...

3 views

ಒಂದು ಮುಗ್ಧತೆ ಇನ್ನೊಂದು ಕಪಟ , ಒಂದು ಪ್ರೀತಿ ಇನ್ನೊಂದು .........!
ಆರಾಧ್ಯ ಮತ್ತು ಪ್ರವೀಣ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆದರೆ ಪ್ರವೀಣನು ಆರಾಧಳನ್ನು ಪ್ರೀತಿಸುತ್ತಿದ್ದಾಗಲೆ ಬೇರೆ ಹುಡುಗಿಗೆ ನೀ ನನ್ನ ಪ್ರೀತಿಸು ಎಂದು ಓತ್ತಾಯ ಮಾಡುತ್ತಿರುತ್ತಾನೆ. ಇದನ್ನು ಎನು ತಿಳಿಯದ ಆರಾಧ್ಯ ಅವಳಿಗೆ ತಿಳಿಯದ ಹಾಗೆ ಪ್ರವೀಣನ ಮೇಲೆ ಪ್ರೀತಿ ಬೇಳೆಯುತ್ತಾ ಹೋಗುತ್ತದೆ. ಪ್ರವೀಣ ಒತ್ತಾಯಿಸಿದ ಹುಡುಗಿ ಐಶ್ವರ್ಯ ಮತ್ತು ಆರಾಧ್ಯ ಒಳ್ಳೆ ಸ್ನೇಹಿತೆಯರಾಗಿರುತ್ತಾರೆ. ಆದ್ದರಿಂದ ಪ್ರವೀಣ ಆರಾಧನನ್ನು ಪ್ರೀತಿಸುತ್ತಿದ್ದ ವಿಷಯ ಅವಳಿಗೆ ಗೊತ್ತಿರುತ್ತೆ. ಒಂದು ದಿನ ಐಶ್ವರ್ಯ ಆರಾಧ್ಯಾಳಿಗೆ ಕರೆ ಮಾಡಿ ಅವನು ಪೀತಿ ಮಾಡುವುದಾಗಿ ಒತ್ತಾಯ ಮಾಡುತ್ತಿದ್ದಾನೆ ಎ೦ದು ಆರಾಧ್ಯಳಿಗೆ ಹೇಳುತ್ತಾಳೆ ಇದನ್ನು ಕೇಳಿದ ಆರಾಧಳಿಗೆ ಸಿಟ್ಟು ಬಂದು ಪ್ರವೀಣಗೆ ಬೈಯುತ್ತಾಳೆ. ಇದರಿಂದ ಜಗಳವಾಗಿ ಐಶ್ವರ್ಯ ಪ್ರವೀಣ ಮನೆಯವರಿಗೆ ಇದನ್ನು ಹೇಳುತ್ತಾಳೆ . ಇದಕ್ಕೆ ಹೇದರಿದ ಪ್ರವೀಣ ಆರಾಧ್ಯಳ ಬಳಿ ಬಂದು ಅವಳು ನಮ್ಮ ಅಪ್ಪನಿಗೆ ದೂರು ಹೇಳಿದ್ದಾಳೆ ಅದಕ್ಕೆ ನಮ್ಮ ಅಪ್ಪ ಅಮ್ಮ ತುಂಬಾ ಚಿಂತಿತರಾಗಿದ್ದರೆ ಎ೦ದು ಹೇಳುತ್ತಾನೆ. ಅದಕ್ಕೆ ಆರಾಧ್ಯ ಪ್ರವೀಣ ಅಪ್ಪ ಸುರೇಶ ಅವರ ಮುಂದೆ ಅವನು ಏನು ಮಾಡಿಲ್ಲಾ ಎಂದು ಹೇಳುತ್ತಾಳೆ. ಪಾಪ ಅವರ ಅಮ್ಮ ಅಳುತ್ತಾ ನನ್ನ ಮಗ ಹಾಗೆ ಇಲ್ಲಾ ಅಮ್ಮಾ ಆ ಹುಡುಗಿ ಯಾಕೆ ಹೀಗೆ ಅನ್ನುತ್ತಿದ್ದಾಳೆ ಎನ್ನುತಿರುತ್ತಾರೆ. ಆರಾಧ್ಯ ಸುಳ್ಳು ಹೇಳಿರುವುದನ್ನು ತಿಳಿದ ಐಶ್ವರ್ಯ ಅವಳಿಗೆ ಸಿಟ್ಟು ಬಂದು ಆರಾಧ್ಯಳನ್ನು ಬೈಯುತ್ತಾಳೆ. ಆದರೆ ಅವಳಿಗೆ ಎನ್ ಗೊತ್ತು ಪ್ರೀತಿಯಲ್ಲಿ ಯಾರನ್ನ ಬೇಕಾದರೂ ಕಳ್ಳೋದಿಕೆ ಸಿದ್ದ ಎನ ಮಾಡೋದಿಕು ಸಿಧ್ಧವಾಗಿರುತ್ತಾರೆ ಇದು ಕೇವಲ ಅವರ ಪ್ರೀತಿ ಉಳಿಯಲಿ ಅಂತಾ. ಐಶ್ವರ್ಯ ಅವರ ಮನೇಲಿ ಇದನ್ನೆಲ್ಲಾ ಹೇಳುತ್ತಾಳೆ. ಅದಕ್ಕೆ ಅವರ ಮನೆಯವರು ಪ್ರವೀಣನಿಗೆ ಕರೆಯ ಮುಖಾಂತರ ಕಿರಿಕಿರಿ ನೀಡುತ್ತಾರೆ. ಇದನ್ನು ತಡೆಯುಲಾಗದೆ ಅವನು ಮತ್ತೆ ಆರಾಧ್ಯಾ ಗೆ ಹೇಳುತ್ತಾನೆ ಅವರಿಗೆ ನಾನು ಮಾಡಿಲ್ಲಾ ಎಂದು ಹೇಳು ಎನ್ನುತ್ತಾನೆ ಅದಕ್ಕೆ ಅವಳು ಅವನು ಹೇಳಿದ ಹಾಗೆ ಹೇಳುತ್ತಾಳೆ. ಈಗ ಜಗಳ ಅಂತು ನಿಲ್ಲುತ್ತದೆ ಆದರೆ ಆರಾಧ್ಯ ತುಂಬಾ ಬೈಗುಳ ಕೇಳಬೇಕಾಗುತ್ತದೆ. ಇದರಿಂದ ಪ್ರವೀಣ ಮತ್ತು ಆರಾಧ್ಯ ಇಬ್ಬರಿಗೂ ಬೇಸರ ಆಗುತ್ತದೆ. ಪ್ರವೀಣ ಆವಾಗ ನಾನು ಆರಾಧ್ಯಾಗೆ ಮೋಸ ಮಾಡಬಾರದು ಎ೦ದು ತಿಳಿದು ಆರಾಧ್ಯ ಹತ್ತಿರ ಕ್ಷಮೆ ಕೇಳುತ್ತಾನೆ. ಅದಕ್ಕೆ ಅವಳು ಒಂದು ಅವಕಾಶ ಅವನಿಗೆ ಕೊಡುತ್ತಾಳೆ. ಅವರ ಕಾಲೇಜ ಮುಗಿತಾ ಬಂದಿತ್ತು ಆದರೆ ಆರಾಧ್ಯ ಮನೆಗೆ ಹೋಗಬೇಕಾಗಿ ಬಂತು ಆ ದಿನ ಪ್ರವೀಣನು ಕೂಡ ತುಂಬಾ ಅಳುತ್ತಾನೆ. ಆದರೆ ಆರಾಧ್ಯ ಮನೇಲಿ ಇದು ಗೊತ್ತಾಗಿ ಅವರು ಮನೇಲಿ ಒದು ಎಂದು ಬೈಯುತ್ತಾರೆ. ಎಲ್ಲರಿಗೂ ಗೊತ್ತಿರೋ ಹಾಗೆ ಇಂತಹ ವಿಷಯದಲ್ಲಿ ಮನೇಲಿ ಎಷ್ಟು ಬೈಯುತ್ತಾರೆ ಅಂತ ನಿಮಗೆ ತಿಳಿದಿರುತ್ತೆ ಅದರಲ್ಲು ಹುಡುಗಿಯನ್ನು . ಅವಳಿಗೆ ಮನೇಲಿ ಎಷ್ಟೆ ಕಷ್ಟ ಆದರು ಅವಳು ಪ್ರವಿಣಗಾಗಿ ಸಹಿಸಿಕೊಂಡು ಓದುತ್ತಿರುತ್ತಾಳೆ. ಆದರೆ ಅವಳಿಗೆ ಗೊತ್ತಿರಲಿಲ್ಲ ಪ್ರವೀಣಗೆ ಒಂದು ಅವಕಾಶ ಕೊಟ್ಟಿದಕ್ಕಾಗಿ ಪಶ್ಚಾತಾಪ ಪಡಬೇಕಾಗಿತ್ತು ಎಂದು. ಒಂದು ವರ್ಷ ಕಳೆದ ಬಳಿಕ ಐಶ್ವರ್ಯ ಮತ್ತೇ ಆರಾಧ್ಯಳಿಗೆ ಕರೆ ಮಾಡುತ್ತಾಳೆ ಆದರೆ ಆರಾಧ್ಯ ಗೆ ಅವಳ ಮೇಲಿನ ಕೋಪ ಕಡಿಮೆ ಆಗಿರುವುದಿಲ್ಲ ಏಕೆಂದರೆ ಜಗಳ ಬೇಡ ಇಲ್ಲಿಗೆ ಬಿಡು ಎಂದರು ಅವಳ ಮನೆಯ ವರಿಗೆ ಹೇಳಿ ಪ್ರವೀಣವನ್ನು ಬೈಸಿರುತ್ತಾಳೆ ಮತ್ತು ಆರಾಧ್ಯಳನ್ನು ಸಹ ಬೈದಿರುತ್ತಾಳೆ. ಐಶ್ವರ್ಯ ನೀನು ಪ್ರವೀಣ ಜೊತೆ ಮಾತಾಡ್ತಿಯಾ ಎಂದು ಕೇಳುತ್ತಾಳೆ ಆವಾಗ ಆರಾಧ್ಯ ಹೇದರಿ ಇಲ್ಲಾ ಎಂದು ಹೇಳುತ್ತಾಳೆ ಅವಳು ಇಲ್ಲಾ ಎಂದು ಸುಳ್ಳು ಹೇಳಲು ಎರಡು ಕಾರಣ ಇರುತ್ತದೆ 1) ಅವಳಿಗೆ ಪ್ರವೀಣ ಯಾರಿಗೂ ಹೇಳಬೇಡಾ ನಾವು ಜೊತೆ ಇರುವುದು ಎಂದು ಹೇಳಿರುತ್ತಾನೆ. 2) ಅವಳು ಐಶ್ವರ್ಯ ಇನ್ನೆಲ್ಲಿ ಮತ್ತೆ ಜಗಳ ಮಾಡುತ್ತಾಳೆಂದು ಇಲ್ಲ ಎನ್ನುತ್ತಾಳೆ. ಅವತ್ತು ನಡೆದ ಜಗಳದಲ್ಲಿ ಐಶ್ವರ್ಯಾಳ ಅಪ್ಪ ಪ್ರವೀಣ ಮತ್ತು ಆರಾಧ್ಯ ಗೆ ನಿವಿಬ್ಬರೂ ಐಶ್ವರ್ಯಳ ಸಹವಾಸ ಮಾಡಬಾರದು ಎಂದು ಎಚ್ಚರಿಕೆ ನೀಡಿರುತ್ತಾರೆ. ಐಶ್ವರ್ಯ ಹೇಳುತ್ತಾಳೆ ನಾನು ಪ್ರ ವೀಣ ಪ್ರೀತಿಸುತ್ತಿದೆವೆ ಆದರೆ ಈ ಮಾತನ್ನು ಆರಾಧ್ಯಾ ನಂಬುವುದಿಲ್ಲ ಇದಕ್ಕೆ ಬದಲಾಗಿ ಐರ್ಶಯಳನ್ನು ಬೈದು ಕಳುಹಿ ಸುತ್ತಾಳೆ . ಐಶ್ವರ್ಯ ಮತ್ತೆ ಒಂದು ತಿಂಗಳು ಕಳೆದ ನಂತರ ಕರೆ ಮಾಡಿ ಮತ್ತೆ ಅದೇ ಮಾತನ್ನು ಹೇಳುತ್ತಾಳೆ. ಆವಾಗ ಅವಳು ಪ್ರವೀಣನ್ನು ಕೇಳಿದಾಗ ಐಶ್ವರ್ಯ ಹೇಳಿರುವುದು ನಿಜಾ ಎಂದು ಗೋತ್ತಾಗುತ್ತದೆ. ಅಲ್ಲಿ ಐಶ್ವರ್ಯ ನೋವು ಈ ಕಡೆ ಆರಾಧ್ಯ ಕಲ್ಲು ಮನಸ್ಸು ಇದ್ದರೂ ಕರುಗುತ್ತಿತ್ತು ಅಷ್ಟು ಅತ್ತರು. ಆದರೆ ಇಷ್ಟು ದಿನ ಏನು ತಪ್ಪು ಮಾಡಿದ್ದರು ಕ್ಷಮಿಸಿದ ಆರಾಧ್ಯ ಈಗ ಸುಮ್ಮನೆ ಇರಲಿಲ್ಲ ಅವನನ್ನು ತುಂಬಾ ಬೈದಳು . ಅದಕ್ಕೆ ಪ್ರವೀಣ ನೀನು ನನ್ನ ತುಂಬಾ ಬೈದಿದ್ದಿಯಾ ಎಂದು ನಾ ನಿನ್ನ ಜೊತೆ ಇರಲ್ಲಾ ಎಂದು ಹೇಳಿ ಐಶ್ವರ್ಯ ಜೊತೆ ಇರ್ತಿನಿ ಎಂದು ಹೇಳಿ ಹೋಗಿ ಬಿಡುತ್ತಾನೆ. ಅವತ್ತು ಎಷ್ಟೇ ಆರಾಧ್ಯ ಕೇಳಿಕೊಂಡರು ಇರಲಿಲ್ಲಾ ಅವನು ನೀನು ನನ್ನ ಜೊತೆ ಸರಿ ಇಲ್ಲಾ ಎಂದು ಹೇಳಿ ತಪ್ಪು ಅವನ್ನದ್ದೆ ಇದ್ದರೂ ಹೀಗೆ ಮಾತಾಡಿ ಹೋಗುತ್ತಾರೆ. ಒಂದು ತಿಂಗಳ ನಂತರ ಕಾರಣಾಂತರದಿಂದ ಅವರಿಬ್ಬರೂ ಬೇರೆಯಾಗಿರುತ್ತಾರೆ . ಇಲ್ಲಿ ಆರಾಧ್ಯಗೆ ನಂಬಿಕೆ ಇತ್ತು ಒಂದಲ್ಲಾ ಒಂದು ದಿನ ಬದಲಾಗಿ ಬರಬಹುದು ಎಂದು. ಅವಳ ನಂಬಿಕೆ ತುಂಬಾ ಗಟ್ಟಿ ಇತ್ತು ಅವಳು ಅಂದು ಕೊಂಡ ರೀತಿ ಆಯಿತು ಆದರೆ ಅವಳ ಮನಸ್ಸು ಚೂರು ಆಗಿತ್ತು... ಬರಲಿ ಎಂದು ಕಾಯ್ದಿದ್ದಳು ಆದರೆ ಅವನು ನಿಜವಾಗಿ ನನ್ನ ಪ್ರೀತಿಸಿದರೆ ಅವನಿಗೆ ನಾನು ಬೇಕು ಎಂದು ಹೇಳಬೇಕಾಗಿತ್ತು. ? ಈ ಭಾರಿಯು ನನಗೆ ಮೋಸಾ ಮಾಡಿದರೆ? ಅವನು ನನ್ನ ಪ್ರೀತಿಸಿದ್ದಾ ಅಥವಾ ಇಲ್ಲಾ?ಎಂದು ಮನದಲ್ಲಿ ಹಲವಾರು ಗೊಂದಲಗಳಿದ್ದವು . ಈ ಗೊಂದಲಗಳಿಗೆ ಪರಿಹಾರ ಮತ್ತು ಸಮಾಧಾನ ಅವನು ನೀಡುವ ಉತ್ತರದಲ್ಲಿ ಇದ್ದವು..!
© #ßhree