...

4 views

ಕವಳದ ಬಟ್ಲು.....
#ಕವಳದ್ಬಟ್ಟಲು

ತಮ್ಮ ,ಕವಳ ಬಟ್ಲು ಎಲ್ಲಿ ಇಟ್ಟಿದ್ಯ !ಚೊಲೋ ಮಾಡಿ ಕವಳ ಹಾಕೇಬುಡನ ಒಂದ ಹೇಳ್ತವ ಗಂಗಜ್ಜಿ ಜಗ್ಲಿ ಮೇಲೆಲ್ಲಾ ಕವಳ ಬಟ್ಲ ಹುಡುಕೇ ಹುಡುಕ್ತು ಎಲ್ಲೂ ಸಿಕ್ಕಿದ್ದೇ ಇಲ್ಲೆ!ಅಯ್ಯೋ ಒಳ್ಳೆ ಪಜೀತಿ ಆತಲೀ ಈಗ!ಇಷ್ಟೊತ್ತಿಗೆ ಎರಡು ಕವಳ ಹಾಕಾಗ್ತಿತ್ತು ಮನೇಲಿ ಇದ್ದಿದ್ರೆ !ಗೊಣಗುಡ್ತಾ ಸೋಪಾದ್ಮೇಲೆ ಕೂತ್ಗಂಡಚು ಗಂಗಜ್ಜಿ!ಪಾತ್ರ ತೊಳದ ಒದ್ದೆ ಕೈ ಒರಸ್ತವ ಕುಸುಮಕ್ಕ ಆಯೀ ಹುಡುಕ್ಯತ್ತವ ಜಗಲೀಗೆ ಬಂತು!ಅಯ್ಯ ಎಂತ ಹಾಂಗೆ ಒಬ್ಬನೇ ಕೂತ್ಗಂಜೇ ಆಯೀ !ಎಲ್ಲ ಎಲ್ಲಿ ನೆಡದ ನಿನ್ನ ಒಬ್ಬನೇ ಬಿಟ್ಟಿಕ್ಕೆ !ಕವಳ ಹಾಕಿದ್ದಿಲ್ಯ ಎಂತು ಕೇಳಚು!

ಅಯ್ಯ ತಂಗಿ ನಿಮ್ಮಲ್ಲಿ ಕವಳ ಬಟ್ಲೇ ಇಲ್ಯಲೆ !ಬರೀ ಆ ಮಧು,ಅದೆಂತೋ ಎಮ್ ಡಿ ಅಂಬ್ವಲೇ ಸುಡ್ಗಾಡು !,ಎನ್ನತ್ರೆ ಹೇಳಲೂ ಬತ್ತಿಲ್ಲೆ ಹೇಳಿ ದೊಡ್ಡ ಬಾಯಿ ಮಾಡಿ ನೆಗ್ಯಾಡ್ತವ😂😂 ಇನ್ನೆಲ್ಲಿಂದ ಕವಳ ಹಾಕದೇ ಅಲವತ್ತುಕಂಡ್ಚು ಗಂಗಜ್ಜೀ!ಥೋ ನಿನ್ನೆನೇ ಹೇಳಿದ್ನೇ ಸುಟ್ಟು ಮಾಣಿಗೇ !ನಾಳೆ ಅಜ್ಜನ್ಮನೆ ಅಜ್ಜಿ ಬತ್ತು ಮಗ ,ಅಟ್ಟದ ಮ್ಯಾಲಿಂದವ ಕವಳ ಬಟ್ಲ ತೆಕ್ಕ ಬಾ ಹೇಳಿ!ಹೇಳ್ದಕೂಡ್ಲೇ ಅಡ್ಡಿಲ್ಯೇ ಅಮ್ಮ ಅಂದ ! ಮಾಣಿ ತೆಕ್ಕ ಬಂದು ರೆಡೀ ಮಾಡಿ ಇಟ್ಟಿದ್ದ ಮಾಡಿಗಿದ್ನಲೇ !ತಡೀ ಆನೇ ಹೋಗಿ ಹುಡುಕ್ಯ ಬಂದು ರೆಡೀ ಮಾಡಿ ಕೊಡ್ತಿ ಹೇಳ್ಕ್ಯತ್ತವ ಕುಸುಮಕ್ಕ ಅಟ್ಟ ಹತ್ತಚು!

