...

3 views

ಸೈನಿಕ.....
ಸೈನಿಕ

                                1


ಖಾಸಗಿ ಶಾಲೆಯೊಂದರ ಆವರಣದಲ್ಲಿ ಇಂದು ಪೋಷಕರ ಸಭೆಯನ್ನು ಏರ್ಪಡಿಸಲಾಗಿತ್ತು....ಎಲ್ಲ ಮಕ್ಕಳು ತಮ್ಮ ತಂದೆ ತಾಯಿರೊಂದಿಗೆ ಆ ಸಭೆಯನ್ನು ವೀಕ್ಷಿಸಲು  ಆಗಮಿಸಿದ್ದಾರೆ...


ಶಾಲೆಯ ಮುಖ್ಯ  ಶಿಕ್ಷಕರಾದ  ಮಂಜುನಾಥವರು ಎಲ್ಲ ಮಕ್ಕಳ ಪೋಷಕರನ್ನು ಆ ಸಭೆಗೆ ಸ್ವಾಗತವನ್ನು ಕೋರುತ್ತಾರೆ....


ಇಂದು ಶಾಲೆಯಲ್ಲಿ ಪೋಷಕರ ಸಭೆಯನ್ನು ಏರ್ಪಡಿಸಲು ಕಾರಣ ಮಕ್ಕಳನ್ನು ಪ್ರೋತ್ಸಾಹಿಸಲು....
ಆ ಸಭೆಯಲ್ಲಿ ಇಂದು ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು....... ಶಾಲಾ ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಅತ್ಯುತ್ತಮ ವಿದ್ಯಾರ್ಥಿ ಎಂಬ ಬಿರುದನ್ನು ಕೊಡುವ ಸಲುವಾಗಿ ಸಭೆಯನ್ನು ಏರ್ಪಡಿಸಲಾಗಿತ್ತು.....



ಸಭೆಯ ಮೂಲೆಯೊಂದರಲ್ಲಿ 7 ವರ್ಷದ  ಮಕ್ಕಳಿಬ್ಬರೂ ಸಮಾರಂಭವನ್ನು ವೀಕ್ಷಿಸುತ್ತಾ ಕುಳಿತಿದ್ದರು...... ಆ ಸಭೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂಬ ಬಿರುದನ್ನು ಆ ಮಕ್ಕಳಿಗೆ ಕೊಡಲಾಗುತ್ತದೆ..... ಇಬ್ಬರು ಕೂಡ ಶಾಲೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ  ಅತ್ಯುತ್ತಮವಾದ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ......




ಆ ಮಕ್ಕಳ ಜೊತೆ ಅವರ ತಾಯಿ  ಮಾತ್ರ ಸಮಾರಂಭರಕ್ಕೆ ಆಗಮಿಸಿದ್ದರು..... ಆ ತಾಯಿಗೆ ಮಕ್ಕಳ ಮಾಡಿದ ಸಾಧನೆ  ನೋಡಿ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಸುತ್ತಿದ್ದಳು...



ಆದರೆ  ಬೇರೆ ಮಕ್ಕಳು ತಮ್ಮ ತಂದೆ ತಾಯಿರೊಡನೆ ಆ ಸಮಾರಂಭಕ್ಕಾಗಿ ಆಗಮಿಸುತ್ತಾರೆ ಅದನ್ನು ನೋಡಿ ಈ ಮಕ್ಕಳಿಬ್ಬರ ಮನಸ್ಸಿನಲ್ಲಿ ತಮ್ಮ ತಂದೆ ಮಾತ್ರ ಯಾವ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂಬ ಪ್ರಶ್ನೆ ಅವರ ಮನದಲ್ಲಿ  ಕಾಡುತ್ತಿರುತ್ತದೆ......



ಆ ಕಾರ್ಯಕ್ರಮ ಮುಗಿದ ನಂತರ ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯರೊಂದಿಗೆ  ಮನೆಗೆ ಹೊರಡಲು ಸಿದ್ಧವಾಗುತ್ತಾರೆ.... ಆದರೆ ಈ ಮಕ್ಕಳು ಮುಖದಲ್ಲಿ ಬೇಸರದ ಛಾಯೆ ತುಂಬಿರುತ್ತದೆ....



ಅದನ್ನು ಗಮನಿಸಿದ ಆ ಮಕ್ಕಳ ತಾಯಿ  ನೀವೇಕೆ ಬೇಸರದಲ್ಲಿ ಇದ್ದೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾಳೆ??
ಅದಕ್ಕೆ ಆ ಮಕ್ಕಳಿಬ್ಬರು ತಮ್ಮ ಕಣ್ಣಲ್ಲಿ ನೀರನ್ನು ತುಂಬಿಕೊಂಡು ಅವಳ ತಾಯಿಯನ್ನು ಅಪ್ಪಿಕೊಳ್ಳುತ್ತಾರೆ...



ಈ ನನ್ನ ಮುದ್ದು ಪುಟಾಣಿಗಳ ಕಣ್ಣುಗಳಲ್ಲಿ ಇವತ್ತು ಏಕೆ ನೀರು?? ಎಂದು ತನ್ನ ಮಕ್ಕಳ ಕಣ್ಣೀರನ್ನು ಒರೆಸುತ್ತಾ ಅಕ್ಕರೆಯಿಂದ ತಾಯಿ ಪ್ರಶ್ನಿಸುತ್ತಾಳೆ



ಅಮ್ಮ ನಮ್ಮ ಅಪ್ಪ ಎಲ್ಲಿದ್ದಾರೆ??? ಇಲ್ಲಿವರೆಗೂ ನಮ್ಮ ಶಾಲೆಯಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೂ ಅವರು ಬರುವುದಿಲ್ಲ ಏಕೆ  ಅಮ್ಮ??? ನಾವು ಹುಟ್ಟಿದಾಗಿನಿಂದಲೂ ಇಲ್ಲಿವರೆಗೂ ಅಪ್ಪನನ್ನು ನೀನು ಯಾಕೆ  ತೋರಿಸಿಲ್ಲ???
ಅಪ್ಪನಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಯಾಕೆ??? ಎಂದು ಅಳುತ್ತಾ ಮಕ್ಕಳಿಬ್ಬರು ತಮ್ಮ ತಾಯಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ...



  ಮಕ್ಕಳ ಈ ಪ್ರಶ್ನೆಯನ್ನು ಕೇಳಿ ತಾಯಿಗೆ ಹೇಗೆ ಉತ್ತರಿಸಬೇಕು ಎಂದು  ತಿಳಿಯದಾಗುತ್ತದೆ.... ಕಾರಣ ಮಕ್ಕಳಿಬ್ಬರೂ ಹುಟ್ಟಿದಾಗಿನಿಂದಲೂ ಇತರ ಪ್ರಶ್ನೆ ಯಾವತ್ತು ತಾಯಿಗೆ ಕೇಳುವುದಿಲ್ಲ ಮೊದಲನೇ ಬಾರಿ ಪ್ರಶ್ನೆಯನ್ನು ಕೇಳುತ್ತಾರೆ...



