ದೇವರು ತಟಸ್ಥನಾದಾಗ.
ಏನಿದು ದೇವರು ತಟಸ್ಥನಾಗೋದು ಅಂದ್ರೆ ಏನು?
ಒಬ್ಬ ಕುಡುಕನ ಹೆಂಡತಿ ದೇವಸ್ಥಾನಕ್ಕೆ ಬಂದು, ದೇವರೆ ನನ್ನ ಗಂಡ ಕುಡಿಯೋದು ಬಿಟ್ರೆ 101 ರೂ ಕಾಣಿಕೆ, ಹಾಕ್ತೀನಿ ತಂದೆ ಅಂತ ಹರಿಕೆ ಮಾಡ್ಕೊಳ್ತಾಳೆ.
ಅವಳ ಹಿಂದೆಯೇ ಒಬ್ಬ ವೈನ್ ಶಾಪ್ ಓನರ್ ನ ಹೆಂಡತಿ, ದೇವರೆ ನನ್ನ ಗಂಡನ ವ್ಯಾಪಾರ ಚನ್ನಾಗಿ ನಡೆಯೋತರ ನೋಡಿಕೊ, 1001ರೂ ಕಾಣಿಕೆ ಹಾಕ್ತೀನಿ ಅಂತ ಹರಿಕೆ ಮಾಡ್ಕೊಳ್ತಾಳೆ.!!
ಈ ಮೇಲಿನ ಘಟನೆ ಹಾಸ್ಯಭರಿತ ಸಂದೇಶವಾಗಿ ವೈರಲ್ ಆಗಿತ್ತು. ಆದ್ರೆ ಇದರಲ್ಲಿ ಒಂದು ಅರ್ಥಪೂರ್ಣ ಸಂದೇಶ ಕೂಡ ಇದೆ.
ಆ ಇಬ್ಬರಲ್ಲಿ ದೇವರು ಯಾರ ಮೊರೆಯನ್ನು ಆಲಿಸ ಬೇಕು?
ಈಗ ಯಾರಿಗೆ ಕೃಪೆ ತೋರಬೇಕು!!!
ಈಗ ಮನುಷ್ಯನ ಸ್ವಯಂಕೃತ ಅಪರಾಧಗಳಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪ, ಅಕಾಲಿಕ ಮಳೆ, ಮತ್ತು ಜಲಪ್ರಳಯ, ಮುಳುಗಡೆಗಳಿಗೆ ಮನುಷ್ಯನೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣ.
ಸಾವಿರಾರು ಕೆರೆ, ಕಟ್ಟೆಗಳನ್ನು ಮುಚ್ಚಿ ಬಸ್ಟಾಪ್ಗಳು, ಆಟದ ಮೈದಾನ, ಪ್ರತಿಷ್ಟಿತ ಬಡವಾಣೆಗಳ ನಿರ್ಮಾಣ, ಮಾಡಿ.
ರಾಜ ಕಾಲುವೆ, ಕೆರೆ , ನದಿಯ ಬಫರ್ ಜೋ಼ನ್ ಗಳ ಒತ್ತುವರಿ ಮಾಡ್ಕೊಂಡು.
ಈಗ...