...

7 views

ಕ್ಷಮಯಾಧರಿತ್ರಿ.‌.‌‌‌...ಹೆಣ್ಣು.
ಗಂಡನಿಗೆ ಮಾತ್ರ ಸಿಟ್ಟು ಬರೋದಾ🤔
ಹೆಂಡತಿಗೆ ಸಿಟ್ಟು ಬರಬಾರದಾ?😊
🌺🌺🌺🌺🌺🌺🌺🌺🌺🌺🌺
ಗಂಡಂಗೆ ಮಾತ್ರ ಸಿಟ್ಟು ಬರೋದಾ?ಹೆಂಡತಿಗೆ ಸಿಟ್ಟು ಬರಬಾರದಾ?
ಉತ್ತಮ ಪ್ರಶ್ನೆ.‌‌.😊😬.ಹೆಂಡತಿಗೂ ಕೋಪ ಬಂದೇ ಬರುತ್ತದೆ.. ಯಾಕೆಂದರೆ ಉಪ್ಪು, ಖಾರ ತಿನ್ನುವ ದೇಹ ಅದೂ ಕೂಡ... ಆದರೆ, ಸಹನಾಮಯಿ, ಕ್ಷಮಯಾಧರಿತ್ರಿ, ಎಂಬೆಲ್ಲಾ ನಾಮಾಂಕಿತ ಧರಿಸಿದ ಮೇಲೆ, ಕೋಪ ಬಂದರೂ ಅವುಡುಗಚ್ಚಿ ಸಹಿಸುವ ಕರ್ಮ ಹೆಣ್ಣಿನದು😬☺️
ಸಾಮಾನ್ಯವಾಗಿ ಗಂಡು ಅಹಂನ ಕೋಳಿಮೊಟ್ಟೆ.‌‌..ತಗ್ಗದು,ಬಗ್ಗದು,ಒರಟುತನದ ದರ್ಪ...ತನ್ನದೇ ತಪ್ಪು ಇದ್ದರೂ ಹೆಂಡಿತಿಯೆಡೆಗೇ ಬೆರಳು ತೋರಿಸುವ ಬಂಢ ಧೈರ್ಯ ಅದರದು...😊.ಬಗ್ಗದ,ತಗ್ಗದ ಗಂಡ ಎನ್ನುವ ವಿಭಿನ್ನ, ವಿರುದ್ದಾತ್ಮಕ ಗುಣ ಸ್ವಭಾವದ ಜೊತೆಯಲ್ಲಿ ಶಾಂತಿ,ಸಹನೆ,ತಾಳ್ಮೆಯುತ ಜೀವನ ನಡೆಸುವ ಹೆಣ್ಣಿನ ಶಕ್ತಿ ನಿಜಕ್ಕೂ ಅತ್ಯದ್ಭುತವೇ ಸರಿ...
ಮನೆಯಲ್ಲಿ ಜಗಳವಾದಾಗ,ಗಂಡನಿಗೆ ವಿಪರೀತ ಕೋಪ ಬಂದಾಗ, ಹೆಂಡತಿ ತೆಪ್ಪಗೆ ಇರುವುದೇ ಒಳಿತು.. ಕಾರಣ, ಗಂಡನ ಕೋಪ ಕ್ಷಣಿಕವಷ್ಟೇ...ಕೋಪ ಇಳಿದ ಮೇಲೆ ತಪ್ಪಿನ ಅರಿವಾಗುತ್ತದೆ... ಗಂಡ, ಕೂಗಾಡುವ ಸಮಯದಲ್ಲಿ ತಾಳ್ಮೆ ತ್ಯಜಿಸಿ ಹೆಂಡತಿ ಕೂಡ ಗಲಾಟೆಗೆ ನಿಂತಳು ಎಂದರೆ, ಬೆಂಕಿಗೆ ಬಿಸಿ ತುಪ್ಪ ಸುರಿದಂತೆ..ಮನೆಯೇ ಧಗಧಗಿಸಿ ಹೋಗುತ್ತದೆ ತಾಪದ ಬೇಗೆಯಲ್ಲಿ...
ಹೌದು ....ಒಮ್ಮೊಮ್ಮೆ ಕೋಪ ಬಂತೆಂದರೆ ಚಾಮುಂಡಿಯೇ ಆಗಬೇಕು ಎನ್ನುವಷ್ಟು ಬರುತ್ತದೆ... ಆದರೆ ನಿಗ್ರಹಿಸಿಕೊಳ್ಳುವ ಶಕ್ತಿ ಅನಿವಾರ್ಯ ಹೆಣ್ಣು ಜೀವಕ್ಕೆ...ಚಪ್ಪಾಳೆ ಒಂದೇ ಕೈಯಿಂದ ಆಗದು...ಅಲ್ವಾ☺️ಹೆಣ್ಣು ಎಷ್ಟು ತಾಳ್ಮೆಯುತ ಜೀವನ ನಡೆಸುತ್ತಾಳೋ,ಅಷ್ಟೇ ಶಾಂತಿಯುತ ಬಾಳ್ವೆ ಸಿಗುತ್ತದೆ ಮನೆ ಮಂದಿಗೆ... ಹೆಂಡತಿಯನ್ನು ಅರ್ಥ ಮಾಡಿಕೊಂಡು ,ಬದುಕುವ ಗಂಡ ದೊರೆತರೆ ಸ್ವಲ್ಪ ಬಾಯಿ ಮಾಡಿದರೂ ಪರವಾಗಿಲ್ಲ... ಗಂಡ ಆ ಕ್ಷಣ ಶಾಂತಿ, ಶಾಂತಿ ಮಂತ್ರ ಪಠಿಸತೊಡಗುತ್ತಾನೆ.😊ಏನೇ ಆದರೂ ಗಂಡು ಜೀವ ಅನುಸರಿಸಿ ನಡೆಯದು ಬಿಡಿ..ಆನೆ ತುಳಿದದ್ದೇ ದಾರಿ ಎಂಬ ಜಾಯಮಾನ ಗಂಡು ಜೀವಕ್ಕೆ... ಗಂಡ ಹೆಂಡತಿ ಸಂಬಂಧದಲ್ಲಿ ಮುಖ್ಯವಾಗಿ ಹಠ,ಕೆಟ್ಟ ಸ್ವಾಭಿಮಾನ, ಅಹಂ ಬಾವಗಳು ನುಗ್ಗಿ ಬಿಟ್ಟರೆ ಬದುಕು ಮೂರಾಬಟ್ಟೆಯೇ ಸರಿ...
ಹೆಣ್ಣು ಮೃದು ಭಾವದವಳು...ಹೊಂದಿಕೊಂಡು ನಡೆಯುವುದು ಅವಳ ರಕ್ತದಲ್ಲೇ ಬಂದಿರುವಂತಹುದು..ಹಾಗಾಗಿ ಏನೇ ಆದರೂ ,ಹೆಣ್ಣು ಹೊಂದಿ ನಡೆದರೇನೇ ಸಂಸಾರ ಸಸಾರ ಎನಿಸೋದು...ಹೊಂದಿಕೊಳ್ಳದೆಯೇ ಕೋಪ ಧರಿಸಿ ನಿಂತರೆ ಸಂಸಾರ ಮುಗಿಯದ ಸಮರವೇ ಆಗಿ ಹೋಗುತ್ತದೆ... ಅದಕ್ಕೆ ಹೆಣ್ಣು ಬಾಳಿನ ಕಣ್ಣು ಎಂದಿದ್ದಾರೆ ಹಿರಿಯರು..
ಹಾಗಾಗಿ ಆದಷ್ಟು ಕೋಪ ತ್ಯಜಿಸಿ ಬಾಳುವುದೇ ಸಮಂಜಸ... ಕೋಪ ಮಾಡಿಕೊಂಡು ಜಗಳಕ್ಕೆ ವೇದಿಕೆ ಕಲ್ಪಿಸಿ ಕೊಡುವ ಬದಲು ,ಪ್ರೀತಿಯಿಂದ ಮನ ಗೆದ್ದರೆ ಬಾಳು ನಿಜಕ್ಕೂ ಬಂಗಾರ... ಪ್ರೀತಿಯಿಂದ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು... ಸ್ವಲ್ಪ ತ್ಯಾಗವೂ ಮಿಳಿತವಾದರೆ,ಖಂಡಿತ ಪ್ರೀತಿಯ ಭಾವ ಅದ್ಭುತವಾದ ಕೆಲಸ ಮಾಡಬಲ್ಲದು...ಸಂಸಾರ ದಲ್ಲಿ ಸರಿಗಮಪ ಸಂಗೀತ ಸುಸ್ವರಕ್ಕೆ ಪ್ರೇಮದ ಶ್ರುತಿ ಹೊಮ್ಮಲೇಬೇಕು ಸುಮಧುರವಾಗಿ...ಮುನಿಸಿನ ಅಪಶ್ರುತಿ ಬದುಕಿನ ಖುಷಿಯನ್ನು ಕೆಡಿಸುವಂತೆ ಇರಬಾರದು..
