...

10 views

ಮಂಡೇಲಾ...
ನನ್ನ ಸಂಸ್ಕಾರವಲ್ಲ..

ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶದ ಮೊದಲನೇ ಸಲ ಅಧ್ಯಕ್ಷರಾದಾಗ ತನ್ನ ಸುರಕ್ಷತೆಯ ಸೈನಿಕರ ಜೊತೆಯಲ್ಲಿ ಒಂದು ಹೋಟೆಲಿಗೆ ಊಟ ಮಾಡುವುದಕ್ಕೆ ಹೋಗಿದ್ದರು ಎಲ್ಲರೂ ತಮಗಿಷ್ಟವಾದ ಊಟಕ್ಕೆ ಆರ್ಡರ್ ಮಾಡಿದರು.

ಅದೇ ಸಮಯದಲ್ಲಿ ಮಂಡೇಲಾರವರ ಖುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಆರ್ಡರ್ ಮಾಡಿ ಕಾಯುತ್ತಿದ್ದ ಆವಾಗ ನೆಲ್ಸನ್ ಮಂಡೇಲಾರವರು ತನ್ನ ಸುರಕ್ಷತೆಯ ಸೈನಿಕರಿಗೆ ಹೇಳಿದರು ಆ ವ್ಯಕ್ತಿಯನ್ನು ಕರೆಯಿರಿ ನನ್ನ ಬಳಿಯೆ ಕುಳಿತು ಊಟ ಮಾಡಲಿ ಎಂದರು

ಆ ವ್ಯಕ್ತಿ ನೆಲ್ಸನ್ ಮಂಡೇಲಾರವರ ಎದುರುಗಡೆ ಬಂದು ಕುಳಿತುಕೊಂಡನು ಎಲ್ಲರೂ ಊಟ ಮಾಡಲು ಶುರುವಿಟ್ಟುಕೊಂಡರು ಆ ವ್ಯಕ್ತಿಯೂ ಊಟ ಮಾಡಲು ಶುರು ಮಾಡಿದ ಆದರೆ ಆ ವ್ಯಕ್ತಿಯ ಕೈ ನಡುಗುತ್ತಿದ್ದವು ಬೇಗನೆ ಊಟ ಮುಗಿಸಿ ಆ ವ್ಯಕ್ತಿ ಹೋಟೆಲ್ಲಿಂದ ಹೊರಹೋದರು

ಆ ವ್ಯಕ್ತಿ ಹೊರಹೋದ ನಂತರ ನೆಲ್ಸನ್ ಮಂಡೇಲಾ ಅವರ ಸುರಕ್ಷತೆಯ ಸೈನಿಕರೊಬ್ಬರು ಮಂಡೇಲಾ ಅವರನ್ನು ಕೇಳಿದರು
"ಸರ್ ಆ ವ್ಯಕ್ತಿಗೆ ಜ್ವರ ಬಂದಿರಬೇಕು ಹಾಗಾಗಿ ಊಟ ಮಾಡುವಾಗ ಕೈ ನಡುಗುತ್ತಿದ್ದವು.

ನೆಲ್ಸನ್ ಮಂಡೇಲಾ ನಸುನಗುತ್ತಾ ಹೇಳಿದರು ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾನೆ ರೋಗಗ್ರಸ್ಥನಲ್ಲ ಹಿಂದೊಮ್ಮೆ ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದೆನೋ ಆ ಜೈಲಿನ ಜೈಲರ್ ಆಗಿದ್ದವನು ಆ ವ್ಯಕ್ತಿ ನನಗೆ ಬಹಳ ಹಿಂಸೆ ಕೊಟ್ಟಿದ್ದನು ನಾನು ಎಟು ತಿಂದೂ ತಿಂದೂ ಸುಸ್ತಾಗಿ ನೀರು ಕೇಳಿದಾಗ ಆ ವ್ಯಕ್ತಿ ನೀರು ಬೇಕಾ...???
ಕುಡಿ ಎಂದು ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು

ಈಗ ನಾನು ರಾಷ್ಟ್ರಪತಿಯಾಗಿದ್ದೇನೆ ....!!!!

ಆ ವ್ಯಕ್ತಿಗೆ ಮನವರಿಕೆಯಾಗಿದೆ ತಾನು ಮಾಡಿದ ತಪ್ಪಿಗೆ ತನಗೆ ಭಯಂಕರ ಶಿಕ್ಷೆಯಾಗಬಹುದೆಂದು

ಆದರೆ ಅದು ನನ್ನ ಸಂಸ್ಕಾರವಲ್ಲ ನನಗನಿಸುತ್ತದೆ ದ್ವೇಶದ ಭಾವನೆಯಿಂದ ಕೆಲಸ ಮಾಡಿದರೆ ವಿನಾಶಕ್ಕೆ ದಾರಿಯಾಗುತ್ತದೆಂದು

ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ

ನೋಡಿ ಎಂತಹ ವ್ಯಕ್ತಿತ್ವ ನೆಲ್ಸನ್ ಮಂಡೇಲಾರವರದು..
ಮಹಾನ್ ವ್ಯಕ್ತಿಗಳ ಈ ತರಹದ ಕ್ಷಮಾಗುಣದ
ಉಧಾಹರಣೆಗಳೇ ಕೆಲವರನ್ನು ಮೇರುತನಕ್ಕೆ
ಕೊಂಡೊಯ್ಯುವುದು ಅಲ್ಲವೆ..🙏🙏

#Kannada #kannadastory #vijaykumarvm #ವಿಬೆಣ್ಣೆ
© ವಿಜು ✍ 💞