ತನ್ನ ಇಬ್ಬರು ಮಕ್ಕಳಿಗೆ ತಂದೆ ನೆನಪು ಬಾರದಂತೆ ಅವಳು ತುಂಬಾ ಕಾಳಜಿಯಿಂದ ಬೆಳೆಸಿರುತ್ತಾಳೆ....ಆದರೆ ಇವತ್ತಿನ ತನ್ನ ಮಕ್ಕಳ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಯೋಚನೆಯಲ್ಲಿ ಮಗ್ನಳಾಗಿರುತ್ತಾಳೆ...



ತನ್ನ ತಾಯಿ ಸುಮ್ಮನೆ ನಿಂತಿರುವುದನ್ನು ನೋಡಿ ಆ ಮಕ್ಕಳಿಬ್ಬರು ಈ ಪ್ರಶ್ನೆಯನ್ನು ಕೇಳಬಾರದು ಎನ್ನುವ ಮನೋಭಾವ ಅವರನ್ನು ಕಾಡುತ್ತಿರುತ್ತದೆ....


ಅಮ್ಮ ನಮ್ಮದು ತಪ್ಪಾಯ್ತು ಇನ್ಯಾವತ್ತೂ ನಾವಿಬ್ಬರೂ ಅಪ್ಪನೇ ಬಗ್ಗೆ ನಿನ್ನ ಮುಂದೆ ಯಾವತ್ತೂ ಮಾತನಾಡುವುದಿಲ್ಲ.....


ಅಪ್ಪನಿಗೆ ನಿನ್ನ ಮೇಲೆ ಮತ್ತು ನಮ್ಮ ಮೇಲೆ ಪ್ರೀತಿನೇ ಇಲ್ಲ ಪ್ರೀತಿ ಇದ್ದಿದ್ದರೆ ಅವರನ್ನು ನಮ್ಮನ್ನು ಹೇಗೆ ಬಿಟ್ಟು ಹೋಗುತ್ತಿರಲಿಲ್ಲ ???
ಅಮ್ಮ ನಮ್ಮದು ತಪ್ಪಾಯ್ತು ಎಂದು ತನ್ನ ತಾಯಿಯ ಮುಂದೆ ಮಕ್ಕಳಿಬ್ಬರು  ಹೇಳುತ್ತಾರೆ.....



ಆ ಮಾತನ್ನು ಕೇಳಿ ಆ ತಾಯಿ ಮಕ್ಕಳೇ ನಿಮ್ಮ ತಂದೆಗೆ ನನ್ನ ಮೇಲೆ ಮತ್ತು ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ ಆದರೆ ಅವರು ನಮ್ಮ ಜೊತೆ ಇಲ್ಲ ಅಷ್ಟೇ...


ಮಕ್ಕಳೇ ಮನೆಗೆ ಹೋದಮೇಲೆ ನಿಮ್ಮ ತಂದೆ ಬಗ್ಗೆ ನಾನು ಹೇಳುತ್ತೇನೆ...


ತಾಯಿಯ ಮಾತನ್ನು ಕೇಳಿ ಮಕ್ಕಳಿಗೆ ತುಂಬಾ ಸಂತೋಷವಾಯಿತು......

ಅರೆ ನಾ ಇಬ್ಬರು ಮಕ್ಕಳ ಹೆಸರನ್ನು ಇನ್ನು ಹೇಳಿಲ್ಲ ತಾನೇ

ಅವಳಿ ಜವಳಿ ಮಕ್ಕಳು... ಒಂದು ಹೆಣ್ಣು ಮಗು ಇನ್ನೊಂದು ಗಂಡು ಮಗು... ಮೊದಲನೇ ಮಗಳ ಹೆಸರು ಅದಿತಿ... ಗಂಡು ಮಗುವಿನ ಹೆಸರು ಆದಿತ್ಯ...ಆ ಮಕ್ಕಳ ತಾಯಿಯ ಹೆಸರು ಆರೋಹಿ...


ಆರೋಹಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗುತ್ತಾಳೆ....

ಆರೋಹಿ :ಆದಿತಿ ಆದಿತ್ಯ ಊಟ ಮಾಡಕ್ಕೆ ಬನ್ನಿ ಮಕ್ಕಳೇ

ಆದಿತ್ಯ ಮತ್ತು ಆದಿತಿ :ಅಮ್ಮ ಅಪ್ಪನ ಬಗ್ಗೆ ಯಾವಾಗ ಹೇಳುತ್ತಿರಿ  ??

ಆರೋಹಿ: ಮಕ್ಕಳೇ ಮೊದಲು ಊಟ ಮಾಡಿ ಆಮೇಲೆ ನಿಮ್ಮ ತಂದೆ ಬಗ್ಗೆ ಹೇಳುತ್ತೇನೆ...

ಆದಿತ್ಯ ಮತ್ತು ಆದಿತಿ: ಆಯಿತು ಅಮ್ಮ


ಆರೋಹಿ ತನ್ನ ಮಕ್ಕಳನ್ನು ಮುಂದೆ ಕೂಡಿಸಿಕೊಂಡು ತನ್ನ ಘತ ಜೀವನದ  ನೆನಪಿನಂಗಳಕ್ಕೆ ಜಾರುತ್ತಾಳೆ....

ಕೃಷ್ಣ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ವಾಸುದೇವ ವೇಣುಗೋಪಾಲ ಬಾ
ಕೃಷ್ಣ ಬಾ ನೀ ಬೇಗನೆ ಬಾ



ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡು ನೀನೆ,
ಹಾಡಿನ ಪರಾಣವು ನೀನೆ
ಪ್ರೀತಿಯ ರಾಧೆ ಪ್ರತಿಕ್ಷಣ ಕಾದೆ, ಏನನು ಮಾಡಲಿ ನಾನು,
ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ.... ಬೇಗ ಬಾ.... ನೀ ಬೇಗ ಬಾ
ನೀ ಬೇಗನೆ ಬಾರೋ...



ಜನನವು ನೀನೆ ,ಮರಣವು ನೀನೆ, ನನ್ನೆದೆ ಧ್ಯಾನವು ನೀನೆ,
ಧ್ಯಾನದ ಪ್ರಣತಿಯು ನಾನೇ
ಬೆಳಗುವ ದೀಪ, ತೋರಿಸುವ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ್ತ ಕಾಯುವೆ ನಾನು..
ಕೇಶವ ಜನಾರ್ಧನ ಬಾ.... ಬೇಗನೆ ಬಾ... ನೀ ಬೇಗನೆ ಬಾ..

ಎಂದು ಸುಶ್ರಾವ್ಯವಾಗಿ ಹರಿದು ಬರುತ್ತಿರುವ ಹೆಣ್ಣಿನ ಧ್ವನಿಯನ್ನು ಆಲಿಸುತ್ತಾ, ಧ್ವನಿ  ಕೇಳಿ ಬರುತ್ತಿರುವ ದಿಕ್ಕಿಲ್ಲಿ ಮಂತ್ರಮುಗ್ಧವನ್ನಾಗಿ ಹೆಜ್ಜೆ  ಹಾಕುತ್ತಿದ್ದನು.....



