...

0 views

ತಲೆ ಕೂದಲು ಉದುರುವ ಸಮಸ್ಯೆಗೆ ಜಸ್ಟ್ ಹೀಗೆ ಮಾಡಿ, ಸಮಸ್ಯೆ ಪರಿಹಾರವಾಗುತ್ತೆ
.ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಗಂಡು-ಹೆಣ್ಣು ಎನ್ನುವ ಬೇಧ ಭಾವ ಇಲ್ಲದೆ ಇಬ್ಬರಲ್ಲಿಯೂ ಕೂಡ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾಗಂತ ಈ ಸಮಸ್ಯೆಗೆ ದುಬಾರಿ ಖರ್ಚು ಮಾಡುವ ಬದಲು, ಕೆಲವೊಂದು ಮನೆಮದ್ದುಗಳ ಸಹಾಯದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ ಎಷ್ಟು ಚೆಂದ ಅಲ್ಲವೆ? ಎಲ್ಲರಿಗೂ ಕೂಡ ಇದೇ ಆಸೆ ಇರುತ್ತದೆ.ಆದರೆ ಈಗಿನ ಕಾಲದ ಯುವ ಜನತೆಯರು ಈ ಭಾಗ್ಯವನ್ನು ಪಡೆದಿಲ್ಲ! ಯಾಕೆಂದ್ರೆ ಸಾಕಷ್ಟು ಜನರಿಗೆ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಬಹಳ ಬೇಗನೆ ಉದುರಿ ಹೋಗುತ್ತಿದೆ. ಅದರಲ್ಲೂ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ,ಸಣ್ಣ ವಯಸ್ಸಿನಲ್ಲಿಯೇ, ವಯಸ್ಸಾದವರಂತೆ ಕಾಣುತ್ತಾರೆ!ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚ ಬೇಕು,ಯಾವ ಶ್ಯಾಂಪೂ ಬಳಸಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಿರಲಿ ನೈಸರ್ಗಿಕವಾಗಿ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವಾರು ಮಾರ್ಗಗಳಿವೆ ಎಲ್ಲಾಕ್ಕಿಂತ ಪ್ರಮುಖವಾಗಿ ಕಡಿಮೆ ಖರ್ಚಿನಲ್ಲಿ ಕೂದಲುದುರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಕೊಳ್ಳಬಹುದು.
ಸ್ನಾನಕ್ಕೂ ಮುನ್ನ ತಲೆಗೆ ಚೆನ್ನಾಗಿ ಶುದ್ಧ ತೆಂಗಿನ ಎಣ್ಣೆ ಹಚ್ಚಿಕೊಂಡು, ನಿಮ್ಮ ಎರಡೂ ಕೈಗಳಿಂದ ಕೂದಲ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡಗಳವ ರೆಗೂ ಕೂಡ ನಯವಾಗಿ ಮಸಾಜ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಇದರಿಂದ ತಲೆಯ ನೆತ್ತಿಭಾಗದಲ್ಲಿ ಹೆಚ್ಚಿನ ರಕ್ತ ಸಂಚಾರ ದೊರಕುತ್ತದೆ, ಇದರಿಂದ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆ ಸಿಕ್ಕಂತಾಗುತ್ತದೆ ತನ್ಮೂಲಕ ಕೂದಲ ಬೆಳವಣಿ ಗೆಯೂ ಚೆನ್ನಾಗಿರುತ್ತದೆ ಹಾಗೂ ಕೂದಲು ದುರುವಿಕೆ ತಾನಾಗಿ ಕಡಿಮೆಯಾಗುತ್ತದೆ.​ನಮಗೆಲ್ಲಾ ಗೊತ್ತೇ ಇರುವ ಹಾಗೆ ನೆಲ್ಲಿಕಾಯಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಕಂಡು ಬರುತ್ತದೆ. ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ನೆಲ್ಲಿಕಾಯಿಯಲ್ಲಿ ಕಂಡು ಬರುವ ವಿಟಮಿನ್ ಸಿ ಅಂಶವು, ತಲೆಯ ನೆತ್ತಿಯ ಭಾಗದಲ್ಲಿ ರಕ್ತ ಸಂಚಾ ರವನ್ನು ಹೆಚ್ಚು ಮಾಡಿ, ತಲೆಕೂದಲಿಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವುದು.