...

2 views

: ಚಳಿಗಾಲ ಶುರುವಾಗ್ತಿದೆ, ನಿಮ್ಮ ಚರ್ಮ ಆರೋಗ್ಯದಿಂದಿರಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ!
ಚಳಿಗಾಲದಲ್ಲಿ ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ ಬಿರುಕು ಬಿಡುವುದು, ತುಟಿ ಒಡೆಯುವುದು, ಪಾದ ಬಿರುಕು ಬಿಡುವಂತಹ ಸಮಸ್ಯೆಗಳು ಎದುರಾಗುತ್ತದೆ.
ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯದ ಜೊತೆಗೆ ತ್ವಚೆಯ ಸಂಬಂಧಿ ಹಲವು ಸಮಸ್ಯೆಗಳು ಜನರನ್ನು ಕಾಡಲು ಆರಂಭಿಸಿದೆ. ತ್ವಚೆಯಲ್ಲಿ ಶುಷ್ಕತೆ, ಚರ್ಮ ಕಪ್ಪಾಗುವುದು ಮತ್ತು ತ್ವಚೆ ಬಿರುಕು ಬಿಡುವುದು, ತುಟಿ ಒಡೆಯುವುದು, ಪಾದ ಬಿರುಕು ಬಿಡುವಂತಹ ಸಮಸ್ಯೆಗಳು ಎದುರಾಗುತ್ತದೆ.
ಹೀಗಿರುವಾಗ ಈ ಸಮಯದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಹಾಗಾಗಿ ನಾವಿಂದು ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಏನು ಮಾಡಬೇಕೆಂದು ತಿಳಿಯೋಣ ಬನ್ನಿ.

ಈ ಸಮಸ್ಯೆಯನ್ನು ಹೋಗಲಾಡಿಸಲು ಜನರು ಲೋಷನ್, ಕ್ರೀಮ್, ಮಾಯಿಶ್ಚರೈಸರ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ಚರ್ಮದ ಆರೈಕೆಗಾಗಿ ಗ್ಲಿಸರಿನ್ ಅನ್ನು ಸಹ ಬಳಸಬಹುದು. ಇದು ಚರ್ಮದ ಶುಷ್ಕತೆಯನ್ನು ತಡೆಯುತ್ತದೆ.

ಗ್ಲಿಸರಿನ್ ಮತ್ತು ಅಲೋವೆರಾ: ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಮೃದುವಾಗಿಡಲು ನೀವು ಅಲೋವೆರಾದೊಂದಿಗೆ ಗ್ಲಿಸರಿನ್ ಅನ್ನು ಬೆರೆಸಬಹುದು. ಇದನ್ನು ಬಳಸಲು, ಗ್ಲಿಸರಿನ್ನಲ್ಲಿ ಒಂದು ಚಮಚ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ಇದಾದ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಆಗ ನಿಮ್ಮ ಮುಖ ಹೊಳೆಯುತ್ತದೆ.

ಗ್ಲಿಸರಿನ್ ಮತ್ತು ಜೇನು: ಚಳಿಗಾಲದಲ್ಲಿ ಚರ್ಮವನ್ನು ತೇವಗೊಳಿಸಲು ಸಮಾನ ಪ್ರಮಾಣದಲ್ಲಿ ಗ್ಲಿಸರಿನ್ ಮತ್ತು ಜೇನುತುಪ್ಪವನ್ನು ಬೆರೆಸಿ ತಯಾರಿಸಿಟ್ಟುಕೊಳ್ಳಿ. ಇದಾದ ನಂತರ, ನಿಮ್ಮ ಮುಖದ ಮೇಲೆ ಇದನ್ನು ಹಚ್ಚಿ. 20 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

ಗ್ಲಿಸರಿನ್ ಮತ್ತು ರೋಸ್ ವಾಟರ್: ಒಣ ತ್ವಚೆಯನ್ನು ಹೋಗಲಾಡಿಸಲು ನೀವು ಗ್ಲಿಸರಿನ್ ಮತ್ತು ರೋಸ್ ವಾಟರ್ ಟ್ರೈ ಮಾಡಬಹುದು. ಇದಕ್ಕಾಗಿ ಎರಡೂ ಪದಾರ್ಥಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ.
ನಂತರ ಬೆಚ್ಚಗಿನ ನೀರಿನಿಂದ ಮುಖ ಅಥವಾ ಇತರ ಚರ್ಮದ ಪ್ರದೇಶಗಳನ್ನು ತೊಳೆದು ಈ ಪೇಸ್ಟ್ ಹಚ್ಚಿ. ಆಗ ನಿಮ್ಮ ಚರ್ಮದ ಮೇಲೆ ಹೊಳಪು ಸ್ಪಷ್ಟವಾಗಿ ಗೋಚರಿಸುತ್ತದೆ.