ಕೊನೆಗೂ ಆ ಧ್ವನಿ ಕೇಳಿಬರುತ್ತಿರುವ ಮನೆಯ ಮುಂದೆ  ಕುಳಿತುಕೊಳ್ಳುತ್ತಾನೆ ಒಂದು  ಹುಡುಗಿ ತನ್ನೆರಡು ಕಣ್ಣುಗಳನ್ನು ಮುಚ್ಚಿಕೊಂಡು ಈ ಹಾಡು ಹಾಡುವುದರಲ್ಲಿ ಸಂಪೂರ್ಣ ಮಗ್ನಳಾಗಿರುತ್ತಾಳೆ....



ಹಾಡು ಮುಗಿದ ನಂತರ ಎಲ್ಲರೂ ತಮ್ಮ  ಮನೆಗೆ ಹೋಗಬೇಕೆಂದು ಸಿದ್ಧವಾಗುವಾಗುತ್ತಾರೆ.... ಮನೆಯ  ಹೊರಗಡೆ ಇರುವ ಕಟ್ಟೆಯಮೇಲೆ ಒಂದು ಯುವಕ ಕುಳಿತುಕೊಂಡು ತದೇಕಚಿತ್ತದಿಂದ ಹಾಡನ್ನು ಹಾಡುತ್ತಿರುವ ನೋಡುತ್ತಿರುತ್ತಾನೆ..... ಅವನು ಯಾವುದೋ ಲೋಕದಲ್ಲಿ ಮುಳುಗಿರುತ್ತಾರೆ.... ಒಬ್ಬಳು ಹುಡುಗಿ ಬಂದು ಅವನ ಭುಜವನ್ನು ಅಲುಗಾಡಿಸಿದಾಗ ಅವನು ತನ್ನ ಕಣ್ಣುಗಳನ್ನು ತೆರೆಯುತ್ತಾನೆ.....



ಸಂಗೀತ: ಮಿಸ್ಟರ್ ಯಾರ್ ನೀವು ಇಲ್ಲಿಗ್ಯಾಕೆ ಬಂದಿದ್ದೀರಿ??

ಆರ್ಯನ್: ಅಯ್ಯೋ ನಾನು  ಇಲ್ಲಿ ಹೇಗೆ ಬಂದೆ??

ಸಂಗೀತ: ನಿಮ್ ರೆಕ್ಕೆ ಕಟ್ಟಿಕೊಂಡು ಹಕ್ಕಿಯಾಗಿ ಹಾರಿ ಬಂದಿರಿ...

ಆರ್ಯನ್: ಮೇಡಂ ತಮಾಷೆ ಮಾಡಬೇಡಿ ಸುಮ್ಮನೆ... ನಾನು ಇಲ್ಲಿ ಮೊದಲನೇ ಸಾರಿ  ಈ ಜಾಗಕ್ಕೆ ಬಂದಿದ್ದು.... ಹೇಗೆ ಬಂದೆ ನನಗೆ ಒಂದು ತಿಳಿಯುತ್ತಿಲ್ಲ...

ಸಂಗೀತ: ಒಳ್ಳೆ ಮೆಂಟ್ಲು ಸವಾಸ ಆಯ್ತು...

ಆರ್ಯನ್: ಯಾರಿಗೆ ಹೇಳ್ತಾ ಇರೋದು ಮೆಂಟಲ್ ಅಂತ ನೀನ್ ಮೆಂಟಲ್...

ಸಂಗೀತ: ಹೇ ಯಾರಿಗೆ ಹೇಳ್ತಾ ಇದ್ದೀಯಾ ಮೆಂಟಲ್ ಅಂತ....

ಆದಿತ್ಯ: ನಿಮಗೆ ಹೇಳ್ತಾ ಇರೋದು

ಸಂಗೀತ: ಮಿಸ್ಟರ್ ಇತರ ಮಾತಾಡಿ ಸರಿ ಇರುವುದಿಲ್ಲ...

ಸಂಗೀತ ಮತ್ತು  ಆರ್ಯನ್ ಮಾತಿನಚಕಮಕಿ ಹೀಗೆ ಸಾಗುತ್ತಾ ಇರುತ್ತೆ....


ಆಗಲೇ ಹಾಡಿದ ಹುಡುಗಿ ಬರುವುದನ್ನು ಗಮನಿಸಿದ ಆರ್ಯನ್ ಒಂದು ಕ್ಷಣ ಮೈಮರೆತು ಈ ಲೋಕದಲ್ಲಿ ಇಲ್ಲದಿರುವಂತೆ ನಿಂತುಕೊಳ್ಳುತ್ತಾನೆ... ಆ ಹುಡುಗಿನ ನೋಡಿದ ಒಂದು ಕ್ಷಣ ಆರ್ಯನ್ ಕಳೆದುಹೋಗುತ್ತಾನೆ....


ಆರೋಹಿ: ಈ ಸಂಗೀತ ಯಾರ ಜೊತೆ ಜಗಳ ಮಾಡ್ತಾ ಇದ್ದೀಯಾ??


ಸಂಗೀತ: ಇಲ್ಲಿ ನಿಂತಿದ್ದಾನೆ ಈ ವ್ಯಕ್ತಿ ಜೊತೆ..


ಆರೋಹಿ: ಏನಾಯ್ತು ಯಾಕೆ ಜಗಳ ಮಾಡ್ತಿದ್ದೀಯಾ?

ಸಂಗೀತ: ಈ ವ್ಯಕ್ತಿ ಮನೆ ಮುಂದೆ  ಕುಳಿತುಕೊಂಡಿದ್ದರು... ನಿಮಗ್ಯಾರು ಬೇಕಿತ್ತು ???ಯಾಕೆ ಇಲ್ಲಿ ಬಂದದ್ದಿರಿ ಅಂತಾ ಕೇಳಿದೆ?? ಅಷ್ಟೇ ತಲೆಕೆಟ್ಟವರು  ಹಾಗೆ ಆಡುತ್ತಿದ್ದಾರ...

ಆರೋಹಿ: ಹೋಗ್ಲಿ ಬಿಡು ನಮಗ್ಯಾಕೆ ಬೇಕು... ಇವರ ಜೊತೆ ಮಾತನಾಡುವುದನ್ನು  ಗುರುಗಳು ನೋಡಿದರೆ ಅಷ್ಟೇ  ನಮ್ಮ ಕಥೆ ...ನಾಳೆಯಿಂದ ಸಂಗೀತ  ಪಾಠಶಾಲೆಗೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ.....  ಇಲ್ಲಿಂದ ಬೇಗ ಹೋಗೋಣ ನಡಿ...



ಸಂಗೀತ: ಆರೋಹಿ ನೀನು ಹೇಳುತ್ತಿರುವುದು ಸರಿಯಾಗಿದೆ ಗುರುಗಳು ನೋಡೋಕಿಂತ ಮುಂಚೆ ಇಲ್ಲಿಂದ ಜಾಗ ಖಾಲಿ ಮಾಡೋಣ...


ಆರೋಹಿ ಮತ್ತು ಸಂಗೀತದಿಂದ ಹೋದರು ಕೂಡ ಆರ್ಯನ್ ಆ ಹುಡುಗಿ  ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ...


ಸ್ವಲ್ಪ ಸಮಯದ ನಂತರ ಎಚ್ಚೆತ್ತುಕೊಂಡು ಆರ್ಯನ್ ತನ್ನಷ್ಟಕ್ಕೆ ತಾನೇ ಏನೇನೋ ಮಾತನಾಡಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಾನೆ....

----೦------೦-----೦-------೦------೦-------೦------೦------೦-

ಅಯ್ಯೋ ನಾನು  ಇನ್ನು ಕೂಡ ಆರೋಹಿ ಆರ್ಯನ್ ಸಂಗೀತ ಯಾರು ಹೇಳಿಲ್ಲ  ಇವಾಗ ಹೇಳ್ತೀನಿ ಕೇಳಿ....

ಆರೋಹಿ ನಮ್ಮ ಕಥಾನಾಯಕಿ, ಸಂಗೀತ ಕಥಾನಾಯಕಿಯ ಆಪ್ತ ಸ್ನೇಹಿತೆ ಮತ್ತು  ಆರ್ಯನ್ ನಮ್ ಕಥನಾಯಕ....

ಆರೋಹಿ ನೋಡಲು ಸುಂದರಿ ಒಮ್ಮೆ ಅವಳನ್ನು ನೋಡಿದರೆ ಮತ್ತೆಮತ್ತೆ ನೋಡಬೇಕೆಂಬ ಆಸೆಯಾಗುತ್ತದೆ...ಇವಳ ಈ ಸೌಂದರ್ಯವನ್ನು ನೋಡಿದ ಎಷ್ಟು ಹುಡುಗಿಯರು ಹೊಟ್ಟೆ ಉರಿದುಕೊಂಡು ಆರೋಹಿಗೆ ಶಾಪ ಹಾಕಿದ ಹುಡುಗಿಯರು ಬಹಳಷ್ಟು ಜನ...


ಆಗತಾನೆ ಶಾಲಾ ಶಿಕ್ಷಣ ಮುಗಿಸಿ ಕಾಲೇಜ್ ವಿದ್ಯಾರ್ಥಿಯಾಗಿ ತನ್ನ ಗುರಿಯನ್ನು ಸಾಧಿಸಬೇಕೆಂಬ ಕನಸು ಹೊತ್ತುಕೊಂಡಿರುವ ಹುಡುಗಿ... ಅವಳಿಗೆ ಸಂಗೀತ ಎಂದರೆ ಪ್ರಾಣ ಅದಕ್ಕಾಗಿ ಅವಳು  ಸಣ್ಣ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಶುರುಮಾಡಿಕೊಂಡಿದ್ದಾಳೆ......



ಆಗಲೇ ಶ್ರೀ ಕೃಷ್ಣ ನೀ ಬೇಗನೆ ಬಾರೋ ಹಾಡನ್ನು ಹಾಡುತ್ತಿರುವ ಹುಡುಗಿ ಬೇರೆ ಯಾರು ಅಲ್ಲ ನಮ್ಮ ಕಥಾನಾಯಕಿ ಆರೋಹಿ....



ಸಂಗೀತ ಮತ್ತು ಆರೋಹಿ 5:00 ಗಂಟೆ ಸಮಯದಲ್ಲಿ ತಮ್ಮ ಗುರುಗಳ ಮನೆಗೆ ಹೋಗಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುತ್ತಾರೆ.... ಇದಿಷ್ಟು ನಮ್ಮ ಕಥಾನಾಯಕಿ ಪರಿಚಯ

------೦-------೦-------೦------೦-------೦--------೦------೦---

ಆರ್ಯನ್ ನೋಡಲು ಆರಡಿ ಕಟೌಟ್, ಆರ್ಯನ್ ನೋಡಲು ಚಾಕಲೇಟ್ ಹೀರೋ ತರ ಆದ್ರೆ ಅವನ ಗುಣಗಳಲ್ಲಿ ಮಾತ್ರ ವಿಲನ್... ಆರ್ಯನ ಮನಸ್ಸು ತುಂಬಾ ಮೃದು ಕಷ್ಟವೆಂದು ಬಂದವರಿಗೆ ಸಹಾಯ ಮಾಡದೆ ಇರುವುದಿಲ್ಲ... ಆದರೆ ಅವನ ಸ್ನೇಹಿತರ ಸಹವಾಸ ದೋಷದಿಂದ ಅವನ ಎಲ್ಲರ ಕಣ್ಣಿಗೂ ವಿಲನ್ ಹಾಗೆ ಕಾಣುತ್ತಿದ್ದ.....

ಆರ್ಯನ್ ಪ್ರತಿಷ್ಠಿತ ಕಾಲೇಜೊಂದರಲ್ಲಿ  ಡಿಗ್ರಿ ಮುಗಿಸಿಕೊಂಡು ಕೆಲಸವಿಲ್ಲದೆ ತನ್ನ ಸ್ನೇಹಿತರ ಜೊತೆ ಸೇರಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುತ್ತಾರೆ..... ಮನೆಯಲ್ಲಿ ತಂದೆ-ತಾಯಿಗಳ ಎಷ್ಟು ಹೇಳಿದರು ಅವರ ಮಾತನ್ನು ತಿರಸ್ಕರಿಸುತ್ತಾ ಹೋಗುತ್ತಾನೆ.....

  ----೦---------೦-------೦---------೦--------೦--------೦----

ಆರೋಹಿ ನೋಡಿದ ಮೊದಲನೇ ನೋಟದಲ್ಲಿ ಆರ್ಯನ್ ಹೃದಯ ತಾಳ ತಪ್ಪಿರುತ್ತದೆ... ಆರ್ಯನ್ ಎಷ್ಟು ಜನ ಹುಡುಗಿಯರನ್ನು ನೋಡಿದ್ದಾನೆ ಮತ್ತು ಎಷ್ಟು ಜನ ಹುಡುಗಿಯರು ಆತನ ಮುಂದೆ ತಮ್ಮ ಪ್ರೇಮವನ್ನು ಮಾಡಿಕೊಂಡಿದ್ದಾರೆ..... ಅವರೆಲ್ಲರೂ ಪ್ರೇಮವನ್ನು ಆರ್ಯನ್ ತಿರಸ್ಕರಿಸುತ್ತ ಬಂದಿರುತ್ತಾನೆ.....


ಇವತ್ತು ಮೊದಲನೇ ಸಾರಿ  ಆರ್ಯನಿಗೆ ಆರೋಹಿ ಮೇಲೆ ಪ್ರೀತಿಯಾಗಿರುತ್ತೆ ಆದರೆ ಆರ್ಯನಿಗೆ ಆರೋಹಿಯ  ಪೂರ್ವಪರ ಪರಿಚಯವುದು ಕೂಡ ಇರುವುದಿಲ್ಲ.....


ಆರ್ಯನ್ ಬೇಗ ಹೋಗಿ ಸ್ನಾನ ಮಾಡಿಕೊಂಡು ತಿಂಡಿ ತಿಂದು ರೆಡಿಯಾಗಿ ಕೆಲಸ ಹುಡುಕುವುದಕ್ಕೆ ತಯಾರಿ ನಡೆಸು ಇನ್ನು ಮುಂದೆಯಾದರೂ ನಿನ್ನ ಭವಿಷ್ಯವನ್ನು ಸರಿಯಾಗಿ  ರೂಪಿಸಿಕೋ ..... ಆ ನಿನ್ನ ಸ್ನೇಹಿತರ ಸಹವಾಸನ್ನು ಬಿಡು.... ಜೀವನದಲ್ಲಿ ಉದ್ದಾರ ಆಗುತ್ತಿಯಾ ಎಂದು ಆರ್ಯನ್ ತಂದೆ ಒಂದೇಸಮನೆ ಬಯ್ಯುತ್ತಿದ್ದರು....


ಆರ್ಯನ್: ಆಯ್ತು ಅಪ್ಪಾಜಿ ನೀವು ಹೇಳಿದ ಹಾಗೆ ಇನ್ನುಮುಂದೆ ನಾನು ಕೇಳುತ್ತೇನೆ..... ಎಂದು ಹೇಳಿ ಸ್ನಾನ ಮಾಡಲು ಹೊರಡುತ್ತಾರೆ....



ಆರ್ಯನ್ ತಂದೆ: ಮಗನ ಈ ಮಾತನ್ನು ಕೇಳಿ ಅವರ ತಂದೆಗೆ ಒಂದು ಕ್ಷಣ  shock ಆಗುತ್ತದೆ..



ಕಾರಣ ಎರಡು ವರ್ಷದಿಂದ ಅವನ ಮನೆಯಲ್ಲಿ ಯಾರಾದರೂ ಬುದ್ಧಿ ಹೇಳಿದರೆ ಸಿಟ್ಟುಮಾಡಿಕೊಂಡು ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ತೋರಿ ಮನೆಯಿಂದ ಹೊರಗಡೆ ಹೋಗುತ್ತಿದ್ದನು ಆದರೆ ಮೊದಲನೇ ಸಾರಿ ಏನು ಮಾತನಾಡದೆ ಅವರ ಮಾತಿಗೆ ಒಪ್ಪಿಗೆ ಸೂಚಿಸಿ ಹೋಗಿದ್ದ ಮಗನನ್ನು ನೋಡಿ ಅವರಿಗೆ ಒಂದು ಕಡೆ ಸಂತೋಷ.... ಇನ್ನೊಂದು ಕಡೆ ಇವನೇ ನನ್ನ ಮಗ ಎಂಬ ಅನುಮಾನ ಶುರುವಾಗುತ್ತದೆ



ಆರ್ಯನ್ ಹೇಗಾದರೂ ಮಾಡಿ ಆ ಹುಡುಗಿಯನ್ನು ಹುಡುಗಿ ತನ್ನ ಪ್ರೇಮ ನಿವೇದನೆ ಹೇಳಿ ಅವಳನ್ನು ಒಪ್ಪಿಸಿ  ಮದುವೆ ಮಾಡಿಕೊಳ್ಳಬೇಕು ಎಂಬ ನಿರ್ಧಾರವನ್ನು ಮಾಡುತ್ತಾನೆ.....




ಆರ್ಯನ ಸ್ನಾನ ಮಾಡಿ ದೇವರಿಗೆ ಕೈಮುಗಿದು ತಿಂಡಿ ತಿಂದು ಮನೆಯಿಂದ ಹೊರಡಲು ಸಿದ್ಧವಾಗುತ್ತದೆ... ಅವನ ಈ ವರ್ತನೆ ನೋಡಿದ ಅವನ ತಂದೆ ತಾಯಿಗಳು ತುಂಬಾ ಸಂತೋಷವಾಗುತ್ತದ....(ಮನಸಲ್ಲಿ ನನ್ನ ಮಗ ಯಾವಾಗಲೂ ಹೀಗೇ ಇರಬೇಕೆಂದು ಆ ದೇವರ ಮುಂದೆ ತಂದೆ-ತಾಯಿಗಳು ತಮ್ಮ ಬೇಡಿಕೆ ಇಟ್ಟರು)



ಆರ್ಯನ್ ಮನೆ ಹೊರಗಡೆ ಬಂದು ತನ್ನ ಬೈಕು ತೆಗೆದುಕೊಂಡು ಆ ಹುಡುಗಿಯನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ.....



ಮೊದಲನೇ ಸಾರಿ ಹುಡುಗಿ ನೋಡಿದ ಮನೆಯ ಮುಂದೆ ಹೋಗಿ  ಕುಳಿತುಕೊಳ್ಳುತ್ತಾನೆ...ಆದರೆ ಸಾಯಂಕಾಲದವರೆಗೂ ಕುಳಿತುಕೊಂಡರು ಆ ಹುಡುಗಿಯ ಸುಳಿವು ಸಿಗುವುದಿಲ್ಲ ಮನೆಗೆ ಬೀಗ ಹಾಕಿರುತ್ತದೆ....



ಹೀಗೆ ಒಂದು ವಾರ ಸತತವಾಗಿಬಂದುಕುಳಿತುಕೊಳ್ಳುತ್ತಾನೆ ಆದರೆ ಏನೂ ಪ್ರಯೋಜನವಾಗುವುದಿಲ್ಲ....



ಆ ಮನೆಯೇ ಮುಂದುಗಡೆ ಇರುವ ಮನೆಯ ವ್ಯಕ್ತಿ ಆರ್ಯನ್ ದಿನಲೂ ಆ ಮನೆಯ ಮುಂದೆ ಬಂದು ಕುಳಿತುಕೊಳ್ಳುವುದು ನೋಡಿ ಅವನ ಬಗ್ಗೆ ಕನಿಕರ ಉಂಟಾಗಿ ಆರ್ಯನ್ ಹತ್ತಿರ ಬಂದು ಸಮಾಚಾರವನ್ನು ವಿಚಾರಿಸುತ್ತಾನೆ...



ವ್ಯಕ್ತಿ: ಹುಡುಗ ನೀನು ಏಕೆ ಇಲ್ಲಿ ಬಂದು ದಿನಾಲು ಮುಂಜಾನೆಯಿಂದ ಸಂಜೆವರೆಗೂ ಯಾರಿಗಾಗಿ ಕಾಯುವೆ ??



ಆರ್ಯನ್: ಸರ್ ಈ ಮನೆಯ ಇರುವವರು ನನಗೆ ತುಂಬಾ ಬೇಕಾದವರು ಅದಕ್ಕಾಗಿ ನಾನು ಅವರಿಗಾಗಿ ಇಲ್ಲಿ ದಿನಾಲು ಕಾಯುತ್ತೇನೆ ಆದರೂ ಒಂದು ವಾರದಿಂದ ಅವರ ಸುಳಿವು ನನಗೆ ಸಿಕ್ಕಿಲ್ಲ...



