...

3 views

ರಾಜಕುಮಾರ ಕೃಷ್ಣನ ಕಥೆ
ಒಂದಾನೊಂದು ಕಾಲದಲ್ಲಿ ದೇವೇಂದ್ರ ಅನ್ನೋಮಹಾರಾಜನಿಗೆ ಮುದ್ದಾದ ಪುಟ್ಟ ರಾಜಕುಮಾರಿ‌ ಇದ್ಲು. ಆ ಅರಮನೆಯಲ್ಲಿ ಸುಖ ಸಂತೋಷಕ್ಕೆ ಕೊರತೆ ಇರಲಿಲ್ಲ ,ಆದರೆ ಮಗುವಿಗೆ ತಾಯಿಯ ಕೊರತೆ ಇತ್ತು ಆದ್ರೂ ಮಗುವಿಗೆ ಮಹಾರಾಜನೇ ತಂದೆ ತಾಯಿಯಾಗಿ ನೋಡಿಕೊಳ್ಳುತ್ತಿದ್ದ. ಹೀಗಿದ್ದ ಕಾರಣ ಆ ಮಗು ಅರಮನೆಯಲ್ಲಿ ಸುಖವಾಗಿ ಆಡುತ್ತಾ ಬೆಳೆಯುತ್ತಿದ್ದಳು. ಆ ರಾಜ್ಯವು ಮಳೆ ಬೆಳೆಯಿಂದ ಸಂಪತ್ಭರಿತವಾಗಿತ್ತು. ಆ ರಾಜಕುಮಾರಿಗೆ ರುಕ್ಮಿಣಿ ಎಂದು ಹೆಸರು ಇತ್ತು. ರಾಜಕುಮಾರಿ ಬೆಳೆದು ದೊಡ್ಡವಳಾದಳು. ಒಂದು ದಿನ
ಅವಳು ಕಾಡಿಗೆ ವಾಯುವಿಹಾರಕ್ಕೆ ಎಂದು ಸಖಿಯರೊಡನೆ ಹೋಗಿದ್ದಳು. ಅಲ್ಲಿ ಒಬ್ಬ ಮುದ್ದಾದ ರಾಜಕುಮಾರನನ್ನು ಕಂಡಳು.ಅವನು ಇವಳನ್ನು ನೋಡಿದಾಗ ಇಂತಹ ಸ್ಪೂರದ್ರೂಪಿ ಯಾವ ರಾಜ್ಯದ ರಾಜಕುಮಾರಿ ಎಂದು ಮನದಲ್ಲೇ ಆಲೋಚಿಸತೊಡಗಿದನು. ಅಷ್ಟರಲ್ಲಿ ಸಂಜೆಗೆ ಹೊತ್ತಾಗಿ ಮನೆಗೆ ಹೊರಡಬೇಕೆಂದು ಸಖಿಯರೊಡನೆ ಹೇಳಿದಳು. ಆಗ ರುಕ್ಮಿಣಿಯು ಸಖಿಯರೊಡನೆ ಅರಮನೆಗೆ ಹೊರಟಳು. ಅಲ್ಲೇ ಆಲೋಚಿಸುತ್ತಾ ,ನಿಂತಿದ್ದ ರಾಜಕುಮಾರನು ತನ್ನ ಸ್ನೇಹಿತ ಶಶಿ ಮಾತನಾಡಿಸಿದಾಗ ಎಚ್ಚರಗೊಂಡನು ಮತ್ತೆ ಅವರಿಬ್ಬರು ಮನೆಗೆ ತೆರಳಿದರು.
ಅಲ್ಲಿ ಬೇಟೆಗೆಂದು ಹೋಗಿದ್ದ ರಾಜಕುಮಾರನ ಹೆಸರು ಕೃಷ್ಣ . ಕೃಷ್ಣನು ರುಕ್ಮಿಣಿ ಆಲೋಚನೆಯಲ್ಲಿ ಮುಳುಗಿದ್ದನು. ಆಗ ಶಶಿಯು ಕೃಷ್ಣನ ಹತ್ತಿರ ಬಂದು ನಿನಗೇನಾಗಿದೆ ಎಂದು ಕೇಳಿದಾಗ ಮುದ್ದಾದ ಯುವತಿಯನ್ನು ಕಂಡೆನೆಂದು ಹೇಳಿದನು. ಆಕೆ ಯಾರೆಂದು ಶಶಿಯು ಕೇಳಿದಾಗ, ಆಕೆ ಯಾರೆಂದು ನನಗೆ ತಿಳಿಲಿಲ್ಲ ಆದರೆ ಅವಳ ಸೌಂದರ್ಯಕ್ಕೆ ನಾನು ಮನಸೋತಿದ್ದೇನೆ ಎಂದು ಹೇಳಿದನು. ಆಗ ಶಶಿಯು ನಿಮ್ಮ ತಂದೆಯವರ ಬಳಿ ಮಾತನಾಡುವುದಾಗಿ ಹೇಳಿದನು. ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ, ಮಹಾರಾಜ ರಾಜಶೇಖರ ಕೃಷ್ಣನ ತಂದೆ, ಅಲ್ಲಿಗೆ ಬಂದು ನೀನು ಒಪ್ಪಿರುವ ಮುದ್ದಾದ ಚೆಲುವೆ ಯಾವ ದೇಶದ ರಾಜಕುಮಾರಿಯಾದರು ಸರಿ ನಿನಗೆ ಕೊಟ್ಟು ಮದುವೆ ಮಾಡಿಸುತ್ತೇನೆ ಎಂದು ಹೇಳಿದನು. ಇತ್ತ ದೇವೇಂದ್ರನ ಮಗಳು ರುಕ್ಮಿಣಿ ಬುದ್ಧಿವಂತೆ, ಗುಣವಂತೆ,ರೂಪವಂತೆ, ಸದ್ಗುಣ ಸಂಪನ್ನಳಾಗಿದ್ದಳು. ಅದಕ್ಕೆ ರುಕ್ಮಿಣಿಯ ತಂದೆ ಬುದ್ದಿವಂತ ಮಗಳಿಗೆ ಹೋಲುವ ತಕ್ಕನಾದ ವರವನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿದನು. ಅದಕ್ಕೆ ಸರಿಯಾಗಿ ಒಂದು ಪರೀಕ್ಷೆಯನ್ನು ಸಿದ್ಧ ಮಾಡುತ್ತೇನೆ. ಆ ಪರೀಕ್ಷೆಯಲ್ಲಿ ಗೆದ್ದವರಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವುದಾಗಿ ಹೇಳುತ್ತಾನೆ. ಒಂದು ಸ್ವಯಂವರವನ್ನು ಏರ್ಪಡಿಸುತ್ತಾನೆ. ಒಂದು ಈಜ ಕೊಳದಲ್ಲಿ ನಾಲ್ಕು ಮೊಸಳೆಯನ್ನು ಬಿಡ್ತಾನೆ. ಆ ಈಜುಕೊಳ ದಾಟಿದ್ರೆ ಒಂದು ಮನೆ ಇರುತ್ತೆ ಆ ಮನೆಯಲ್ಲಿ ರಾಜಕುಮಾರಿ ಇರ್ತಾಳೆ. ಯಾರು ಈಜುಕೊಳ ದಾಟಿ ಮೊಸಳೆಯನ್ನು ಸೋಲಿಸಿ ತನ್ಮಗಳ್ನ ತಲುಪುತ್ತಾರೆ ಅವರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಹೇಳುತ್ತಾನೆ.
ಆಗ ಸ್ವಯಂಕರಕ್ಕೆ ಬಂದಿರುವ ರಾಜಕುಮಾರರೆಲ್ಲರೂ ಓಡಿ ಹೋಗ್ತಾರೆ. ಆದರೆ ರಾಜಕುಮಾರ ಕೃಷ್ಣ ಮಾತ್ರ ಅಲ್ಲಿಂದ ಕದಲೋದಿಲ್ಲ. ಧೈರ್ಯದಿಂದ ಮುನ್ನುಗುತ್ತಾನೆ. ಅಲ್ಲಿ ನಾಲ್ಕು ಮೊಸಳೆಗಳು ಕೂಡಿ ಒಂದರ ಮೇಲೊಂದು ಕಾಯುತ್ತಿರುತ್ತದೆ. ಆಗ ರಾಜಕುಮಾರ ತನ್ನ ಧೈರ್ಯದಿಂದ ಆ ಮೊಸಳೆಗಳ ಮೇಲೆ ಕಾಲಿಟ್ಟು ದಾಟುತ್ತಾನೆ ಅವನಿಗೆ ತಾಯಿ ದುರ್ಗಾದೇವಿ ಆಶೀರ್ವಾದವಿರುತ್ತದೆ. ಆದಕಾರಣ ಅವನಿಗೆ ಆ ಮೊಸಳೆಗಳು ಏನು ಮಾಡುವುದಿಲ್ಲ. ಮಹಾರಾಜ ದೇವೇಂದ್ರನು ತನ್ನ ಮಗಳಿಗೆ ತಕ್ಕವರನೆಂದು ಕೃಷ್ಣನಿಗೆ ತನ್ನ ಮಗಳು ರುಕ್ಮಿಣಿಯನ್ನು ಕೊಟ್ಟು ಮದುವೆ ಮಾಡುತ್ತಾನೆ. ಆ ರಾಜ್ಯದಲ್ಲಿ ಕೃಷ್ಣ ರುಕ್ಮಿಣಿ ಸುಖವಾಗಿ ಸಂಸಾರ ಮಾಡುತ್ತಾರೆ ಅವರಿಗೆ ಮುದ್ದಾದ ಅವಳಿ ಮಕ್ಕಳು ಜನಿಸುತ್ತಾರೆ.
© All Rights Reserved