...

7 views

ಸ್ವಾತಿ ಮುತ್ತಿನ ಮಳೆ ಹನಿಯೇ...
#google_image source
Kannada movie review..

ಸ್ವಾತಿ ಮುತ್ತಿನ ಮಳೆ ಹನಿಯೇ...
ರಾಜ್ ಬಿ ಶೆಟ್ಟಿ ಅವರ ಸಿನೆಮಾಗಳು ವಿಭಿನ್ನವಾಗಿರುತ್ತವೆ ಎಂದರೆ ಸುಳ್ಳಲ್ಲ. ಕೆಲವೊಮ್ಮೆ ಅಬ್ಬರ, ರಕ್ತದೊಕುಳಿಯಲ್ಲಿ ಮಿಂದೆದ್ದರೂ ಕೆಲವೊಮ್ಮೆ ಮೌನವಾಗಿ ಕುಳಿತು ಆಳವಾಗಿ ಇಳಿದು ಸಿನೆಮಾವನ್ನು ವೀಕ್ಷಿಸುವಂತಿರುತ್ತದೆ. ಟೋಬಿ ಸಿನೆಮಾ ಹೇಗೆ ಜ‌ನರು ಸ್ವೀಕರಿಸಿದರೂ ಆ ದೃಷ್ಟಿಕೋನದಿಂದ "ಸ್ವಾತಿ ಮುತ್ತಿನ ಮಳೆಹನಿಯೇ" ಸಿನೆಮಾವನ್ನು ನೋಡುವ ಹಾಗಿಲ್ಲ.

ಇಲ್ಲಿ ಆರಂಭದಿಂದ ಅಂತ್ಯದವರೆಗೂ ಸಂಪೂರ್ಣ ವಿಭಿನ್ನ. ತಾಳ್ಮೆ ಇರುವವರಿಗೆ ಮಾತ್ರ ಈ ಸಿನೆಮಾ ಇಷ್ಟವಾಗುವುದು. ಕವಿಗಳಿಗೆ ಸ್ಪೂರ್ತಿ ನೀಡಬಹುದು. ಮೈಮನದ ತುಂಬೆಲ್ಲ ಮೌನ ಆವರಿಸಿಬಿಡುವುದು. ನಮ್ಮಂತಹ ಕರಾವಳಿಯವರಿಗೆ ಘಾಟಿಯ ಇಳಿದುಕೊಂಡು ಊರಿಗೆ ಹೋಗಬೇಕಾದರೆ ಆ ತಿರುವು ಬಂದಾಗ ಖಂಡಿತಾ ಈ ಸಿನೆಮಾ ನೆನಪಾಗದೇ ಇರದು. ನಂಜಿಬಟ್ಟಲು ಹೂವು, ಕೆರೆ (ಲೇಕ್) ಬಗೆಗಿನ ಕವಿತೆಗಳು ಅದನ್ನು ಓದಿದ ರೀತಿ ಆಪ್ತವಾಗುತ್ತದೆ. ಕವನ ವಾಚನ ಮಾಡುವುದೂ ಅವರಿಂದ ಕಲಿಯಬೇಕು😀✒

ಆ ಲೇಕ್ ಬಗೆಗೆ ಬರೆದ ಕವಿತೆಗೆ ಫ್ರೇಮ್ ಹಾಕಿರಿಸಿದ ಪ್ರೇರಣಾ...
ಯಾರಿಗೂ ಇಷ್ಟವಿಲ್ಲದಿದ್ದರೂ ನಿರ್ಲಕ್ಷಕ್ಕೆ ಒಳಗಾದರೂ ದೇವರ ಮುಡಿಗೇರದೇ ಹೋದರೂ ತನಗಾಗಿ ಅರಳಿ ದಿನಕಳೆದು ಉದುರಿ ಹೋಗುವ ನಂಜಿಬಟ್ಟಲು ಹೂವು ನಿಜಕ್ಕೂ ಗ್ರೇಟ್ ಎನ್ನುವ ಅನಿಕೇತ್ ಅವರ ಪಾತ್ರಗಳು ಕೇವಲ ಪಾತ್ರಗಳಾದೇ ವೀಕ್ಷಕನನ್ನು ಆವರಿಸಿ ಬಿಡುವುದು.

ಈ ಸಿನೆಮಾ ನೋಡಿದಾಗ‌ ಅನಿಸುವುದು ರಾಜ್ ಬಿ ಶೆಟ್ಟಿ ಅವರೇ ತಮ್ಮ ಕೊನೆಯ ದಿನಗಳು ಹೀಗ್ ಹೀಗೆ ಇರಬೇಕು, ಯಾರೋ ಅಪರಿಚಿತನಾಗಿ ಉಳಿದುಬಿಡಬೇಕು, ಸಾಯುವ ಕೊನೆಯ ದಿನಗಳಲ್ಲಿ ಬೊಗಸೆ ತುಂಬಾ ಪ್ರೀತಿ ನೀಡುವ ಒಂದು ಜೀವ ಜೊತೆಗಿರಬೇಕು, ತಾನು ಸತ್ತರೆ ಆ ಬೂದಿಯನ್ನು ಯಾವುದೇ ನದಿಯಲ್ಲಿ ಎಸೆಯದೇ ಅದೇ ಘಾಟಿಯ ತಿರುವಿನಲ್ಲಿ ಸಿಗುವ ಗಿಡಗಂಟಿಗಳ ಮೇಲೆ‌ ಚೆಲ್ಲಬೇಕು. ಎಲೆಗಳ‌ ಮೇಲೆ ಬೂದಿಯಾಗಿ ಕುಳಿತು ಹೋಗಿ ಬರುವ ಪ್ರಯಾಣಿಕರ ಗಮನಿಸುತ್ತಲೇ‌ ಇರುವ ಆಸೆಯನ್ನು ವ್ಯಕ್ತಪಡಿಸಿದ್ದರು.

ಒಬ್ಬ ವ್ಯಕ್ತಿ ಪ್ರಯಾಣಿಸುವಾಗಲೇ ಅವರು ಅವರಾಗಿಯೇ ಇರುತ್ತಾರೆ, ಉಳಿದಂತೆ ಎದುರಿಗಿರುವವನಿಗೆ ಹೇಗೆ ಬೇಕೋ ಹಾಗೆ ಬದಲಾವಣೆ ಮಾಡಿಕೊಂಡು ನಿಂತಿರುತ್ತಾರೆ, ಮಾತನಾಡುತ್ತಾರೆ ಎಂಬ ಸತ್ಯವನ್ನು ತಿಳಿಸಿದರು.

ಸಿಂಧು ಭಾರ್ಗವ ಬೆಂಗಳೂರು
ಲೇಖಕಿ.

#ಸಿಂಧುಚಿಂತನೆ
#ಸಿಂಧುಲೇಖನ
#ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ_ಬರಹಗಳು
#ಸ್ವಾತಿಮುತ್ತಿನಮಳೆಹನಿಯೇ #ರಾಜ್_ಬಿ_ಶೆಟ್ಟಿ #rajbshetty
© Writer Sindhu Bhargava