...

13 views

ನೆನ್ನೆ ನೆನಪು
ಕೆಲವೊಂದು ಕಥೆಗಳಿಗೆ ಕೊನೆ ಇರಲ್ಲ ಅಂತಾರೆ..
ಕೆಲವೊಂದು ಆರಂಭದಲ್ಲೇ ಅಂತ್ಯ ಆಗಿರುತ್ತೆ..
ಇನ್ನ ಕೆಲವೊಂದು ಸಂಪೂರ್ಣ ಮುಗಿದ್ರು ಅಪೂರ್ಣವಾಗಿ ಇನ್ನ ಏನೋ ಬೇಕಿತ್ತು ಅನ್ಸುತ್ತೆ..
ಇನ್ನೊಂದೊಂದು ಕಥೆಗಳ ಆಳ ಎಷ್ಟಿರುತೆ ಅಂದ್ರೆ ಓದೊವಾಗ ನಾವೇ ಆ ಪಾತ್ರದಲ್ಲಿ ಜೀವಿಸ್ತಿವೇನೋ ಅನ್ನೋ ಅಷ್ಟು, ಅಲ್ಲಿ ಅವರಿಗೆ ಬೇಜಾರಾದ್ರೆ ನಮ್ ಕಣ್ಣಲಿ ನೀರು, ಅವ್ರಿಗೆ ಖುಶಿ ಆದ್ರೆ ನಮ್ ಮುಖದಲ್ಲಿ ಮಂದಹಾಸ..ಯಾಕ್ ಕೇಳ್ತೀರಾ ಒಮ್ಮೊಮ್ಮೆ
ನಮ್ ನಿಜವಾದ ಹೆಸರೇ ಮರ್ತೋಗಿರ್ತಿವಿ
ಕಥೆ ಮುಗುದ್ರು ನಾವಿನ್ನೂ ಆ ಪಾತ್ರದಿಂದ ಆಚೆ ಬಂದಿರಲ್ಲ.. ಈಗ ನಾನ್ ಬರೆಯೋ ಕಥೆ ಕಲ್ಪನೆ ಆಗಿದ್ರು ಇಲ್ಲಿ ನಾನೆ ಆ ಪಾತ್ರ ಆಗಿದಿನಿ ಯಾಕಂದ್ರೆ ಪ್ರತಿ ಸಲ "ಅವಳು ಅವಳು" ಅಂತ ಹೇಳಕ್ಕೆ ಆಗಲ್ಲ ಗುರು
ನಾನೊಂತು ಅದೆಷ್ಟು ಸಲ ಓದುತ್ತಿನೊ ಗೊತ್ತಿಲ್ಲಾ ನಮ್ ಸ್ಟೇಟಸ್ ನಾವೇ ಬೇರೆ ಅವರಿಗಿಂತ ಜಾಸ್ತಿ ನೋಡೋ ಹಾಗೆ..

ಈ ಕಥೆನಲ್ಲಿ ನಾನು ಅವಳಾಗಿದಿನಿ (ಕಥೆಯ ಕಲ್ಪನೆಯ ಪಾತ್ರ ಹೆಸ್ರು ನಿಮಗೆ ಇಷ್ಟ ಆಗಿದ್ದು ಇಡಿ )

ನಮ್ಗೆ ಯಾವಾಗದ್ರು ಬೇಜಾರಾದ್ರೆ ಯಾರ್ ಹತ್ರ ಆದ್ರೂ ಹೇಳ್ಕೋಳೋಣ ಅನ್ಸುತ್ತೆ.
ನಮ್ಗೆ ಸೀರಿಯಸ್ ಅನ್ಸೋ ವಿಷಯ ಅವ್ರಿಗೆ ಸಿಲ್ಲಿ ಅನ್ಸುತ್ತೆ,
ಅವ್ರಿಗೆ ಅವರವರದ್ದೆ ಹೆಚ್ಚು ಅನ್ಸುತ್ತೆ
ಹಾಗಾಗಿ ಯಾರ್ಗೂ ಹೇಳ್ಬೇಕು ಅಂತ ಅನ್ಸಲ್ಲ..
ಆ ಸಮಯದಲ್ಲಿ ಜೊತೆಯಾಗಿದ್ದು ಖಾಲಿ ಹಾಳೆ ಹಾಗು ಭಾರವಾದ ಮನಸ್ಸು ಹಗುರಾಗಿಸಿದ್ದು ಕಥೆ ಕವನ ಹಾಗಾಗಿ ಕಥೆ ಕವನ ಅಂದ್ರೆ ಪ್ರಾಣ
ಜೊತೆಗೆ ದಿನ ಖುಶಿ ಆಗ್ಲಿ ಬೇಜರಾಗಲಿ ಡೈರಿ ಬರೆಯೋ ಅಭ್ಯಾಸ

ಇವತ್ತಿನ ಖುಷಿನೆಲ್ಲ ಬರೀಬೇಕು ಅನ್ಸ್ತಿದೆ ಅಂತ ಬ್ಯಾಗ್ ತೆಗ್ದು ಪುಸ್ತಕ ಉಡ್ಕುದ್ರೆ ಅಲ್ಲಿ ಇಲ್ವೇ ಇಲ್ಲ ಎಲ್ಲಾ ಕಡೆನು ಹುಡುಕಿದ್ರೂ ಸಿಗಲಿಲ್ಲ
ಬೆಂಗಳೂರಲ್ಲಿ ಎಕ್ಸಾಮ್ ಬರಿಯಕ್ ಹೋದವಳು ಅಲ್ಲಿ ಎಲ್ಲಿ ಬಿಟ್ನೋ ನೆನ್ಪಾಗ್ತಿಲ್ಲ ಅಂತ ಬೇಜಾರು ಅದು ಇನೊಬ್ರು ಕೈಗೆ ಸೇರಿರುತ್ತೆ..

ತೆಗಿಲೋ ಬೇಡ್ವೋ ಒದ್ಲೋ ಬೇಡ್ವೋ ಅನ್ನೋ ಮನಸ್ಸಿನಲ್ಲಿ ತೆಗಿತನೆ(ಯಾರು ಅಂತ ಮುಂದೆ ನೋಡಣ)
ಓಪನ್ ಮಾಡಿದ ತಕ್ಷಣ ರಂಗಾಗಿ ಚಿತ್ರ ಬರ್ದು ನಡುವಲ್ಲಿ "ನೆನ್ನೆ ನೆನಪು" ಅಂತಾ ಇರುತ್ತೆ ಓದೋ ಕುತೂಹಲ ಜಾಸ್ತಿ ಆಗಿ ಓದುತ್ತಾ ಹೋಗ್ತಾನೆ..

ಆರಂಭದಲ್ಲಿ
ಯಾಕೋ ಗೊತ್ತಿಲ್ಲಾ,
ನೆನಪುಗಳನ್ನ ಕೂಡಿ ಇಡಕ್ಕೊ
ಮುಂದೆ ಒಂದಿನ ಬೇಜಾರಾದಾಗ ಓದಿ ನಗಕ್ಕೊ
ಅಥವ ಮುದ್ಕಿ ಆದಾಗ
ಮಕ್ಕಳಿಗೊ, ಮೊಮ್ಮಕ್ಕಳಿಗೋ ಕಥೆ ಹೇಳಕ್ಕೊ "ಆ ದಿನಗಳ" ನೆನಪುಗಳನ್ನ ಪದಗಳಾಗಿಸಿ ಮೆಲುಕು ಹಾಕೊ ಪ್ರಯತ್ನ ..
(ಇಷ್ಟು ಓದಿ ಅಲ್ಲಿಗೆ ನಿಲ್ಸ್ಬೇಕು ಅನ್ಸ್ಲಿಲ್ಲ, ಹಾಗೇ ಓದುತ್ತ ಹೋಗ್ತಾನೆ)

ನಾವು ಇಲ್ಲಿ ತನಕ ತುಂಬಾ ಜನಗಳ ಜೊತೆ ಮಾತಡಿದಿವಿ
ಅದ್ರಲ್ಲಿ ಎಷ್ಟೊಂದು ಜನರನ್ನ ಈಗಾಗಲೇ ಮರೆತೂ ಹೋಗಿದ್ದಿವಿ
ಹಾ ಒಬೊಬ್ರು ಹೆಸ್ರು ಕೇಳ್ದಾಗ ಅಥವ ಮುಖ ಪರಿಚಯದಿಂದ ನೆನ್ಪಾಗುತ್ತೆ
ಒಮ್ಮೊಮ್ಮೆ ಎಲ್ಲೋ ನೋಡಿದಿನಲ ಅನ್ಸುತ್ತೆ ಆದ್ರೆ ಹೆಸ್ರು ನೆನ್ಪಾಗಲ್ಲ ಮತ್ತೆ ಏನ್ ಹೆಸ್ರು ಅಂತ ಕೆಳಕ್ಕೂ ಅಜೀಬ್ ಅನ್ಸುತ್ತೆ
ಹಾಗೇ ಇನ್ನಾ ಕೆಲವೊಬ್ರು ಎಷ್ಟೇ ಪ್ರಯತ್ನ ಪಟ್ಟು ಮರಿಬೇಕು ಅಂಕೊಂಡ್ರು ಮರಿಯಕ್ ಆಗ್ದೆ ಮನಸಲ್ಲೇ ಉಳ್ಕೊಂಡ್ಬಿರ್ತರೆ
ಹಾಗೇ ಮರೆತವರ ನೆನಪಿಸಲು
ನೆನಪಲಿ ಇರುವವರ ನೆನೆಯಲು
ನನ್ನ ನಾ ಅರಿಯಲು
ನೆನ್ನೆಯ ನಾಳೆಯಲಿ ಹುಡುಕಲು
ಈ ನೆನ್ನೆ ನೆನಪು... ಅಂತ ಇರುತ್ತೆ
- ಸಿಹಿ
© All Rights Reserved