...

8 views

ನಿಜವಾದ ಶ್ರೀಮಂತಿಕೆ
ಬಡವರ ಜೀವನ ಈಗ ಶ್ರೀಮಂತರ
ಫ್ಯಾಷನ್ ಆಗತಿದೆ....
ಉದಾಹರಣೆಗೆ.....
ಬ್ಲ್ಯಾಕ್ ಟೀ
ಬೆಲ್ಲದ ಚಹಾ
ಒಲೆ ಮೇಲಿನ ಅಡಿಗೆ
ರೊಟ್ಟಿ ಚಟ್ನಿಪುಡಿ
ಹರಿದ ಪ್ಯಾಂಟ್
ಎತ್ತಿನ ಗಾಡಿ
ಮನೆಲಿ ದೇಶಿ ಆಕಳು ಸಾಕೊದು
ಪಾಲಿಷ್ ಮಾಡದೇ ಇರುವ ಕಾಳುಗಳು...
ಸಿರಿ ಧಾನ್ಯಗಳು,,,
ಹಿಂಗೆ ಇನ್ನೂ ಎನೆನೋ....
ಅದಕ್ಕೆ ಹೇಳೊದು ಬಡವರೇ ನಿಜವಾದ ಶ್ರೀಮಂತರು...

ಮಂದಿಗೆ ಒಂಥರಾ ಹುಚ್ಚ ಹತೈತಿ, ಹಳ್ಳಿಗೆ ಹೋಗಾಕ ಹಿಂದ ಮುಂದ ಮಾಡತಾರ, ಅದ ರಜಾ ದಿನಾ ಇದ್ದಾಗ agro tourism, ಹಳ್ಳಿಮನೆ ಹಂಗ ಎನೆನೋ ಹುಡಕೊಂಡ ಹೋಗತಾರ. ಅಲ್ಲಿ ಹೋಗಿ ಅದೆನ ಖರೆನ ಹೊಲದಾಗ ಕೆಲಸಾ ಮಾಡತಾರ ಅನ್ನು ಹಂಗ ಫೋಜ್ ಕೊಡತಾರ. ಟ್ರೆಡಿಶನಲ್ಡೇ ಅಂತಾ ಹಳ್ಳಿ ವೇಷಭೂಷ.
ಈಗ ಇನ್ನೊಂದ ಟ್ರೆಂಡ್ ಶುರು ಐತಿ,,, ರೋಡಮ್ಯಾಲ ಭಿಕಾರಿ ಗೆಟಪದಾಗ ಫೋಟೊಶೂಟ್, ರೀಲ್ಸ್ ಮಾಡುದು.  ಎನ ಜನಾನೋ ಎನೋ.
ಮೊದಲ ಹಂಚಿಬೊಟ್ಟ ಚುಚ್ಚಕೊಳ್ಳೊದ ಅಂದರ ಹಳ್ಳಿದಾವರ ಅಂತ ಆಡಕೊಳ್ಳಾವರ ಈಗ ಸಿಕ್ಕ ಸಿಕ್ಕಲ್ಲೆಲ್ಲಾ ಟ್ಯಾಟೂ ಹಾಕಸಕೊತಾರ.
ಮನ್ಯಾಗ ನೆಲದ ಮ್ಯಾಲ ಕೂತ ಊಟಾ ಮಾಡಾಕ ಬರದಾವರೂ agro tourismದಾಗ ಕೆಳಗ ಕೂತ ಬಾಳಿ ಎಲಿ, ಪತ್ರಾವಳಿದಾಗ ಊಟ ಮಾಡತಾರ.
ಮನ್ಯಾಗ ಹೋಟಲದಾಗಿನ ಅಡಗಿ ಮಾಡುದ, ಮತ್ತ ಹೊರಗ ಮನೆ ಊಟ ಹುಡಕೊದು,
ಮನ್ಯಾಗ ಅವ್ವ ಅಪ್ಪಗ ಊಟ ಹಾಕದಾವರು, ವೃಧ್ಧಾಶ್ರಮದಾಗ ಹೋಗಿ ಬರ್ತಡೇ ಆಚರಸಕೊತಾರ.
ಮಕ್ಕಳನ್ನ ಬೇಬಿ ಸಿಟರ್ ಕಡೆ ಬಿಡಾವರ ಮಕ್ಕಳ ಬರ್ತಡೇ ಅನಾಥಾಶ್ರಮದಾಗ ಮಾಡತಾರ..
ಒಮ್ಮೆರೆ ಹಳ್ಳಿಗೆ ಹೋಗಿ ಅಪ್ಪ ಅವ್ವನ ಜೊತಿ ಕಳಿರಿ, ಅವರಿಗೆ ಸಹಾಯ ಮಾಡರಿ, ಮಕ್ಕಳಿಗೆ ಅಜ್ಜ ಅಜ್ಜಿ ಜೊತೆ ಇರಾಕ ಕೊಡರಿ.
ಅದ ಬಿಟ್ಟ ಈ #ಟ್ರೆಂಡ್ ಬೆನ್ನ ಹತ್ತ ಬ್ಯಾಡರಿ.
ಕಲಿಗಾಲವಯ್ಯಾ,,,,🤦



© S_lines