ಎಲ್ಲ ಧೂಳ್ ಹಿಡ್ದ ಸಾಮಾನು!ಕೊಕ ಕೊಕ ಕೆಮ್ಮು ಬೇರೆ ಆ ಧೂಳಿಗೆ!ಅಂತೂ ಮರದ ಚಂದದ ಕವಳ ಬಟ್ಲು ಸಿಕ್ಚು!ಕವಳ ಬಟ್ಲಿಗೆ ಉಸರುಗಟ್ಟಿ ಸಾಯ ಹಂಗೇ ಆಗಿತ್ತು ಆ ಕರೀ ಕಸ್ಲೆ ಅಟ್ಟದ ಮೇಲೆ!ಯಾರೋ ತನ್ನ ಹೊರಗೆ ಎಳದು ತೆಗೆದಂಗೆ ಆತು !ಖುಷಿಂದವ 😂😂🤑ಒಂದ್ಸಲ ದೊಡ್ಡ ಸ್ವಾಸ ತೆಗತ್ತು ಕವಳ ಬಟ್ಲು!ಮೈ ಕೈಯೆಲ್ಲ ಕೊಡಕ್ಯಂಡಚು !ಕುಸುಮಕ್ಕ ಕವಳ ಬಟ್ಲು ತಂದು ಚೊಕ್ಕ ಮಾಡಿ ತೊಳದು ಅದಕ್ಕೆ ಎಲೆ ,ಸುಣ್ಣ ,ಅಡಕೆ,ಹೊಗೆಸೊಪ್ಪು ,ಅಡಗತ್ತರಿ,ತುಂಬಿ ಚಂದ ಮಾಡಿ ಸಿಂಗಾರ ಮಾಡಿ ಗಂಗಜ್ಜಿಗೆ ಕೊಟ್ಚು!ಗಂಗಜ್ಜಿಗೆ ಖುಷಿಯೋ ಖುಷಿ🤓😂😂!ಕವಳ ಬಟ್ಲ ನೋಡಿ!ಈಗ ಈ ಜಗಲಿಗೆ ಒಂದು ಕಳೆ ಬಂತು ನೊಡೇ ತಂಗಿ!ಕವಳ ಬಟ್ಲ ನಮ್ಮ ಹವ್ಯಕರ ಮನೆ ಜಗ್ಲಿಗೆ ಶೋಭೆ ತಂಗಿ!ಇದೊಂದನಮ್ನಿ ಉಪಚರಿಸ ಬಟ್ಲು ಇದ್ದಂಗೇಯ !ಇನ್ಮೇಲೆ ಅಟ್ದ ಮ್ಯಾಲೇ ಒಗಿಯಡ !ಹೇಳಿ ಬುದ್ಧಿ ಹೇಳಚು ಮಗಳಿಗೆ ಗಂಗಜ್ಜಿ!ಅಂತೂ ಈ ಮನೇಲಿ ಮತ್ತೆ ತಂಗೂ ಒಂದು ಕಾಲ ಬಂತಲಿ ಹೇಳಿ ಕವಳ ಬಟ್ಲು ಖುಷಿಯಿಂದವ ಗಂಗಜ್ಜಿ ಬಾಯಿಂದ ಇಳೀತಾ ಇರ ಕೆಂಪು ಕವಳದ ರಸ ನೋಡಿ ಪಕ್ಕನೆ ನಕ್ಕಚು!😂😂😂!
..........ಪೂರ್ವವಾಹಿನಿ.‌........