನೆ ಮನೆ ಕಥೆ😂ತಮಾಷೆ ಮಾತಲ್ಲ...
ವೃದ್ಧಾಪ್ಯ ಎನ್ನುವುದು ಮಗುವಿನಂತಹ ಮನಸ್ಸು... ಸೂಕ್ಷ್ಮ ಮನಸ್ಸಾಗಿ ಪರಿವರ್ತನೆ ಹೊಂದಿರುತ್ತದೆ...ಅನುಭವ ಹೊಂದಿ,ಮಾಗಿದ ಮನಸ್ಸು ಆದರೂ ಸಹ,ಎಲ್ಲೋ ಅವ್ಯಕ್ತ ಭಯ,ಸೊಸೆ ತನ್ನ ಮಗನನ್ನು ಕಸಿದುಕೊಂಡಳೆಂಬ ತಪ್ಪು ಗ್ರಹಿಕೆ, ಕೆಲವೊಮ್ಮೆ ಮನೆಯ ವಿಷಮ ಪರಿಸ್ಥಿತಿ ಗಳ ದುಷ್ಪರಿಣಾಮ ಅವರ ಮನಸ್ಸು ಕದಡಿ ಹೋಗುವಂತೆ ಮಾಡುತ್ತದೆ... ಇಂತಹ ಮನಗಳಿಗೆ ಒಂದಿಷ್ಟು ಮನರಂಜನೆ ಅತ್ಯವಶ್ಯ... ಧಾರಾವಾಹಿ ಮನರಂಜನೆಯ ಔತಣ ಉಣಿಸಬೇಕೇ ವಿನಃ,ಮನ ಕಲಕಿ ರಾಡಿಯಾಗಿ,ಮನೆಯ ವಾತಾವರಣ ಹಾಳು ಮಾಡುವಂತೆ ಇರಬಾರದು....
ಧಾರಾವಾಹಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇರಬೇಕು... ಶ್ರೀ ಟಿ ಎನ್ ಸೀತಾರಾಮ್ ಅಂತಹ ಪಳಗಿದ ನಿರ್ದೇಶಕರು ಈ ಹಿಂದೆ ಮಾಡಿದ ಧಾರಾವಾಹಿಗಳಂತೆ...."ಮಾಯಾಮೃಗ,"ಮುಕ್ತ ಮುಕ್ತ" ದಂತಹ ಧಾರಾವಾಹಿಗಳು ಮತ್ತೆ ಬರಲಿ ಎನ್ನುವ ಆಶಯದೊಂದಿಗೆ🙏
✍️ಪೂರ್ವವಾಹಿನಿ...