...

10 views

ಬೀಸಾಡುವ ಮುನ್ನ ಹೀಗೂ ಬಳಸಬಹುದು
#ಬಿಸಾಡುವ_ಮುನ್ನ_ಹೀಗೂ_ಬಳಸಬಹುದು.

#ಅಡುಗೆ ಒಂದು ಕಲೆ..ರುಚಿ, ಸ್ವಾದ ಅಬ್ಬಾ.. ಎಲ್ಲಾ ಅಳತೆ ಸರಿದೂಗಿಸಿ ಉಂಬುವವರು ಅಹುದಹುದು ನಳಪಾಕ ಎಂದರೆ,ಅಡುಗೆ ಮಾಡಿದ ಆ ಕೈಗಳಿಗೆ ಏನೋ ಸಂತೃಪ್ತಿಯ ಸಾರ್ಥಕತೆ ...

ಹಾಗೇ ಹಿತಮಿತವಾಗಿ, ಅಚ್ಚುಕಟ್ಟಾಗಿ, ಅಡುಗೆ ಮಾಡಿ ಬಡಿಸಲು ಗೃಹಿಣಿಯ ಕೈಗಳು ನುರಿತರೆ, ಆ ಮನೆಯ ಯಜಮಾನನ ಜೋಬಿಗೂ ಉಳಿತಾಯದ ಶ್ರೀರಕ್ಷೆ...😃.

ಕೆಲವೊಮ್ಮೆ ತಿಪ್ಪೆ ಪಾಲಾಗುವ ವಸ್ತು ಕೂಡಾ,ಶುಚಿ,ರುಚಿಯಾದ ಅಡುಗೆ ಮಾಡಿ,ಸವಿಯಬಹುದು.ಬನ್ನಿ ಇಲ್ಲೊಂದು ಸರಳ ರೆಸಿಪಿ ಇದೆ ಹೇಳ್ತೀನಿ....
#ಸೌತೆಕಾಯಿ ಗೊತ್ತಲ್ಲ... ಅದರ ಸಿಪ್ಪೆ ತೆಗೆದು ಎಸಿತೀವಿ...ಸೌತೆಕಾಯಿ ಮಾತ್ರ ತಿನ್ನುತ್ತೇವೆ ನಾವು.ಆದರೆ ಆ ಸಿಪ್ಪೆ ಒಗೆಯದೇ,ಅದರಲ್ಲೂ ರುಚಿಯಾದ ಅಡುಗೆ ಮಾಡಬಹುದು ಗೊತ್ತಾ?ಹೇಳ್ತೀನಿ ಕೇಳಿ ಹಾಗಿದ್ದರೆ...

#ವಿಧಾನ.... ಒಂದು ಬಾಣಲೆಗೆ ಸ್ವಲ್ಪ,ಕೊಬ್ಬರಿ ಎಣ್ಣೆ ಹಾಕಿ .ನಂತರ ಕಾಲು ಸ್ಪೂನ್ ಉದ್ದಿನಬೇಳೆ, ಎಳ್ಳು, ಸಾಸಿವೆ, ಖಾರಕ್ಕೆ ತಕ್ಕಂತೆ,ಹಸಿಮೆಣಸು,ಚಿಟಿಕೆ ಹಿಂಗು ಹಾಕಿ ಚಟಪಟಾಯಿಸಿ...ಇದಕ್ಕೆ ಸೌತೆಕಾಯಿ ಸಿಪ್ಪೆ ಹಾಕಿ ಚೂರು ಹಾಗೇ ಹಸಿ ವಾಸನೆ ಹೋಗುವಷ್ಟು ಮಾತ್ರ ಪ್ರೈ ಮಾಡಿ...ಆಮೇಲೆ ಕಾಯಿತುರಿ ,ಚೂರು ಹುಣಸೇಹಣ್ಣು,ಹಾಕಿ,ಬೇಕಾದಷ್ಟೇ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ...

ಬಾಣಲೆಗೆ ಚೂರು ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ.ಇದಕ್ಕೆ, ಕಾಲು ಸ್ಪೂನ್ ಜೀರಿಗೆ, ಚೂರು ಸಾಸಿವೆ, ಕರಿಬೇವು, ಒಂದೆರಡು ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ.ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.... #ಸೌತೆಕಾಯಿ_ಸಿಪ್ಪೆ_ಚಟ್ನಿ ರೆಡೀ.#ಅನ್ನ,#ಚಪಾತಿ, #ದೋಸೆಗೂ ಸೈ ಈ ಚಟ್ನಿ....

ಹೀಗೇ #ಹೀರೇಕಾಯಿ ಸಿಪ್ಪೆ ಕೂಡಾ ಮಾಡಬಹುದು...ಮಾಡಿ ನೋಡಿ...ರುಚಿ ಹೇಳಿ..ಕಸದಿಂದ ಮುಕ್ತರಾಗಿ...ಹಿಹ್ಹಿಹ್ಹಿ....😃..
✍️ಪೂರ್ವವಾಹಿನಿ....