...

1 views

ಗುರು ಕಾಣಿಕೆಯಾಗಿ ನೀಡಿದ್ದು ಎನಗೆ ಅತೀವ ಸಂತಸ ತಂದಿದೆ.
ಪೂಜ್ಯ ಗುರು ಶ್ರೀಯುತ ಡಾ!! ಈರಣ್ಣ ಇಂಜಗನೇರಿ ಕರ್ನಾಟಕ ಯುನಿವರ್ಸಿಟಿ ಧಾರವಾಡ, ಬಸವ ಅಧ್ಯಯನ ಪೀಠ ಕನ್ನಡ ಪ್ರೋಫೇಸರ್ ಇವರಿಗೆ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ||

ಮಸ್ತಕದಿ = ತಲೆಯಲ್ಲಿ , ಚಿತ್ತದೊಳು = ಅಂತರಂಗದಲ್ಲಿ, ತರು = ಗಿಡ,

ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯಮೇಲೆ ತಂದಿಟ್ಟುಕೊಂಡಂತ ಕಿರೀಟದಲ್ಲಿನ ಮಣಿಯಂತೆ. ಆದರೆ ನಿಮ್ಮ ಅನುಭವಗಳನ್ನು ವಿಚಾರದ ಹೊರೆಗೆ ಹಂಚಿ ನಮ್ಮ ಚಿತ್ತದಲ್ಲಿ ನಮಗೆ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ ” ಪುಷ್ಪದಂತೆ” ಎನ್ನುತಾರೆ, ಮಾನ್ಯ ಗುಂಡಪ್ಪನವರು.

ಪುಸ್ತಕಗಳನ್ನು ಓದಿ, ಕಂಠಪಾಠ ಮಾಡಿ ಅಥವಾ ನೆನಪಿನಲ್ಲಿಟ್ಟುಕೊಂಡು, ಸಮಯ ಸಂಧರ್ಭ ಬಂದಾಗ ಅದನ್ನು ಉಪಯೋಗಿಸುವುದು ಜಾಣತನ. ಆದರೆ ಅದು ಜ್ಞಾನವಲ್ಲ. ಅದು ಕೇವಲ ತೋರಿಕೆಗೆ ಅಥವಾ ಹೊಟ್ಟೆಪಾಡಿಗೆ, ಹೇಗೆ ರಾಜ ತನ್ನ ರಾಜತನವನ್ನು ಬಿಂಬಿಸಲು ಒಂದು ಕಿರೀಟವನ್ನು ತಂದು ಇಟ್ಟುಕೊಳ್ಳುತ್ತಾನೆಯೋ ಹಾಗೆ. ಅದು ನಮ್ಮ ಅರಿವಾಗಲು ಸಾಧ್ಯವಿಲ್ಲ. ಅದು ಅವಿದ್ಯೆ. ಕೇವಲ ಕಲಿತ ವಿದ್ಯೆ. ನಮ್ಮಲ್ಲಿ ಒಂದು ಗಾದೆ ಇದೆ. ” ಕಟ್ಟಿ ಕೊಟ್ಟ ಬುತ್ತಿ , ಕಲಿಸಿ ಕೊಟ್ಟ ಬುದ್ದಿ ಎಷ್ಟು ದಿವಸ” ಅಂತ. ಹಾಗಾಗಿ ತಂದಿಟ್ಟುಕೊಂಡ ಅರಿವು ನಮ್ಮದಾಗಲು ಸಾಧ್ಯವಿಲ್ಲ ಅಥವಾ ಸದಾ ನಮ್ಮೊಡನಿರಲು ಸಾಧ್ಯವಿಲ್ಲ. ಬದಲಾಗಬಹುದು.ಶಾಸ್ತ್ರಗಳನ್ನು ಓದಿ ಪಾಂಡಿತ್ಯವನ್ನು ಪಡೆದು ಕೇವಲ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೂ, ಅನುಭವಿಸಿ ಮಥಿಸಿ ಅಂತರಂಗದಲ್ಲಿ ಪಡೆದುಕೊಂಡ ಜ್ಞಾನಕ್ಕೂ ಬಹಳ ಅಂತರವುಂಟು ಎನ್ನವುದು ಈ ಕಗ್ಗದ ಹೂರಣ.
ನಿಮ್ಮ ಈ ಪುಸ್ತಕದ ಗುರು ಕಾಣಿಕೆ ನನಗೆ ತುಂಬಾ ಇಷ್ಟವಾಯಿತು. ನಿಮ್ಮ ಈ ಗುರುವಿನ ಕಾಣಿಕೆಗೆ ಸದಾ ಆಭಾರಿಯಾಗಿರುತ್ತೇನೆ.

ನಿಮ್ಮ "ಫ್ರೀಡಮ್ ಕಾದಂಬರಿ" ದೂರದ ಹೈದರಾಬಾದನಲ್ಲಿರುವ ನನ್ನ ಕೈ ಸೇರಿರುವುದು ನನ್ನ ಜನ್ಮ ಜನ್ಮಾಂತರದ ಪುಣ್ಯ ಅಂತ ಭಾವಿಸುತ್ತೇನೆ.

ನಿಮ್ಮ ಅತ್ಯದ್ಬುತ ಬರವಣಿಗೆಗೆ ನಾನು ಖಂಡಿತಾ ನನ್ನ ಅನಿಸಿಕೆ ತಿಳಿಸುವೆ.

-ರಾಜೇಂದ್ರ ಈಳಗೇರ.

© All Rights Reserved