...

2 views

ದಾವಣಗೆರೆ ಜಿಲ್ಲೆಯ ಸ್ಥಾಪನೆ
ಚಿತ್ರದುರ್ಗ ಜಿಲ್ಲೆಯನ್ನು ವಿಭಜಿಸಿ 1997 ರಲ್ಲಿ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ಹೊಸದಾಗಿ ರಚನೆಯಾದ ಜಿಲ್ಲೆ ಗೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳನ್ನು ಸೇರಿಸಲಾಯಿತು. ಈ ಜಿಲ್ಲೆಯು 6 ತಾಲೂಕು ಗಳನ್ನು ಹೊಂದಿದೆ ಅವುಗಳು ಯಾವುದೆಂದೆರೆ: ಹರಿಹರ, ಹರಪನಹಳ್ಳಿ, ಚನ್ನಗಿರಿ, ಹೊನ್ನಾಳಿ, ಜಗಳೂರು, ಮತ್ತು ದಾವಣಗೆರೆ. ದಾವಣಗೆರೆ ನಗರವು ಕರ್ನಾಟಕ ದ ಮ್ಯಾಂಚೆಸ್ಟರ್ ಎಂಬ ಹೆಸರನ್ನು ಪಡೆದಿತ್ತು ಇದು 1960 ರ ದಶಕದಲ್ಲಿ ಜವಳಿ ಉತ್ಪನ್ನಕ್ಕೆ ಹೆಸರುವಾಸಿಯಾಗಿತ್ತು ಆದರೆ ಕಚ್ಚಾ ಹತ್ತಿಯ ಕೊರತೆ ಇಂದ ಜವಳಿ ಮಿಲ್ಲುಗಳೆಲ್ಲ ಈಗ ಮುಚ್ಚಿ ಹೋಗಿವೆ. ಇಂದು ಜಿಲ್ಲೆಯಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಕೆಲಸ ಮಾಡುತ್ತಿವೆ. ನೂರಾರು ಆಹಾರ ಸಂಸ್ಕಾರಣ ಘಟಕಗಳು ಕಾರ್ಯ ನಿರ್ವಹಿಸುತಿವೆ. ಕರ್ನಾಟಕ ದ ಪ್ರಸಿದ್ಧ ಶಿಕ್ಷಣ ಕೇಂದ್ರ ಎಂಬ ಹೆಸರನ್ನು ಅದು ಗಳಸಿದೆ. ಪ್ರಸಿದ್ಧ ಬಾಪೂಜಿ ಶಿಕ್ಷಣ ಸಂಸ್ಥೆಯು ಇಲ್ಲಿದೆ. ಇಡೀ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಕೆರೆ ಶಾಂತಿ ಸಾಗರ ಚನ್ನಗಿರಿಯಲ್ಲಿ ಇದೆ ಇದರ ಸುತ್ತಳತೆ ಸುಮಾರು 64 ಕಿಲೋಮೀಟರ್ಗಳು. ಹರಿಹರ ನಗರದಲ್ಲಿ ಹೊಯ್ಸಳ ಕಾಲದ ಹರಿಹರೇಶ್ವರ ದೇವಾಲಯವಿದೆ.... ಕರ್ನಾಟಕದ ಒಂದು ಪ್ರಸಿದ್ಧ ಜಿಲ್ಲೆ ಇದಾಗಿದೆ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಇತಿಹಾಸಿಕ ನಗರ ದಾವಣಗೆರೆ ಆಗಿದೆ ಇಂದಿನ ಮುಖ್ಯಮಂತ್ರಿ ಶ್ರೀ ಎಚ್ ಪಾಟೀಲ್ ಕುಂದವಾಡ ಕೆರೆಯು ನಗರದ ಜನರಿಗೆ ಹತ್ತಿರವಾಗಿದೆ ಕೊಂಡಜ್ಜಿಯ ಅರಣ್ಯ ಧಮವಿದೆ ಪುರಾತನ ಭಗಲಿ ಕಲ್ಲೇಶ್ವರ ದೇವಾಲಯವಿದೆ ನೀಲಗುಂದದ ಭೀಮೇಶ್ವರ ದೇವಾಲಯಗಳು ಉಕ್ಕಡಗಾತ್ರಿ ಕರಿ ಬಸವೇಶ್ವರ ಅಜ್ಜನ ದೇವಾಲಯವಿದೆ ನಂದಿಗುಡಿ ಹಿಂದಿನ ಕಾಲದ ವೃಷಭ ಮಠ