...

2 views

ಒಂಟಿತನ
ಅದು ಯಾಕೋ ಇತ್ತಿಚಿಗೆ ನನ್ನ ಮನಸ್ಸಲ್ಲಿ ಏನೊ ಒಂದು ಹೋರಾಟ.
ನನ್ನ ನಂಗೆ ಅರ್ಥ ಮಾಡ್ಕೊಳೋಕೆ ಆಗ್ತಿಲ್ಲ. ಹಾಗೆ ನನ್ನ ಪರಸ್ತಿತಿ, ಮನಸ್ತಿತಿ ಅದು ಕೂಡ ಅರ್ಥ ಮಾಡ್ಕೊಳೋಕೆ ಆಗ್ತಿಲ್ಲ. ನನ್ನ ಪ್ರಕಾರ ನಾನೇ ಸರಿ, ಹಾಗಂತ ಬೇರೆಯವ್ರು ತಪ್ಪು ಅಂತಲ್ಲಾ. ಬೇರೆ ಅವರ ಮಾತು ನಂಗೆ ನೋವು ಕೊಡ್ತಿವೆ. ಇದು ಯಾವುದೇ ಸಮಸ್ಯೆ ಅಲ್ಲ. ಆದ್ರೆ ಅದ್ಯಾಕೋ ಎಲ್ರೂ ಇದ್ರು ಮತ್ತೆ ನಂಗೆ ನಾನು ಒಂಟಿ ಅನಸ್ತಿದೆ. ಒಂಟಿ ಆಗ್ತಿದಿನಾ ನಾನು, ನನ್ನವರನ್ನು ಅರ್ಥ ಮಾಡ್ಕೊಳದೆ ಇರೋವಂತ ಮನಸ್ತಿತಿ ಯಾಕೆ ನಂಗೆ , ಅಥವಾ ಬೇರೆ ಅವರಿಗೆ ಅರ್ಥ ಆಗದೇ ಇರೋವಂತ ಪರಸ್ತಿತಿ ಅದ್ರೂ ಯಾಕೆ. ನಾನೂ ಕೆಟ್ಟೊಳು ಅಲ್ಲ. ಒಂದ್ ಟೈಮ್ ಅಲ್ಲಿ ಯಾರೇ ಏನ ಅಂದ್ರು ಸುಮ್ನೆ ಇರ್ತಿದ್ದಂತ, ಯಾರೇ ನಂಗ್ ಕೆಟ್ಟದ್ ಮಾಡಿದ್ರೂ ತಿರಗಾ ಅವರಿಗೆ ಕೆಟ್ಟದ್ ಬಯಸದೆ , ಎಲ್ರೂ ಸಾವಿರ ಮಾತಾಡಿದ್ರು ಮೌನಿ ಆಗಿ ಕೂತು ಒಂದ್ ಮಾತು ತಿರಗಿ ಮಾತನಾಡದೆ, ಕೋಪ-ನೋವು-ಹತಾಶೆ- ತೋರಿಸದೆ, ಎಲ್ಲದ್ದಕಿಂತ ಹೆಚ್ಚಾಗಿ ಮೌನಿಯಾಗಿ ಮೂಕಿ ಆಗಿದ್ದೋಳು ನಾನು,. ನಿರೀಕ್ಷೆಗಳೇ ಇಲ್ಲದೇ ಅರ್ಥ ಇಲ್ಲದೇ ಜೀವನ ನಾ ನಡಸ್ತಿದ್ದೋಳು ನಾನು(ನನ್ನೋರಿಗಾಗಿ). ಇವಾಗ ಅದರ ವಿರುದ್ಧ ಹಾದಿಯಲ್ಲಿ ನಡಿತಿದೀನಿ ಅನಸ್ತಿದೆ.
ಇವತ್ತಿಗೂ ನಾ ಯಾರ್ಗೂ ಕೆಟ್ಟದ್ ಬೈಸ್ತಿಲ್ಲ, ಆದ್ರೆ ನಂಗ್ ಮಾತ್ರ ಯಾಕ್ ಕೆಟ್ಟದ್ ಆಗ್ತಿದೆ. ಎಲ್ಲವು ಇದ್ದು ಏನು ಇಲ್ಲ ಅನ್ನೋ ಯೋಚನೆ ನನ್ನ ಶಾಶ್ವತವಾಗಿ ಮೌನಿ ಅನ್ನಾಗಿ ಮಾಡತ್ತಾ? ಅಥವಾ ನಿರೀಕ್ಷೆಗಳು ಮನಸ್ಸನ್ನು ನೋಯಿಸುತ್ತವಾ? ಹೌದು ನಿರೀಕ್ಷೆಗಳು ನೋವುಂಟುಮಾಡುತ್ತವೆ ಆದರೆ ನನ್ನ ನಿರೀಕ್ಷೆಗಳು ಪ್ರೀತಿ ಮಾತ್ರಾ. ಪ್ರೀತಿ ಬಯಸೋದು ತಪ್ಪಾ ಅಥವಾ ಪ್ರೀತಿ ಕೊಡೋದು ತಪ್ಪಾ? ಆಥವ ನೆರವಾಗಿ ಮಾತಾಡೋದೆ ತಪ್ಪಾ.ಎಲ್ಲವೂ ಇದ್ದು ಮತ್ತೆ ಒಂಟಿ ಆಗ್ಬಿಟ್ಟೆ ಅನಸ್ತಿದೆ. ಒಂಟಿತನದಲ್ಲಿ ನನ್ನ ಅಜ್ಜಿ ಮಾತ್ರ ನೆನಪಾಗ್ತಾಳೆ ನಂಗೆ. ಅವಳ ಜೊತೆ ನಾನು ಹೋಗ್ಬಿಡ್ಬೇಕಿತ್ತು ಅಂತಾ. ಈಗ್ಲು ಬಂದು ಕರ್ಕೊಂಡ್ ಹೋಗ್ತೀಯಾ? ಯಾಕಂದ್ರೆ ನಿನ್ನ ತರಾ ಪ್ರೀತಿ ಕೊಡೋರು ಯಾರೂ ಇಲ್ಲ ಈ ಭೂಮಿ ಮೇಲೆ. ಮತ್ತೆ ಒಂಟಿ ಆಗ್ಬಿಟ್ಟೆ ನನ್ನಲ್ಲಿ ನಾನು.