...

0 views

ಸಂದರ್ಶನಕ್ಕೆ ತಯಾರಿ ಹೇಗೆ? ಸಂದರ್ಶನಕ್ಕೆ ಹೋಗುವ ಮುನ್ನ ಈ 11 ಅಂಶಗಳನ್ನು ಗಮನಿಸಿಕೊಳ್ಳಿ
ಮೊದ-ಮೊದಲು ಯಾರಿಗೆ ಆದರೂ ತಮ್ಮ ವಿದ್ಯಾರ್ಹತೆ ಆಧಾರದಲ್ಲಿ ಶಿಕ್ಷಣ ಹುಡುಕುವುದು ಹೇಗಪ್ಪಾ ಅನ್ನೋ ಭಯ ಇದ್ದೇ ಇರುತ್ತದೆ. ಕೆಲವರಿಗೆ ಕೆಲಸ ಹುಡುಕುವುದು ಹೇಗೆ, ಸಂದರ್ಶನಕ್ಕೆ ಹೋಗುವುದು, ಅದಕ್ಕೆ ತಯಾರಿ ಹೇಗೆ, ಉತ್ತಮವಾದ ರೆಸ್ಯೂಮ್ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಅಂತಹವರಿಗಾಗಿಯೇ ಹಲವು ಸರಳ ಸಲಹೆಗಳು ಇಲ್ಲಿದೆ

1. ಉದ್ಯೋಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ

ಉದ್ಯೋಗಕಾಂಕ್ಷಿ ಆದ ನೀವು ಕಂಪನಿಯು ಪೋಸ್ಟ್‌ ಮಾಡಿದ ಉದ್ಯೋಗದ ಬಗ್ಗೆ ನೀಡಿರುವ ಸಂಪೂರ್ಣ ಮಾಹಿತಿ ಓದಿಕೊಳ್ಳಬೇಕು. ಅವರು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಅರ್ಹತೆ, ವಿದ್ಯಾಹರ್ತೆ, ಹಿನ್ನೆಲೆ, ಆದರ್ಶಗಳು ಹೇಗಿರಬೇಕು ಎಂದು ತಿಳಿಸಿರುತ್ತಾರೆ. ಈ ಅಂಶಗಳ ಕುರಿತೇ ಕಂಪನಿಯವರು ಸಂದರ್ಶನದಲ್ಲಿ ಪ್ರಶ್ನೆ ಕೇಳುವುದು.

2. ಸಂದರ್ಶನಕ್ಕೆ ಏಕೆ ಹೋಗುತ್ತಿದ್ದೀರಿ ಎಂದು ನೀವೆ ಪ್ರಶ್ನಿಸಿಕೊಳ್ಳಿ
ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗುವ ಮುನ್ನ, ಈ ನಿರ್ದಿಷ್ಟ ಉದ್ಯೋಗ ನಿಮಗೆ ಏಕೆ ಬೇಕು ಎಂದು ಅರ್ಥಮಾಡಿಕೊಳ್ಳಿ. ನೀವೇ ಏಕೆ ಆ ಉದ್ಯೋಗಕ್ಕೆ ಅರ್ಹ ಎಂಬುದನ್ನು ಪರಿಶೀಲಿಸಿಕೊಳ್ಳಿ. ಆಗ ಮಾತ್ರ ಸಂದರ್ಶಕರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ಸಾಧ್ಯ.

3. ಉದ್ಯೋಗ, ಕಂಪನಿ ಬಗ್ಗೆ ಒಂದಷ್ಟು ಸಂಶೋಧನೆ ಇರಲಿ
ಸಂದರ್ಶನಕ್ಕೆ ಹಾಜರಾಗುವ ಮುನ್ನ ಕಂಪನಿ ಬಗ್ಗೆ ಸಾಧ್ಯವಾದಷ್ಟು ಹೆಚ್ಚು ಮಾಹಿತಿ ತಿಳಿದಿರಬೇಕು. ಕಾರಣ ಸಂದರ್ಶಕರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಅಲೋಚಿಸಿ ಉತ್ತಮ ಉತ್ತರ ನೀಡಲು ಸಹಾಯಕವಾಗುತ್ತದೆ.

. ಉತ್ತರಗಳನ್ನು ಸಂದರ್ಶನದ ಸಾಮಾನ್ಯ ಪ್ರಶ್ನೆಗಳಿಗೆ ಪರಿಗಣಿಸಿ
ಸಂದರ್ಶಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ತಪ್ಪಿಸದಿರಿ. ಸಾಮಾನ್ಯವಾಗಿ ನಿಮ್ಮ ಬಗ್ಗೆ ಹೇಳಿ ಎಂಬ ಸಾಮಾನ್ಯ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಹೇಳಿ.