ವ್ಯಕ್ತಿ: ಈ ಮನೆಯಲ್ಲಿ ಸಂಗೀತ ಗುರುಗಳು  ಇದ್ದರು  ಅವರು ನಿಂಗೇನಾದ್ರೂ ಬೇಕಾಗಿತ್ತು??



ಆರ್ಯನ್: ಹೌದು ಸರ್ ನನಗೆ  ಗುರುಗಳೇ ಬೇಕಾಗಿತ್ತು..



ವ್ಯಕ್ತಿ :ಆ ಗುರುಗಳ ತಂದೆಗೆ  ಅನಾರೋಗ್ಯದ ಕಾರಣದಿಂದಾಗಿ ಅವರು ಸ್ವಲ್ಪ ದಿನಗಳ ಮಟ್ಟಿಗೆ ಊರಿಗೆ ಹೋಗಿದ್ದಾರೆ..



ಆರ್ಯನ್: ಹೌದಾ ಸರಿ ....ಧನ್ಯವಾದಗಳು ನಿಮ್ಮ ಈ ಮಾಹಿತಿಗಾಗಿ



ಇದನ್ನು ಕೇಳಿ  ಆರ್ಯನ್ ಸಪ್ಪೆ  ಮುಖವನ್ನು ಹಾಕಿಕೊಂಡು ಆ ಮನೆಯಿಂದ ತನ್ನ ಮನೆಗೆ ಪ್ರಯಾಣ ಬೆಳೆಸುತ್ತಾನೆ ಮನೆಗೆ ಬಂದರೆ ಊಟ ಮಾಡುವುದಿಲ್ಲ ನಿದ್ದೆ ಮಾಡುವುದಿಲ್ಲ ಯಾವಾಗಲೂ ಏನೋ ಒಂದು ಕಳೆದುಕೊಂಡ ಹಾಗೆ ಇರುತ್ತಾನೆ... ದೇವರಲ್ಲಿ ಆ ಹುಡುಗಿ ತನಗೆ ಬೇಗ ಸಿಗಲಿ ಎಂದು  ಪ್ರಾರ್ಥನೆ ಏನು ಮಾಡುತ್ತಾನೆ...



ಇವನ ಈ ವರ್ತನೆ ಕಂಡು ಅವನ ತಂದೆ ತಾಯಿಗಳಿಗೆ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆ ಆರ್ಯನ್  ಏನಾದರೂ ಕೇಳಿದರೆ ಅವನು ಏನು ಬಾಯಿಬಿಡುತ್ತಿಲ್ಲ...



ಆರ್ಯನ್ ವರ್ತನೆ 3 ತಿಂಗಳ ಕಾಲ ಹೀಗೆ ಮುಂದುವರೆಯುತ್ತದೆ....



ಇವನ ಈ ಪ್ರಾರ್ಥನೆಯ ದೇವರ ಮೆಚ್ಚಿ  ಆರ್ಯನಿಗೆ  ಅಸ್ತು ಎಂಬಂತೆ ಒಂದು ದಿನ ಇವನ ಮನೆ ಸಮೀಪ ಆ ಹುಡುಗಿ  ಪ್ರತ್ಯಕ್ಷರಾಗುತ್ತಾಳೆ...



ಆ ಹುಡುಗಿನ ನೋಡಿದ ಕ್ಷಣ ಆರ್ಯನಿಗೆ ಜೀವನದಲ್ಲಿ ಅಮೂಲ್ಯವಾದ ವಸ್ತು ಸಿಕ್ಕಂತೆ ಖುಷಿಯಾಗುತ್ತದೆ.....



ಆರ್ಯನ್ ತಡಮಾಡದೆ ಅವಳನ್ನು ಹಿಂಬಾಲಿಸಿಕೊಂಡು ಹೋಗುತ್ತಾನೆ...  ಹುಡುಗಿಯ ಹೆಸರು ಆರೋಹಿ ಎಂದು ಅವಳ ಸ್ನೇಹಿತೆ ಕೂಗುವುದನ್ನು ಕೇಳಿಸಿಕೊಳ್ಳುತ್ತಾನೆ...


(ಮನಸ್ಸಿನಲ್ಲಿ ಆರೋಹಿ ಆರ್ಯನ ಸೂಪರ್ ಜೋಡಿ ಎಂದು ತನ್ನಲ್ಲೆ ಹೇಳಿಕೊಳ್ಳುತ್ತಾನೆ)


ಆರೋಹಿ ಕಲಿಯುತ್ತಿರುವ ಕಾಲೇಜ್ ಮತ್ತು ಮನೆಯ ದಾರಿಯನ್ನು ಕಂಡುಹಿಡಿದು ಅವಳನ್ನು ದಿನ ಹಿಂಬಾಲಿಸಿಕೊಂಡು ಹೋಗುವುದೇ ಆರ್ಯನ ದಿನನಿತ್ಯದ ಕಾರ್ಯವಾಗುತ್ತದೆ....



ಆರೋಹಿ: ಹೇ ಸಂಗೀತ ಒಂದು ವಾರ ಆಯ್ತು ಕಣೆ ನಂಗ್ಯಾರೂ ಫಾಲೋ ಮಾಡಿಕೊಂಡು ಬರ್ತಾ ಇದ್ದಾರೆ.


ಸಂಗೀತ: ಹೌದು ಕಣೇ...ಆರೋಹಿ ನಾನು ದಿನಲೂ  ಗಮಸುತ್ತಿದ್ದೇನೆ ನಮಗ್ಯಾರು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ...


ಆರೋಹಿ: ಆ ವ್ಯಕ್ತಿ ಯಾರು ಅಂತ ನಿನಗೇನಾದ್ರೂ ಗೊತ್ತಾ??


ಸಂಗೀತ: ಹೌದು ಕಣೆ ಈ ವ್ಯಕ್ತಿ ನಾನು ಎಲ್ಲೋ ನೋಡಿದ ಹಾಗೆ ಅನಿಸುತ್ತಿದೆ ಆದರೆ ಎಲ್ಲಿ ಅಂತ ನೆನಪು ಬರುತ್ತಿಲ್ಲ.

ಆರೋಹಿ: ಹೌದು ಕಣೇ ನನಗೂ ಹಾಗೆ ಅನಿಸ್ತಿದೆ ತುಂಬಾ ಹತ್ತಿರದಿಂದ ನೋಡಿದ್ದೇನೆ...


ಸಂಗೀತ: ಈ ಆರೋಹಿ ನೆನಪು ಬಂತು ಕಣೆ ನಂಗೆ...

ಆರೋಹಿ: ಹೇಳು ಮತ್ತೆ.


ಸಂಗೀತ: ಅವತ್ತು ಗುರುಗಳ ಮನೆ ಮುಂದೆ ಜಗಳ ಮಾಡಿದ್ದೆ ನೆನಪಿದೆಯಾ ನಿಂಗೆ ಅದು ಈ ವ್ಯಕ್ತಿಯ ಜೊತೆ...

