...

20 views

ಅವಾಂತರ(ಕಥೆ)
ಶ್ರೀಕರನಿಗೆ ತನ್ನ ಹೆಂಡತಿಯ ಮೇಲೆ ಅನುಮಾನ.. ಯಾಕೋ ಈಗೀಗ ಶುರುವಾಗ್ತಿದೆ..ಯಾವಾಗಲೂ ಮೊಬೈಲ್ ಕೈಯಲ್ಲಿ ಹಿಡಿದೇ ಇರ್ತಾಳೆ.. ಅದ್ಯಾರೊಂದಿಗೆ ಚಾಟ್ ಮಾಡ್ತಾಳೋ.ಏನೋ ..ಒಂದು ದಿನ ಮೊಬೈಲ್ ಚೆಕ್ ಮಾಡಲೇಬೇಕು. ಈ ಸಾಮಾಜಿಕ ಜಾಲತಾಣ ಹೆಣ್ಣು ಮಕ್ಕಳಿಗೆ ಅಷ್ಟೊಂದು ಸೇಫ್ ಅಲ್ಲ..ಆಮೇಲೆ ಕೈಮೀರಿದ ಮೇಲೆ ಯೋಚನೆ ಮಾಡಿದರೆ ಪ್ರಯೋಜನ ಇಲ್ಲ ಎಂದು ತನ್ನೊಳಗೇ ಅಂದುಕೊಂಡ....
ಆವತ್ತು ಭಾನುವಾರ ಆದ್ದರಿಂದ ಆಫೀಸಿಗೆ ರಜಾ.
ಸುಮತಿ ಹಾಲಿನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ,ಅಡುಗೆ ಮನೆಯಲ್ಲಿ ತಿಂಡಿ ರೆಡೀ ಮಾಡ್ತಾ ಇದ್ಲು. ಇದೇ ಸರೀಯಾದ ಸಮಯ ಅಂತ ಶ್ರೀಕರ ಮೊಬೈಲ್ ಚೆಕ್ ಮಾಡಲು ತೆಗೆದುಕೊಂಡ...ಓಪನ್ ಮಾಡಿದ ...ಮೊಬೈಲ್ ಏನೋ ಆನ್ ಆಯಿತು.. ಆದರೆ, ವಾಟ್ಸಾಪ್, ಪೇಸ್ಬುಕ್,ಮೆಸೆಂಜರ್ ಎಲ್ಲಾ ಲಾಕ್.. ಹ್ಮ..ಹೀಗಿದೆ ವಿಷಯ.ತಾನು ನೋಡಬಹುದು ಅಂತಾನೇ ಲಾಕ್ ಮಾಡಿದಾಳೆ ಅನ್ಕೊಂಡ.ಮನಸ್ಸಿಗೆ ತುಂಬಾ ಬೇಜಾರು ಅನಿಸಿತು.ಹೆಂಡತಿಯ ನಡುವಳಿಕೆ ನೋಡಿ.. ತಿಂಡಿಗೆ ಕರೆದಳು ಸುಮತಿ..ಅನ್ಯಮನಸ್ಕನಾಗೇ
ತಿಂಡಿ ತಿನ್ನಲು ಕುಳಿತುಕೊಂಡ ಶ್ರೀಕರ...ಮೂರು ವರ್ಷದ ಪಾಪು ಅಗಸ್ತ್ಯ ರಚ್ಚೆ ಹಿಡಿದಿದ್ದ,ಬೆಳಬೆಳಗ್ಗೆಯೇ..ಅವನನ್ನು ಸುಧಾರಿಸಲು,ಯೂ ಟ್ಯೂಬ್ ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡ ಮಕ್ಕಳ ವೀಡಿಯೊ ಹಾಕಿಕೊಟ್ಟಳು ಸುಮತಿ..ಗಪ್ ಚುಪ್ ಆಗಿ ಮೊಬೈಲ್ ನೋಡುತ್ತಾ ಕುಳಿತಿತು ಆ ಮಗು.

ಕೆದಕಿ ಕೆದಕಿ ತಿನ್ನುತ್ತಿದ್ದ ಗಂಡನ ನಡುವಳಿಕೆ ವಿಚಿತ್ರ ಎನಿಸಿತು...