5. ಧ್ವನಿ ಮತ್ತು ದೇಹ ಭಾಷೆಯನ್ನು ಅಭ್ಯಾಸ ಮಾಡಿಸಂದರ್ಶಕರಲ್ಲಿ ನಿಮ್ಮ ಬಗ್ಗೆ ಸಕರಾತ್ಮಕ ಭಾವನೆ ಮತ್ತು ನಂಬಿಕೆ ಮೂಡಿಸುವುದು ಅಗತ್ಯ. ಅದಕ್ಕಾಗಿ ಆತ್ಮ ವಿಶ್ವಾಸ ಮೂಡಿಸುವಂತೆ ಧೈರ್ಯದಿಂದ ಮತ್ತು ವಿಶ್ವಾಸಯುವಾಗಿ ಮಾತನಾಡುವುದು ಉತ್ತಮ. ಆದ್ದರಿಂದ ನಿಮ್ಮ ಧ್ವನಿ, ಸ್ವಾಭಾವಿಕ ನಗು, ದೇಹ ಭಾಷೆಯನ್ನು ಉತ್ತಮವಾಗಿ ಅಭ್ಯಾಸ ಮಾಡಿಕೊಳ್ಳಬೇಕು.

6. ಚಿಂತನಶೀಲ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿ ನಡೆಸಿ
ಕಂಪನಿಗಳು ಉದ್ಯೋಗಿಗಳಿಗೆ ತಮ್ಮ ಕಂಪನಿ ಮತ್ತು ನಿರ್ವಹಿಸಬೇಕಾದ ಕೆಲಸ ಬಗ್ಗೆಯೇ ಹೆಚ್ಚು ಚಿಂತನಶೀಲ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಅನುಗುಣವಾಗಿ ಮಾಹಿತಿ ಕಲೆಹಾಕುವ ತಯಾರಿ ನಡೆಸುವುದು ಅಗತ್ಯ.

7. ಅಣಕು ಸಂದರ್ಶನಗಳಲ್ಲಿ ಭಾಗಿಯಾಗಿ
ಸಾರ್ವಜನಿಕವಾಗಿ ಮಾತನಾಡುವಂತೆ, ಸಂದರ್ಶನಗಳನ್ನು ಸಹ ಅಭ್ಯಾಸ ಮಾಡುವುದು ಉತ್ತಮ. ಇದರಿಂದ ನಿಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಈ ರೀತಿ ಅಭ್ಯಾಸ ಮಾಡುವುದು ಸ್ವಲ್ಪ ಮುಜುಗರ ಎನಿಸಬಹುದು. ಆದರೆ ಈ ಅಭ್ಯಾಸ ಮಾಡಿ ಸಂದರ್ಶನ ಮುಗಿಸಿದ ನಂತರ ನೀವೆ ಹೆಚ್ಚು ಸಂತೋಷ ಪಡುತ್ತೀರಿ. ನಿಮ್ಮ ಕುಟುಂಬದವರ, ಸ್ನೇಹಿತರ ಸಹಾಯವನ್ನು ತೆಗೆದುಕೊಂಡು ಅಭ್ಯಾಸ ಮಾಡಿದರೆ ಇನ್ನೂ ಹೆಚ್ಚು ಅನುಕೂಲ.

8. ರೆಸ್ಯೂಮ್ ಪ್ರಿಂಟ್‌ ತೆಗೆದುಕೊಳ್ಳಿ
ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಹಾಕಿದ್ದರೂ ಸಹ, ಸಂದರ್ಶನಕ್ಕೆ ಕನಿಷ್ಟ 3 ಪ್ರತಿ ರೆಸ್ಯೂಮ್‌ ಪ್ರಿಂಟ್‌ ತೆಗೆದುಕೊಂಡು ಹೋಗುವುದು ಉತ್ತಮ. ಸಂದರ್ಶಕರು ನಿಮ್ಮ ಸಾಫ್ಟ್‌ ಕಾಪಿ ರೆಸ್ಯೂಮ್ ಸ್ವೀಕರಿಸಿದ್ದರೂ ಸಹ, ಸಂದರ್ಶನದ ವೇಳೆ ಅವರಿಗೆ ಉಪಯೋಗಕ್ಕೆ ಬರುವುದು ನೀವು ನೀಡುವ ರೆಸ್ಯೂಮ್ ಪ್ರತಿ.

