...

5 views

ನಾಟಕದ ಜೀವನ ಏತಕೆ??
ನಾಟಕ ಎಂದರೇನೆ ಎಲ್ಲರಿಗೂ ತಿಳಿದುಬಿಡುತ್ತದೆ ಅದರ ಅರ್ಥ ಏನೆಂದು. ನಾಟಕ ಮಾಡುವುದು. ಮುಖವಾಡ ಒಳಗೊಂದು ಹೊರಗೊಂದು ಎಂಬಂತೆ. ಇದೇನಿದು ಅಂತ್ಯವಿಲ್ಲದ ನಾಟಕ.. ಕೊನೆ ಉಸಿರಿರುವ ತನಕವೂ ನಾಟಕ ಮಾಡಿಕೊಂಡೇ ಬದುಕುವುದಾ? ಅಥವಾ ಒಮ್ಮೆ ಹೇಳಿದ ಸುಳ್ಳನ್ನು ಮುಚ್ಚಿಡಲು ಮೇಲಿಂದ ಮೇಲೆ ಸುಳ್ಳು ಹೇಳುವುದಾ??

ಜೀವನವೇ ಒಂದು ನಾಟಕರಂಗ. ನಾವೆಲ್ಲರೂ ಪಾತ್ರಧಾರಿಗಳು. ನಟನೆ ಕಲಿಸುವವ ಮೇಲಿದ್ದಾನೆ. ಗೊಬೆಯಾಟದಂತೆ ಗೊಂಬೆಗಳ ಕುಣಿಸುತ್ತಲೇ ಇರುತ್ತಾನೆ.. ನಮ್ಮದೋ ಇಷ್ಟವಿಲ್ಲದಿದ್ದರೂ ಕುಣಿಯುವ ಪರಿಸ್ಥಿತಿ. ಈ ಜೀವನವೇ ಹಾಗೆ. ನಮ್ಮ ಆಸೆ ಕನಸುಗಳಿಗೆ ಬೆಲೆ ಇಲ್ಲ. ಇನ್ನೊಬ್ಬರು ಹೇಳಿದಂತೆ ನಡೆಯುವುದೇ ಆಗುತ್ತದೆ. ಕುಣಿಸುವವರು ನಮ್ಮ ಸುತ್ತಮುತ್ತಲೇ ಇರುವರು. ಅವರ ಒತ್ತಾಯಕ್ಕೆ ಕೆಲಸ ಮಾಡಬೇಕಾಗುತ್ತದೆ. ನಮಗೆ ಇಷ್ಟವಾಗಿಯಲ್ಲ.

ಅದೇ ಸಮಸ್ಯೆ ನೋಡಿ‌. ಯಾವುದೇ ಕೆಲಸ ಕಾರ್ಯ ಪ್ರಾಜೆಕ್ಟ್ ತೆಗೆದುಕೊಳ್ಳಬೇಕಾದರೂ ಅದು ನಮ್ಮ ಆಯ್ಕೆಯಾಗಿದ್ದರೆ ಇನ್ನಷ್ಟು ಪ್ರಯತ್ನದಿ.ಮದ ಉತ್ಸಾಹದಿಂದ ಕೆಲಸ ಮಾಡಬಹುದು. ಅದೇ ಇನ್ನೊಬ್ಬರು ಹೇಳಿದರೆಂದು ನಾವು ಮಾಡಲು ಹೊರಟರೆ ಕೆಲಸ ಮಾಡಿ ಮುಗಿಸಬಹುದು. ಆದರೆ ಮನಸ್ಸು ಅಷ್ಟು ಖುಷಿಯಾಗಿರುವುದಿಲ್ಲ‌.

ನಿಲ್ಲದ ನಾಟಕ ಇನ್ನಿಲ್ಲದ ನಾಟಕ ಏಕೆ??

ಬೇರೆಯವರ ಮೆಚ್ಚಿಸಲೋ ಅಥವಾ ಅವರಿಂದ ಲಾಭಪಡೆಯಲೋ ಯಾವಾಗಲೂ ಹಲ್ಲುಕಿರಿಯುತ್ತ ನಿಲ್ಲಿಯುವುದು, ಲೆಕ್ಕಕ್ಕಿಂತ ಜಾಸ್ತಿ ಹೊಗಳುವುದು ಏತಕೆ..? ನಾಚಿಕೆಯಿಲ್ಲವೇ? ಎಷ್ಟು ದಿ‌ ಹೀಗೆ ಇನ್ನೊಬ್ಬರಿಂದ ಲಾಭ ಪಡೆದು ಬದುಕುತ್ತೀರಿ? ಸ್ವಾಭಿಮಾನ ಇಲ್ಲವೇ?? ನಿಮ್ಮ ಗೌರವವನ್ನು ನೀವೇ ಉಳಿಸಿಕೊಳ್ಳಬೇಕು.

ಇನ್ನೊಂದು
ಏಕೆ ಈ ರೀತಿ ಬದುಕಬೇಕು? ನಾವು ಯೋಚಿಸಿದಂತೆ ಏನೂ ನಡೆಯದೇ ಹೋದಾಗ ಎಷ್ಟು ಸಂಕಟವಾಗುವುದಲ್ಲವೇ?? ಆದರೂ ನಗುವಿನ ಮುಖವಾಡ ತೊಟ್ಟು ಬದುಕುತ್ತಿರುತ್ತೇವೆ. ನಮ್ಮ ಕನಸನ್ನು ಸಾಕಾರಗೊಳಿಸಲು ಅದರಂತೆ ಬದುಕಲು ಅವಕಾಶ ಸಿಗಬೇಕು. ಆಗ ಆತ್ಮತೃಪ್ತಿಯಾಗುತ್ತದೆ. ಮನಸ್ಸು ಖುಷಿಯಿಂದಿರುತ್ತದೆ. ಹಾಗೆಯೇ ಹೃದಯ ತನ್ನ ಬಡಿತವನ್ನು ಖುಷಿಯಿಂದಲೇ ನಿಲ್ಲಿಸಬಹುದು.

ಕಾಯಬೇಕು‌ ಉತ್ತಮ ಸಮಯಕ್ಕಾಗಿ ಕಾಯಬೇಕು.

ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava