...

3 views

ಅಜ್ಜಿ ಆಕಾಶ
ಇದು ನನ್ನ ಕತೆ, ಅನುಭವ, ನನ್ನ ಪ್ರೀತಿ ಕೂಡಾ ಹೌದು. ನಾವು ಚಿಕ್ಕೋರಿದ್ದಾಗ ಜೀವನ ತುಂಬಾ ಚೆನ್ನಾಗಿತ್ತು. ಯಾಕಂದ್ರೆ ಅವಾಗ ನಮ್ಮ ಜೊತೆ ನಮ್ ಅಜ್ಜಿ ಇರ್ತಿದ್ಲು. ಬರೀ ಆಟ, ಹುಡುಗಾಟ, ಹುಡುಕಾಟ ಕೂಡ ಅಜ್ಜಿನ..।. ಮತ್ತೆ ಕುಶಿ, ಕನಸು, ಬಿದ್ದಾಗ ಸ್ವಲ್ಪ ನೋವು-ಅಜ್ಜಿ ಬಂದು ರಮಿಸಿ ತಿನ್ನೋಕ್ ಏನಾದ್ರೂ ಕೊಟ್ಟರೆ ಸಮಾಧಾನ. ಹೀಗೇ ವಿಚಿತ್ರ ಖುಷಿಗಳು.‘ವಿಚಿತ್ರ’ ಅಂತ ಯಾಕ ಹೇಳದೆ ಅಂತೀರಾ.. ಯಾಕಂದ್ರೆ ಈಗ ನಮಗೂ ಹಾಗೂ ಇವಾಗಿನ ಪೀಳಗೆಗೆ ಆ ತರ ಪ್ರೀತಿ ದುಡ್ಡು ಕೊಟ್ಟು ಹುಡ್ಗಿದ್ರೂ ಸಿಗಲ್ಲ. ಸಿಗೋಕೆ ಅದೇನು ವಸ್ತು ನಾ. ಪ್ರೀತಿ ಅದು..।. ಮನಸ್ಸಿನ ಅಳಕ್ಕೆ ಇಳಿದು, ಹೃದಯಾನ ಜೋಪಾನವಾಗಿ ನೋಡ್ಕೊಂಡು, ಬೆಚ್ಚಗೆ ತಮ್ಮ ಮಡಿಲಲ್ಲಿ ಮಲಗಿಸಿಕೊಂಡು ಗುಬ್ಬಚ್ಚಿ ತರ ನೋಡ್ಕೊಂಡು ಸಾಗರದಷ್ಟು ಪ್ರೀತಿ ಕೊಡೋ ಅಜ್ಜಿ ಪ್ರೀತಿ ಅದು. ನಂಗಂತೂ ಅಜ್ಜಿ ಪ್ರೀತಿ ಬಗ್ಗೆ ಹೇಳೋಕೆ ಪದಗಳು ಸಾಕಾಗಲ್ಲ. ಹೊಸ ಪದಗಳನ ಹುಡಕ್ತಿದಿನಿ ಯಾಕ್ ಗೊತ್ತಾ ಪದಗಳ ತರ ಅಜ್ಜಿನೂ ಕಳದೇ ಹೋದ್ಲು. ಹೌದು ಭೂತಕಾಲದ ಜೊತೆ ಅಜ್ಜಿ ಕೂಡ ಕಳದೆ ಹೋದ್ಲು. ಅಜ್ಜಿ ನನ್ನ ಬಿಟ್ಟು ಹೋದಮೇಲೆನೇ ನನಗೆ ಗೊತ್ತಾಗಿದ್ದು ನಾನ್ ಕಳಕೊಂಡಿರೋದು ಬರ್ರಿ ಅಜ್ಜಿ ನಾ ಅಲ್ಲಾ. ಬೆಚ್ಚನೆ ಮಡಿಲು, ಕೋಟೆ ಅಂತ ರಕ್ಷಣೆ, ಹೃದಯ ತುಂಬಿಸೋ ಪ್ರೀತಿ, ನಿಟ್ಟುಸಿರು ಬಿಡೋವಸ್ತು ಕಾಳಜಿ, ಅನುಬಂಧ, ಕಪ್ಪೆ ಚಿಪ್ಪಿನ ಪ್ರೀತಿ. ನಂಗಂತೂ ನನ್ನ ಅಜ್ಜಿ ಸಾವಿರ ಅನುಭವಗಳ ರಾಶಿ. ಅವಳಿಂದ್ ಎಷ್ಟು ಏಟುಗಳನ ತಿಂದಿದಿನೋ , ಅಷ್ಟೇ ಕಲ್ತಿದಿನಿ ಕೂಡ. ಇವತ್ತು ನನ್ನ ಜೀವನದಲ್ಲಿ ಸ್ವಲ್ಪನಾದ್ರೂ ಶಿಸ್ತು, ಸತ್ಯ, ಗೌರವ, ಒಳ್ಳೆ ಜೀವನ ಇದೆ ಅಂದ್ರೆ ಅದು ಬಂದಿದ್ದು ನನ್ನ ಅಜ್ಜಿ ಇಂದಾ. ಅಜ್ಜಿ ನಾ ‘ಆಲದ’ ಮರ ಅಂತಾರೆ. ಅಲ್ಲಾ ಅಜ್ಜಿ ‘ಆಕಾಶ’. ಆಕಾಶದಲ್ಲಿ ಎಷ್ಟು ನಕ್ಷತ್ರಗಳು ಇದಾವೋ ಅಸ್ತು ವಿಚಾರಗಳು ಅಜ್ಜಿ ಹತ್ರ ಇರತ್ತೆ. ಅವರು ತೋರ್ಸೋ ಪ್ರೀತಿ, ಕಾಳಜಿ, ಅಪ್ಪುಗೆ, ಹೀಗೇ ಅನಂತ ವಿಚಾರಗಳು. ಇವಾಗ್ಲು ನನಗೇನಾದ್ರೂ ನೋವಾದಾಗ ನಂಗೆ ನೆನಪಾಗೋದು ಅಜ್ಜಿನೇ. ಅವಳ ಮಡಿಲಲ್ಲಿ ಮಲ್ಗ್ತಿದ್ದು, ಅವಳ ಜೋತುಬಿದ್ದ ಹಿಂದಿನ್ ಶೆರಗಲ್ಲಿ ಕೈ ಸಿಕ್ಕಿಸಿ ಓಡ್ತಿದ್ದದ್ದು. ಯಾರಾದ್ರೂ ಬೈಯೋಕ್ ಬಂದ್ರೆ ಅವಳ ಹಿಂದೆ ಬಚ್ಚಿಟ್ಕೊಂಡಿದ್ದು. ಅವಳ ಹೊಟ್ಟೆನಾ ಸವರ್ತಾ ಮಲಗ್ತಿದ್ದದ್ದು. ನಾ ಮುನಸ್ಕೊಂಡಾಗ “ನಮ್ಮವ್ವ ಶಾಣ್ಯ ಅಲಾ ಊಟ ಮಾಡು” , “ಕಾಳ್ಬಿಳ್ತೀನವಾ ಸ್ವಲ್ಪದ್ರು ತಿನ್ನು” ಅನ್ನೋ ಮಾತುಗಳು ನೆನಪಾಗುತ್ತೆ. ಇವಾಗ ಊಟ ಬಿಟ್ರು.. ಹಗಲು ರಾತ್ರಿ ಅಳತಾ ಕುತ್ರು ಯಾರು ಬಂದು ಏನಾಯ್ತು ಅಂತ ಕೂಡ ಕೇಳಲ್ಲ. ಮತ್ತೆ ಆ ಜೀವನಕ್ಕೆ ಹೋಗೋ ಆಸೆ. ನಾನ್ ಅಜ್ಜಿ ಜೊತೆನೇ ಇರ್ಬೇಕು ಅನ್ನೋ ಆಸೆ.ಅವಳ ಮಡಿಲಲ್ಲಿ ಮತ್ತೆ ಮಲಗ್ಬೇಕು ಅನ್ನೋ ಆಸೆ.. ಆದ್ರೆ ಅಜ್ಜಿ ನನ್ ಬಿಟ್ಟು ದೂರ ಹೋದ್ಲು. ಇವಾಗ ಬರೀ ಅವಳ ನೆನಪುಗಳೇ ನಂಗೆ ಆಸರೆ, ಅಕ್ಕರೆ. ಇವಾಗಿನ್ ಕಾಲದಲ್ಲಿ ಮತ್ತೆ ನಮ್ ಹಳೇ ಕಾಲದ ಅಜ್ಜಿಗಳನಾ ನೋಡ್ಬಾಹುದಾ? ಇಲ್ಲಾ ಇದು ಕಲಿಯುಗ. ಕಲ್ಲು ಮನಸಿರೋ ಕಿತ್ತು ತಿನ್ನೋ ಜನರ ಕಾಲ. ನಮ್ಮ ಅಜ್ಜಿಗಳ ಪ್ರೀತಿ ಇವಾಗ ಬರೀ ಇತಿಹಾಸ ಅಷ್ಟೇ.

“ನೀನು ಅಲ್ಲದ ಮಾರ ಅಲ್ಲ ಅಜ್ಜಿ, ಆಕಾಶ”
ಮಿಸ್ ಯು ಅಜ್ಜಿ...,,