9. ರೆಸ್ಯೂಮ್ ನಲ್ಲಿ ಇರುವ ಮಾಹಿತಿ ನಿಮ್ಮ ಅರಿವಿನಲ್ಲಿರಲಿ
ರೆಸ್ಯೂಮ್‌ ನಲ್ಲಿ ನೀಡಲಾದ ನಿಮ್ಮ ವಿದ್ಯಾರ್ಹತೆ, ಕೌಶಲಗಳು, ನಿಮ್ಮ ಸಾಮರ್ಥ್ಯ ಏನು ಎಂಬ ಪ್ರತಿಯೊಂದು ಮಾಹಿತಿಯೂ ನಿಮ್ಮ ಅರಿವಿನಲ್ಲಿರಬೇಕು. ಕೆಲವೊಮ್ಮೆ ರೆಸ್ಯೂಮ್‌ ನಲ್ಲಿರುವ ಅಂಶಗಳನ್ನೇ ಸಂದರ್ಶಕರು ನಿಮಗೆ ಕೇಳುತ್ತಾರೆ. ಈ ಸಂದರ್ಭದಲ್ಲಿ ನೀವು ತಪ್ಪು ಮಾಹಿತಿ ನೀಡಿದರೆ, ಸಂದರ್ಶನಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ ಎಂಬಂತಾಗುತ್ತದೆ.

10. ಸಂದರ್ಶನಕ್ಕೆ ಹೋಗಲು ಸರಿಯಾದ ಪ್ಲಾನ್ ಮಾಡಿಕೊಳ್ಳಿಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುವಾಗ ಎಲ್ಲರಿಗೂ ಸಹ ಹಲವು ಕಾರಣಗಳಿಂದ ಒತ್ತಡ ಇದ್ದೇ ಇರುತ್ತದೆ. ಅದೊಂದು ಚಾಲೆಂಜ್‌ ಸಹ ಎಂದರೆ ತಪ್ಪಾಗಲಾರದು. ನೀವು ಸಂದರ್ಶನಕ್ಕೆ ಹೋಗುವ ಸ್ಥಳ ನಿಮಗೆ ಹೊಸದಾಗಿದ್ದರೆ, ಬಹುಬೇಗ ನಿಮ್ಮ ಸ್ಥಳ ಬಿಟ್ಟು ಸಂದರ್ಶನಕ್ಕೆ ಹೊರಡುವುದು ಉತ್ತಮ.



ಸಂದರ್ಶಕರ ಸಂಪರ್ಕಕ್ಕಾಗಿ ಮೊಬೈಲ್‌ ನಂಬರ್ ಇಟ್ಟುಕೊಳ್ಳುವುದು, ಮುಂಜಾಗ್ರತೆಯಾಗಿ ಸ್ಥಳವನ್ನು ಎಲ್ಲಿದೆ ಎಂದು ತಿಳಿದುಕೊಳ್ಳುವುದು ಅತ್ಯಗತ್ಯ.

11. ನಿಮ್ಮನ್ನು ಮಾರಿಕೊಳ್ಳಿ
ಸಂದರ್ಶನದಲ್ಲಿ ದೊಡ್ಡ ಚಾಲೆಂಜ್‌ ಎಂದರೆ ನಿಮ್ಮನ್ನು ನೀವು ಮಾರಿಕೊಳ್ಳುವುದು. ಕೆಲವರಿಗೆ ಈ ಬಗ್ಗೆ ಐಡಿಯಾ ಇರುವುದಿಲ್ಲ. ಆದರೆ ನಿಮ್ಮ ಬಗ್ಗೆ ನೀವು ಸಂಪೂರ್ಣವಾಗಿ, ಸಕಾರಾತ್ಮಕವಾಗಿ ಹೇಳಿಕೊಳ್ಳುವುದು ಮಾರಿಕೊಂಡ ಅನುಭವ ನೀಡುವುದಿಲ್ಲ. ನಿಮ್ಮ ಎಲ್ಲಾ ಕೌಶಲಗಳನ್ನು ಸಂದರ್ಶಕರ ಮುಂದೆ ವಿಶ್ವಾಸದಿಂದ ಹೇಳಿಕೊಳ್ಳುವುದು ಉದ್ಯೋಗ ಪಡೆಯಲು ಉಪಯೋಗವಾಗುತ್ತದೆ.