ಆರೋಹಿ: ಹಾ ಕಣ್ಣೇ ನೆನಪಾಯಿತು... ಅವತ್ತು ನಿನ್ನನ್ನ ಅಲ್ಲಿಂದ ಕರೆದುಕೊಂಡು ಹೋದಮೇಲೆ ಇವನ ಬಗ್ಗೆ ನಾನು ನನ್ನ ಸ್ನೇಹಿತೆಯ ಮುಂದೆ ವಿಚಾರಿಸಿದ  ಮೇಲೆ ನನಗೆ ತಿಳಿದ ವಿಷಯವೆಂದರೆ ಈ ವ್ಯಕ್ತಿ ಕೆಲಸಕಾರ್ಯ ಇಲ್ಲದೆ ರೋಡಲ್ಲಿ ಸಿಗುವ ಹುಡುಗಿಯರನ್ನು ಚುಡಾಯಿಸುವ ಗ್ಯಾಂಗಿನ ಹುಡುಗ...


ಸಂಗೀತ: ಹೋಗ್ಲಿ ಬಿಡು ನಮಗ್ಯಾಕೆ ಬೇಕು...ನಮ್ಮ ವಿಷಯಕ್ಕೆ ಬಂದರೆ ಮಾತ್ರ ಅವನ ಗ್ರಹಚಾರವನ್ನು  ಬಿದಿಸೋಣ....

ಆರೋಹಿ: ಹೌದು ಹಾಗೆ ಮಾಡೋಣ...

(ಪಾಪ ಇವರಿಬ್ಬರ ಮಾತಿನ ಅರಿವಿಲ್ಲದೆ ನಮ್ಮ ಆರ್ಯನ್... ಆರೋಹಿ ಮುಂದೆ ತನ್ನ ಪ್ರೇಮ ನಿವೇದನೆಯನ್ನು ಹೇಗೆ ಮಾಡಬೇಕೆಂಬ ಆಲೋಚನೆಯಲ್ಲಿ ಮುಳುಗಿರುತ್ತಾನೆ)

ಹೀಗೆ ಒಂದು ದಿನ ಮುಂಜಾನೆ ಆರ್ಯನ್ ನೀಟಾಗಿ ಡ್ರೆಸ್ ಮಾಡಿಕೊಂಡು...  ಗುಲಾಬಿ ಹೂವನ್ನು ಕರೆದಿಮಾಡಿ... ಮತ್ತು ಬಂಗಾರದ ಉಂಗುರವನ್ನು ಅವಳಿಗಾಗಿ  ತೆಗೆದುಕೊಂಡು..... ಅವಳ ಮುಂದೆ ತನ್ನ ಪ್ರೇಮ ನಿವೇದನೆ ಹೇಳಬೇಕೆಂದು ಅವಳು ಬರುವ ದಾರಿಯಲ್ಲಿ ಅವಳಿಗೋಸ್ಕರ ಕಾಯುತ್ತಾ ನಿಂತಿರುತ್ತಾನೆ....

ಆರ್ಯನ: ಆರೋಹಿ  ನಿಲ್ಲು ಇವತ್ತು ನಿನ್ ಜೊತೆ ಮಾತಾಡಬೇಕು..

ಆರೋಹಿ: ನೀವು ಯಾರು ಅಂತ ನನಗೆ ಗೊತ್ತಿಲ್ಲ... ನನಗೆ ನಿಮ್ಮ ಜೊತೆ ಮಾತನಾಡಲು ಸಮಯವಿಲ್ಲ...

ಆರ್ಯನ್: ನನ್ನ ಹೆಸರು ಆರ್ಯನ್ ನಿಮಗೆ ತುಂಬಾ ದಿನಗಳಿಂದ ಒಂದು ವಿಷಯ ಹೇಳಬೇಕೆಂದು ಕಾಯುತ್ತಿರುವೆನು.... ನನ್ನ ಮೇಲೆ ನಂಬಿಕೆ ಇಡಿ... ನಿಮಗೆ ನಾನು ತೊಂದರೆ ಕೊಡುವುದಿಲ್ಲ ....ನಾನು ನಿಮಗೆ ಒಂದು ವಿಷಯವನ್ನು ಹೇಳಿ ಹೋಗುತ್ತೇನೆ...

ಆರೋಹಿ: ಆಯ್ತು ಆರ್ಯನ್ ಏನು ಹೇಳಬೇಕು ಅಂತ ಇದ್ದೀರಾ ಹೇಳಿ ಹೋಗಿ...

ಆರ್ಯನ್: ಇಲ್ಲಿ ಬೇಡ ಸ್ವಲ್ಪ ಸಮಯ ಪಾರ್ಕ್ಕಗೆ ಹೋಗೋಣ..

ಆರೋಹಿ:  ಆಯ್ತು ಆದರೆ ನಾನು ಇರೋದು ಮಾತ್ರ 10 ನಿಮಿಷಗಳು

ಆರ್ಯನ್: ಆಯ್ತು ಸರಿ ಬನ್ನಿ ಹೋಗೋಣ...

ಆರ್ಯನ್ ಮತ್ತು ಆರೋಹಿ ಇಬ್ಬರು  ಸೇರಿ ಪಾರ್ಕ್ ಹೋಗುತ್ತಾರೆ... ಅಲ್ಲಿ ಸ್ವಲ್ಪ ಸಮಯ ಮೌನದಿಂದ ಕೂಡಿರುತ್ತದೆ.

ಆರೋಹಿ: ಏನು ಮಾತನಾಡಬೇಕು ಅಂತ ಹೇಳಿ ಕರೆದುಕೊಂಡು ಬಂದು ನೀವು ಹೀಗೆ ಮೌನವಾಗಿದ್ದರೆ ನನಗೇನು ಅರ್ಥವಾಗಲ್ಲ

ಆರ್ಯನ :ಆರೋಹಿ ನನ್ನ ಮನಸಿನ ಭಾವನೆ ನಿಮ್ಮ ಮುಂದೆ ಹೇಗೆ ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ

ಆರೋಹಿ: ಆಯ್ತು....ನಾನು ಹೋಗುತ್ತೇನೆ ನಿಮಗೆ ಹೇಳಬೇಕೆಂದು ಅನಿಸಿದಾಗ ಬಂದು ಹೇಳಿ

ಆರ್ಯನ್: ಆರೋಹಿ ಸ್ವಲ್ಪ ನಿಲ್ಲು ನಾನಿವಾಗ ಹೇಳ್ತೀನಿ...

