ಸಾವರ್ಕರ್..
ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.
24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ...