...

7 views

ಬೀದಿ ನಾಯಿಗಳ ಪಾಡಿದು...
ಹೊರಗಡೆ ಟ್ರಿಪ್ ಹೋದಾಗ,ಅಥವಾ ದಿನನಿತ್ಯದ ಓಡಾಟದ ಸಮಯದಲ್ಲಿ,..ಕಣ್ಣಿಗೆ ಕಾಣುವ ಬೀದಿನಾಯಿಗಳನ್ನು ಅನುಕಂಪದ ದೃಷ್ಟಿಯಿಂದ ನೋಡಿ, ಅವಕ್ಕೆ ,ಬಿಸ್ಕತ್ ಹಾಕುವುದು ಸರ್ವೇಸಾಮಾನ್ಯ...
ಆದರೆ ಇದರಿಂದ ಉಪಯೋಗ ಎಷ್ಟು?ನಾನೇ ಕಣ್ಣಾರೆ ನೋಡುವಂತೆ, ನನ್ನ ಶಾಪಿಗೆ ಬರುವ ನೂರಾರು ಮಂದಿಯಲ್ಲಿ ಹಲವಾರು ಮಂದಿ ಈ ಕಾಯಕಕ್ಕೆ ನಿಷ್ಠಾಬದ್ಧರಾಗಿದಾರೆ...ಎಲ್ಲರೂ 5,10ರೂಪಾಯಿಯ ಟೈಗರ್ ಬಿಸ್ಕತ್, ಇಲ್ಲ, ಪಾರ್ಲೇಜಿ ಹಾಕೋದು ಸಾಮಾನ್ಯ ಎನಿಸಿ ಬಿಟ್ಟಿದೆ...ಆ ನಾಯಿಗಳು ಇಡೀದಿನ ಈ ಬಿಸ್ಕತ್ ತಿಂದು ಬದುಕುವುದು ಎಷ್ಟರ ಮಟ್ಟಿಗೆ ಸರಿ?
ಜನರಿಗೆ ಹೇಗಾಗಿದೆ ಎಂದರೆ, ಸಹಾಯ ಮಾಡಬೇಕು.. ಆದರೆ ಕಡಿಮೆ ಖರ್ಚು ಆಗಬೇಕು ಅನ್ನುವ ತರಹದ ಗೀಳು...
ಉದಾಹರಣೆಗೆ ನಮ್ಮ ಅಂಗಡಿಯನ್ನೇ ತೆಗೆದುಕೊಂಡರೆ,ಬಿಸ್ಕತ್, ಹಾಲು,ಅನ್ನ ಎಲ್ಲಾ ಸಿಗುತ್ತದೆ... ನೀರೂ ಹಾಕಬಹುದು ..ತಪ್ಪಿಲ್ಲ.. ಎಷ್ಟೋ ಬೀದಿ ನಾಯಿಗಳಿಗೆ ನೀರೂ ಗತಿ ಇರದು ಕುಡಿಯಲು...‌ಹಾಲೂ ಹಾಕಬಹುದು.. ಅನ್ನವನ್ನೂ ಹಾಕಬಹುದು... ಬಂದವರೆಲ್ಲ ಬಿಸ್ಕತ್ ಮಾತ್ರ ಹಾಕ್ತಾ ಇದ್ರೆ,ಆ ನಾಯಿಗಳ ಪಾಡೇನು?
ಯಾಕೋ ಜನರ ಯೋಚನೆಯ ಗತಿಯೇ ಸರಿ ಎನಿಸದು ಒಮ್ಮೊಮ್ಮೆ... ತಾವು ತಿನ್ನುವ ತುತ್ತಿನಲ್ಲೇ ಒಂದು ತುತ್ತು ಹಾಕಿದರೂ ,ಖುಷಿಯಿಂದ ತಿಂದು ಹೋಗುತ್ತವೆ ಅವು...ಅದು ಬಿಟ್ಟು, ಬರೀ ಬಿಸ್ಕತ್ ಎಸೆದರೆ ಅವುಗಳ ಹೊಟ್ಟೆ ತುಂಬುವುದೇ?
ನನ್ನ ಅಂಗಡಿಯ ಉದಾಹರಣೆ ಅಷ್ಟೇ ಅಲ್ಲ... ಎಲ್ಲಿ ಬೇಕಾದರೂ ನೋಡಿ...ಅಲ್ಲಲ್ಲಿ ಬೇಕರಿ,ಹೋಟೇಲ್ ನಂತಹ ಸ್ಥಳದಲ್ಲಿ ನಿಂತ ವ್ಯಕ್ತಿಗಳು,ನಾಯಿಗೆ ಬಿಸ್ಕತ್ ಹಾಕಿ ಖುಷಿ ಪಡುತ್ತಾರೆ...ಅವಕ್ಕೋ ತಿಂದು ತಿಂದು ವಾಂತಿ ಬರುವಷ್ಟು ಅಸಹ್ಯ ಎನಿಸಿರುತ್ತದೆ...
ಇವತ್ತು ಬೆಳಿಗ್ಗೆ ಒಬ್ಬ ತಾತ ಅಂಗಡಿಗೆ ಬಂದ...ಅವನ ಕೈಯಲ್ಲಿ ಪಾರ್ಲೇಜಿ ಬಿಸ್ಕತ್ ಪ್ಯಾಕ್... ಒಂದು ಟೀ ತಗೋಂಡು ಕುಡಿಯತೊಡಗಿದ..ಅಲ್ಲೇ ರೋಡಿನಲ್ಲಿ ಒಂದು ಬೀದಿ ನಾಯಿ ,ಮಲಗಿತ್ತು.. ಕರೆದ ತಾತ...ಬರಲಿಲ್ಲ ಅದು...ನೋಡಿತ್ತಲ್ಲ ತಾತನ ಕೈಯಲ್ಲಿ ಬಿಸ್ಕತ್😬..ಮತ್ತೆ ಕರೆದ....ಬರಲಿಲ್ಲ ನಾಯಿ...ಅವನೇ ಅದರ ಬಳಿಗೆ ಹೋಗಿ,ಬಿಸ್ಕತ್ ಒಂದಿಷ್ಟು ಹಾಕಿದ...ನಾಯಿ ,ಮೂಸಿಯೂ ನೋಡಲಿಲ್ಲ...😂ಯಾಕೆಂದರೆ ದಿನ ಅದೇ ಅದಕ್ಕೆ ಆಹಾರ... ಬೇಜಾರು ಬರದೇ ಇರುತ್ತದೆಯೇ😬...ಇವನು ಬಯ್ದುಕೊಂಡ...ಕೊಬ್ಬು. ಹಾಕಿದ್ರೂ ತಿನ್ನಲ್ಲ ಅಂತ...😂.

ಅದಕ್ಕೆ, ಮಾಡಿದರೆ,ಉಪಯೋಗ ಆಗುವಂತಹ ಕೆಲಸ ಮಾಡಬೇಕು... ಮಾಡಿದಂತೆಯೂ ಆಗಬೇಕು ,ಮಾಡಿಲ್ಲ ಎನ್ನುವ ಹಾಗೆಯೂ ಆಗಬಾರದು ಅನ್ನುವ ಕಾಯಕ ಎಂದಿಗೂ ಮಾಡಬಾರದು...ನಮ್ಮ ಬಳಿ ಆ ಶಕ್ತಿ ಇದೆ ಎಂದರೆ, ಅದು ಚೆನ್ನಾಗಿ ಉಪಯೋಗ ಆಗುವಂತೆ ಮಾಡಬೇಕು ...ಇಲ್ಲ ಎಂದರೆ,ಮಾಡಲೇಬಾರದು...ಯಾಕೆಂದರೆ ಅವುಗಳು ಹುಟ್ಟಿದ ಮೇಲೆ, ಆಹಾರ ಹುಡುಕಿ ತಿನ್ನುವ ಸಾಮರ್ಥ್ಯ ಕೂಡ, ಆ ಭಗವಂತ ದಯಪಾಲಿಸಿ ಇರುತ್ತಾನೆ...ಅದಕ್ಕೆ, "ಹುಟ್ಟಿಸಿದ ದೇವ ,ಹುಲ್ಲು ಮೇಯಿಸಲಾರ"ಎಂದಿದ್ದು ಹಿರಿಯರು.... ಕೊಟ್ಟರೆ ಹೊಟ್ಟೆ ತುಂಬಿ ಸಂತೃಪ್ತಿಯಲಿ ಹರಸುವಂತೆ ಇರಬೇಕು... ಮತ್ತೂ ಅವುಗಳ ಆರೋಗ್ಯಕ್ಕೆ ಮಾರಕ ನಾವೇ ಆಗಬಾರದು....
ದಯವಿಟ್ಟು ನನ್ನದೊಂದು ವಿಜ್ಞಾಪನೆ 🙏ಬರೀ ಬಿಸ್ಕತ್ ಹಾಕಬೇಡಿ ನಾಯಿಗಳಿಗೆ... ಅವುಗಳ ಆರೋಗ್ಯ ಹದಗೆಡಬಹುದು ಇದರಿಂದ... ಮೂಕ ಪ್ರಾಣಿಗಳ ರೋಧನೆ ಕೂಡ ಅರ್ಥ ಆಗದು ನಮಗೆ..ಹಾಗಾಗಿ, ಹಾಕಲೇಬೇಕು ಎನಿಸಿದರೆ,ಆರೋಗ್ಯ ಕ್ಕೆ ಒಳಿತಾಗುವ ತಿಂಡಿ ಹಾಕಿ....ನಮ್ಮ ಹಾಗೇ ಪ್ರಾಣಿಗಳೂ ಕೂಡ.... ನಮ್ಮ ಬಗ್ಗೆ ಇರುವ ಕಾಳಜಿ ,ಅವುಗಳ ಮೇಲೂ ಇರಲಿ...🙏
✍️ಪೂರ್ವವಾಹಿನಿ.