ಆರೋಹಿ ಮುಂದೆ ಕುಳಿತುಕೊಂಡು ಆರೋಹಿ ನಿನ್ನನ್ನು ನೋಡಿದ ಮೊದಲನೇ ಕ್ಷಣದಲ್ಲಿ ನನ್ನ ಹೃದಯದ ತಾಳ ತಪ್ಪಿ ಹೋಗಿದೆ..,.. ನಿನ್ನ ಹಾಡು ಕೇಳಿದ ಕ್ಷಣ ನೀನು ನನ್ನನ್ನು ಕರೆದ ಹಾಗೆ ನಿನ್ನ ಕಡೆ ನನಗೆ ತಿಳಿಯದೆ ನಿನ್ನ ಕಡೆ ಹೆಜ್ಜೆ ಹಾಕುತ್ತಾ ಬಂದೆ... ನಿನ್ನ ಮೇಲೆ ಹೇಗೆ ಪ್ರೀತಿಯಾಯಿತು ಯಾಕೆ ಪ್ರೀತಿಯಾಯಿತು ಎಂದು ನನಗೆ ತಿಳಿದಿಲ್ಲ.. ಆದರೆ ನನ್ನ ಕೊನೆ ಉಸಿರು ಇರುವ ತನಕ ನಿನ್ನನ್ನು ಕಣ್ಣಲಿ ಇಟ್ಟುಕೊಂಡು ಸಾಯುವವರೆಗೂ ನಿನ್ನನ್ನು ಪ್ರೀತಿ ಮಾಡುತ್ತೇನೆ...... ನೀನು ನನ್ನ ಪ್ರೀತಿನ ಒಪ್ಪಿಕೋ...

.

ಆರೋಹಿ:  ಆರ್ಯನ್ ಪ್ರೇಮ ನಿವೇದನೆಯನ್ನು ಮಾಡಿಕೊಂಡು ರೀತಿಗೆ ಆರೋಹಿ ಮನಸ್ಸು ಅವಳಿಗೆ ತಿಳಿಯದ ಹಾಗೆ ಮನಸ್ಸು ಆರ್ಯನ್ ಕಡೆ ವಾಲಿರುತ್ತದೆ.... ಆದರೂ ಕೂಡ ಅವಳು ಅವನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ....


ಆರ್ಯನ್:  ನನ್ನ ಪ್ರೀತಿ ತಿರಸ್ಕರಿಸು ಕಾರಣ??

ಆರೋಹಿ: ಆರ್ಯನ್ ನಿನ್ನ ಜೀವನದಲ್ಲಿ ಒಂದು ಸರಿಯಾದ ಗುರಿ ಇಲ್ಲ..... ನಿನ್ನ ಜೀವನ ನಡೆಸಲು ನೀನು ನಿನ್ನ ತಂದೆ ತಾಯಿಯ ಮೇಲೆ ಅವಲಂಬಿತವಾಗಿರುವೆ....ನೀನು ಹೇಗೆ ನನ್ನನ್ನು
ಸಾಕುತ್ತಿಯಾ???

ಆರ್ಯನ್: ಇಷ್ಟೇ ತಾನೇ ನಿನ್ನನ್ನು ನನ್ನ ಕೊನೆ ಉಸಿರು ಇರುವ ತನಕ ದುಡಿದು ಸಾಕುತ್ತೇನೆ.. ಈಗಲಾದರೂ ನನ್ನ ಪ್ರೀತಿ  ಒಪ್ಪಿಕೊಳ್ಳುವೆ??

ಆರೋಹಿ: ಮೊದಲು ನೀನು ನಿನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಬಾ...ಆಮೇಲೆ ನಿನ್ನ ಪ್ರೀತಿಯನ್ನು ಒಪ್ಪಿಕೊಳ್ಳುವ ನಿರ್ಧಾರ  ಮಾಡೋಣ....

ಆರ್ಯನ್: ಆರೋಹಿ ಹೇಳಿದ ಮಾತನ್ನು ಕೇಳಿ ಆದಿತ್ಯನಿಗೆ ಒಂದು ಕ್ಷಣ ಆಘಾತ ಆಗುತ್ತದೆ.... ತುಂಬಾ ಸಿಟ್ಟು ಬರುತ್ತದೆ ....ಮನಸ್ಸಿನಲ್ಲಿ ತನ್ನ ಸಿಟ್ಟನ್ನು ಕಂಟ್ರೋಲ್ ಮಾಡುತ್ತಾ ಅವಳಿಗೆ ನೀನು ಹೇಳಿದ ಹಾಗೆ ನಾನು ನನ್ನ ಜೀವನದಲ್ಲಿ ಸಾಧನೆ ಮಾಡಿ ಬಂದೇ ಬರುತ್ತೇನೆ ಆಗ ನೀನು ನನ್ನ ಪ್ರೀತಿಯನ್ನು ಹೇಗೆ ನಿರಾಕರಿಸುತ್ತ ಅಂತ ನಾನು ನೋಡುತ್ತೇನೆ.....

ಆರೋಹಿ: ಮೊದಲು ಸಾಧನೆ ಮಾಡಿ ತೋರಿಸು....
ಆಗ ನನ್ನ ಮುಂದೆ ನಿಂತು ಇಷ್ಟೇ ಧೈರ್ಯದಿಂದ ನಿನ್ನ ಪ್ರೇಮ ನಿವೇದನೆಯನ್ನುಮಾಡಿಕೋ ನಾನು ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ.....

ಆರ್ಯನ್: ಅಲ್ಲಿವರೆಗೂ ನೀನು ನನಗಾಗಿ ಕಾಯುತ್ತಿಯಾ??

ಆರೋಹಿ: ನೀನು ಹೇಳಿದ ಹಾಗೆ ನನ್ನ ಕೊನೆ ಉಸಿರು ಇರುವವರೆಗೂ ನಿನಗಾಗಿ ಕಾಯುತ್ತೇನೆ.....

ಆರ್ಯನ್: ಆಯ್ತು ಆರೋಹಿ ನಿನಗೆ ಮಾತು ಕೊಟ್ಟಿರುವ ಹಾಗೆ ನಾನು ನನ್ನ ಜೀವನದಲ್ಲಿ ಸಾಧನೆ ಮಾಡಿ ನಿನ್ನ ಮುಂದೆ ಬಂದು ನಿಲ್ಲುತ್ತೇನೆ....

ಅಲ್ಲಿಂದ ಆರ್ಯನ ಮತ್ತು ಆರೋಹಿ ಇಬ್ಬರ ಕೂಡ ತಮ್ಮ ತಮ್ಮ ಮನೆ ಕಡೆ ಪ್ರಯಾಣ ಬೆಳೆಸುತ್ತಾರೆ.....


ಮುಂದುವರೆಯುವುದು...


ವೀರಯೋಧನ ಪ್ರೇಮ ಕಥೆ ಮತ್ತು ದೇಶ ಸೇವೆಯ ಕುರಿತು ನನ್ನ ಕಲ್ಪನೆಯಲ್ಲಿ ಮೂಡಿ ಬಂದಿರುವ ಸಣ್ಣಕಥೆ ನಿಮ್ಮೆಲ್ಲರ ಮುಂದೆ ಬರೆಯುತ್ತಿದ್ದೇನೆ ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ  ನನ್ನ ಜೊತೆ ಹಂಚಿಕೊಳ್ಳಿ ತಪ್ಪಿದಲ್ಲಿ ಕ್ಷಮಿಸಿ...


ದಯವಿಟ್ಟು ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ...

  🙏🙏ಧನ್ಯವಾದಗಳು🙏🙏