...

4 views

ಚಕ್ರವ್ಯೂಹ..
ಚಕ್ರವ್ಯೂಹ

ವಿಶ್ವ ಕಂಡು ಕೇಳರಿಯದ ರೌದ್ರ ಭಯಂಕರ ಯುದ್ದ ಮಹಾಭಾರತದ ಕುರುಕ್ಷೇತ್ರ ಕದನ.
ಅತ್ಯಾಧುನಿಕ ಯಂತ್ರ-ತಂತ್ರ-ಅಸ್ತ್ರ-ಶಸ್ತ್ರ-ಪರಮಾಣು ಬಾಂಬ್ ಇವೆಲ್ಲದರ ಉಪಯೋಗ ಕುರುಕ್ಷೇತ್ರ ಯುದ್ದದಲ್ಲಾಗಿದೆಯೆಂದರೆ ಆ ಕಾಲದ ಜನರು ವೈಜ್ಞಾನಿಕವಾಗಿ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮಗಿಂತ ಎಷ್ಟು ಮುಂದಿದ್ದರು ಎನ್ನುವುದನ್ನು ಯೋಚಿಸಿ. ಕುರುಕ್ಷೇತ್ರ ಯುದ್ದದ ರಣ ಭಯಂಕರ ಯುದ್ದ ತಂತ್ರವೆಂದರೆ “ಚಕ್ರವ್ಯೂಹ”. ಎದುರಾಳಿಯನ್ನು ಹಣಿಯಲು ಸಾಧ್ಯವೇ ಇಲ್ಲವೆಂದಾದಾಗ ಕೊನೆಯ ತಂತ್ರವಾಗಿ ಚಕ್ರವ್ಯೂಹವನ್ನು ಹೆಣೆಯಲಾಗುತ್ತಿತ್ತು. ಚಕ್ರವ್ಯೂಹದ ಹೆಸರು ಕೇಳಿದರೇನೇ ಸಾಕು ವೈರಿ ಸೈನಿಕರು ಮೂರ್ಛೆ ಹೋಗುತ್ತಿದ್ದರಂತೆ.

ಏಕೆಂದರೆ ಇಡಿಯ ವಿಶ್ವದಲ್ಲೇ ಚಕ್ರವ್ಯೂಹವನ್ನು ಭೇಧಿಸುವ ವಿದ್ಯೆ ಗೊತ್ತಿದ್ದದು ಕೇವಲ ಏಳು ಜನರಿಗೆ ಮಾತ್ರ! ಕೃಷ್ಣ, ದ್ರೋಣಾಚಾರ್ಯ, ಅರ್ಜುನ, ಭೀಷ್ಮ ಪಿತಾಮಹ, ಕರ್ಣ, ಅಶ್ವತ್ಥಾಮ ಮತ್ತು ಪ್ರದ್ಯುಮ್ನನನ್ನು ಹೊರತು ಪಡಿಸಿ ಬೇರಿನ್ನಾರಿಗೂ ಚಕ್ರವ್ಯೂಹವನ್ನು ಭೇಧಿಸುವ ರಹಸ್ಯ ಗೊತ್ತಿರಲಿಲ್ಲ. ಅಭಿಮನ್ಯುವಿಗೆ ಚಕ್ರವ್ಯೂಹದ ಒಳಗೆ ಪ್ರವೇಶವಾಗುವುದು ಗೊತ್ತಿತ್ತೇ ವಿನಹ ಹೊರ ಬರುವುದು ತಿಳಿದಿರಲಿಲ್ಲ. ಆದ್ದರಿಂದಲೇ ಮೋಸದಿಂದ ಕೌರವರು ಆತನನ್ನು ಕೊಂದದ್ದು. ಚಕ್ರವ್ಯೂಹದೊಳಗೆ ಒಮ್ಮೆ ಪ್ರವೇಶವಾಯಿತೆಂದರೆ ಮುಗಿಯಿತು ಮತ್ತೆ ಆತ...