ಗಂಡ ,ಹೆಂಡತಿ ವಿಭಿನ್ನ ವ್ಯಕ್ತಿತ್ವ ಹೊಂದಿದರೂ,ಅವರೊಳಗಿನ ಒಲವು ,ಎಲ್ಲವನ್ನೂ ಸೈರಸಿ,ಇಷ್ಟ ಪಡುವಂತೆ ಸಹಜವಾಗಿಯೇ ಪರಿವರ್ತಿಸಿಬಿಡುತ್ತದೆ ಇಬ್ಬರನ್ನೂ.... ಯಾವಾಗ ಒಬ್ಬರಲ್ಲೊಬ್ಬರು ಐಕ್ಯತೆ ಹೊಂದುವಷ್ಟು ,ಅವರಲ್ಲಿ ಒಲವ ಭಾವ ಸ್ಪುರಿಸುತ್ತದೋ ,ಆಗಲೇ ಹಾಲು ಜೇನು ಒಂದಾದ ರೀತಿಯಲಿ ದಾಂಪತ್ಯ ಕೂಡ ಸವಿಯಿಂದ ಕೂಡಿರುತ್ತದೆ... ಕೆಲವೊಮ್ಮೆ ಚಿಕ್ಕ ಪುಟ್ಟ ಮನಸ್ಥಾಪಗಳೂ ಅಷ್ಟೊಂದು ರೀತಿಯಲ್ಲಿ ಕಲಹಕ್ಕೆ ಎಡೆ ಮಾಡದೇ ಆರಿ ಹೋಗುತ್ತವೆ...ಹರಿವ ಒಲವಿನ ಹರಿವಿನೊಳಗೆ...ಹಾಗಾಗಿ ಹೆಂಡತಿಗೆ ಕೋಪ ಬಂದರೂ, ಸಹಜತೆಯಲ್ಲಿ ನುಂಗಿಕೊಂಡು ಬಾಳುವ ಕಲೆ ಕರಗತವಾಗಲೇಬೇಕು..ಅನಿವಾರ್ಯ ಕೂಡ... ಹೆಂಡತಿ ,ತಗ್ಗಿ, ಬಗ್ಗಿ ನಡೆದ ಮಾತ್ರಕ್ಕೆ, ಅಥವಾ ಎಲ್ಲದಕ್ಕೂ ಅವಳೇ ಹೊಂದಿಕೊಂಡು ನಡೆಯುತ್ತಾಳೆಂದರೆ,ಅವಳದು ಅಸ್ಥಿರತೆಯ ಅಸ್ಥಿತ್ವ ಎಂದಲ್ಲ... ಬದಲಿಗೆ ,ಮನೆ ಎಂಬುದು, ನಂದಗೋಕುಲವಾಗಿ ಇರಲಿ ಎಂಬ ಕಾರಣಕ್ಕೆ... ತನ್ನ ತಪ್ಪು ಇರದಿದ್ದರೂ ..ಜಗಳ ,ಮುನಿಸಿನಿಂದ ದೂರ ಇರುತ್ತಾಳೆಂದರೆ...ಅವಳು, ಸ್ವಾಭಿಮಾನ ಕೊಂದು ಬದುಕ್ತಾ ಇದಾಳೆ ಎಂಬ ಅರ್ಥ ಅಲ್ಲ... ಗಂಡನನ್ನು ಅಷ್ಟು ಬಲವಾಗಿ ಪ್ರೀತಿಸುತ್ತಾಳೆ ಎಂಬ ಅರ್ಥ... ತಾಯಿ, ಮಕ್ಕಳು ತಪ್ಪು ಮಾಡಿದಾಗ ,ಹೇಗೆ ಕ್ಷಮಿಸಿ ದೊಡ್ಡತನವನ್ನು ಮೆರೆಯುವಳೋ,ಹಾಗೇ ಹೆಂಡತಿ ಕೂಡ.. ಅವಳೊಳಗೆ ಇರುವ ಮಾತೃವಾತ್ಸಲ್ಯ ಜಾಗೃತವಾಗಿ,ಗಂಡನ ತಪ್ಪುಗಳನ್ನು ಕ್ಷಮಿಸುವಂತೆ ಮಾಡಿಬಿಡುತ್ತದೆ...(ಇಲ್ಲಿ ತಪ್ಪು ದಾರಿಯಲ್ಲಿ ನಡೆವ ,ಸಂಸಾರದ ಭಾರ ಹೊರದೇ ,ಹೆಂಡತಿಯನ್ನು ಚೆನ್ನಾಗಿ ನೋಡಿ ಕೊಳ್ಳದ ಗಂಡು ಜೀವಗಳ ಹೊರತಾಗಿ, ಮಾತ್ರ ಹೇಳಹೊರಟ ವಿಷಯ 😊ಯಾಕೆಂದರೆ ಇಲ್ಲಿ ಹೆಂಡತಿಯರು ಖಂಡಿತ ರಣಚಂಡಿ ಅವತಾರ ತಾಳುವುದು ಅನಿವಾರ್ಯ ಕೂಡ😊😬)
ಇಂದಿನ ,ಅಥವಾ ಈಕ್ಷಣದ ಜೀವನವನ್ನು ಮಾತ್ರ ಹೆಣ್ಣು ಯೋಚಿಸಿ ನಿರ್ಧರಿಸಳು ಬದುಕನ್ನು.. ಯಾಕೆಂದರೆ
ಬದುಕು ಈ ಕ್ಷಣದ್ದು ಮಾತ್ರ ಅಲ್ಲ....ಮುಂದಿನ ದಿನಗಳು, ಮಕ್ಕಳು, ಮರಿಗಳು,ಮೊಮ್ಮಕ್ಕಳು ಎಲ್ಲ ಸ್ಥರವೂ ಈ ಸಂಸಾರ ರಥದ ಚಕ್ರಗಳಾದ ಗಂಡ ಹೆಂಡತಿ ಎಂಬ ಗಾಲಿಗಳ ಬಲದ ಮೇಲೇ ನಿಂತಿವೆ....
✍️ಶೋಭಾ ನಾರಾಯಣ ಹೆಗಡೆ. ಶಿರಸಿ.